ಹಿರೇನಗನೂರು ಹಾಗೂ ಚುಕ್ಕನಟ್ಟಿ ಸರಕಾರಿ ಶಾಲೆಯ ಸುದೀರ್ಷ 61 ನೇ. ವರ್ಷದ – ಗುರು ವಂದನಾ ಮತ್ತು ವಜ್ರ ಮಹೋತ್ಸವ ಕಾರ್ಯಕ್ರಮ.

ಹಟ್ಟಿ ಚಿನ್ನದ ಗಣಿ ಜು.18

ಗುರು ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ ಅವರು ವಿದ್ಯಾರ್ಥಿ ಜೀವನದ ಪಾಠದ ಜೊತೆಗೆ ಜೀವನ ದಾರಿಯನ್ನು ತೋರಿಸುವ ದಿವ್ಯ ಜೋತಿ.

ಅಂತಹ ಮಹಾ ಬೆಳಕನ್ನ 60 – 65 ವರ್ಷದಿಂದ ಹಿರೇನಗನೂರು ಮತ್ತು ಚುಕ್ಕನಟ್ಟಿ ಗ್ರಾಮದಲ್ಲಿ ನೀಡಿದ ಮತ್ತು ಅಕ್ಷರದ ಬೀಜ ಬಿತ್ತಿ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಎಲ್ಲಾ ಗೌರವಾನ್ವಿತ ಗುರುಗಳಿಗೆ ಕೃತಜ್ಞತೆ ಮತ್ತು ಗೌರವ ಸಮರ್ಪಣಾ ಭಾವದ ಉದ್ದೇಶದಿಂದ ಗುರು ವಂದನಾ ಕಾರ್ಯಕ್ರಮ ಮತ್ತು ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಹಟ್ಟಿ ಚಿನ್ನದ ಗಣಿಯ ಹತ್ತಿರದ ಹಿರೇನಗನೂರು ಮತ್ತು ಚುಕ್ಕನಟ್ಟಿ ಗ್ರಾಮದ ಎಲ್ಲಾ ಹಿರಿಯರು ಹಾಗೂ ವಿದ್ಯಾರ್ಥಿ ಬಳಗದಿಂದ ಐತಿಹಾಸಿಕವಾಗಿ ಇದೇ ದಿನಾಂಕ 19-7 -2026 ರವಿವಾರ ದಂದು ಅದ್ದೂರಿಯಾಗಿ ನೆಡಸಲು ತೀರ್ಮಾನಿಸಲಾಗಿದೆ.

ಹಿರೇನಗನೂರು ಗ್ರಾಮದಲ್ಲಿ ಪ್ರಥಮವಾಗಿ ಅನೌಪಚಾರಿಕ ಶಿಕ್ಷಣ ಪ್ರಾರಂಭವಾಗಿದ್ದು ಮೌಲಸಾಬ್ ಮಾಸ್ತರರಿಂದ ಹನಮಪ್ಪ ದೇವಸ್ಥಾನ ಹಾಗೂ,ಬಸವಣ್ಣನ ಗುಡಿಯಲ್ಲಿ ಆರಂಭವಾಗಿ ಅಧಿಕೃತವಾಗಿ 1965-66 ನೇ. ಶೈಕ್ಷಣಿಕ ಸಾಲಿನಲ್ಲಿ ಶ್ರೀಯುತ ವಿರುಪಾಕ್ಷಪ್ಪ ಶಿಕ್ಷಕರಿಂದ ಆರಂಭ ಗೊಂಡು.

ನಂತರದಲ್ಲಿ ಗುರಪ್ಪ ಶ್ರೀ ಪಂಪಣ್ಣ ಬಾಳೆಕಾಯಿ, ದಿವಂಗತ ಶ್ರೀ ದ್ಯಾಮನಗೌಡ, ಶ್ರೀ ಎನ್ ಸಂಗಪ್ಪ, ಶ್ರೀ ಭಾಸ್ಕರ್ ಎಂ ಪತ್ತಾರ್, ಶ್ರೀಮತಿ ಶ್ರೀದೇವಿ ಕುಲ್ಕರ್ಣಿ, ಶ್ರೀ ಹುಸೇನಪ್ಪ ಮುಂಡರಗಿ, ದಿವಂಗತ ಹನಮಂತಪ್ಪ, ಶ್ರೀ ಶಂಕರಲಿಂಗಪ್ಪ, ಶ್ರೀ ಸಾದಿಕ್ ಅಲಿ, ಶ್ರೀ ಮಲ್ಲಪ್ಪ, ಶ್ರೀಮತಿ ವಿದ್ಯಾ, ಶ್ರೀಮತಿ ಗೀತಾ, ಶ್ರೀಮತಿ ಗಂಗಮ್ಮ ನಂತರದಲ್ಲಿ ಈರಣ್ಣ ಹೂಗಾರ, ಶೀಲವಂತಪ್ಪ, ಶ್ರೀಮತಿ ಪ್ಯಾರಿಬೇಗಂ, ಇನ್ನು ಚುಕನಟ್ಟಿ ಗ್ರಾಮಕ್ಕೆ ಪ್ರತ್ಯೇಕವಾಗಿ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗಿದ್ದು.

1998-99 ನೇ. ಸಾಲಿನಲ್ಲಿ ಶ್ರೀಯುತ ಯಲಗುರೇಶ ಕುಲಕರ್ಣಿ, ಶ್ರೀ ಬಸವರಾಜ ದಂಡೋಲಿ, ಶ್ರೀಮತಿ ಸುಶೀಲಾ, ಶ್ರೀಮತಿ ನಾಗರತ್ನಮ್ಮ, ಶ್ರೀ ಪ್ರಕಾಶ ರಜಪೂತ್, ಮತ್ತೊಂದೆಡೆ ಗ್ರಾಮವು ಬೆಳೆ ಬೆಳೆಯುತ್ತಾ ಬುದ್ಧಿ ಜೀವಿಗಳು ಮತ್ತು ಹೋರಾಟಗಾರ ಫಲವಾಗಿ ಸರಕಾರಿ ಪ್ರೌಢ ಶಾಲೆ ಮಜೂರಾಗಿ ಬಂದಿತು.

ಈ ಪ್ರೌಢ ಶಾಲೆಯಲ್ಲಿ ಮೊದಲಿಗೆ ಶ್ರೀ ಭೀಮಣ್ಣ ಜುಲಗುಡ್ಡ,ಶ್ರೀ ರಾಘವೇಂದ್ರ,ಶ್ರೀ ಶರಣಪ್ಪ ಬೀರಾದಾರ, ಶ್ರೀ ಗೋಪಿಚಂದ್ ಆದಿಯಾಗಿ ಇನ್ನೂ ಅನೇಕರು ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುವ ಶಿಕ್ಷಕರು ಅಕ್ಷರದ ಬೀಜ ಬಿತ್ತಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದರು.

ನಮ್ಮೂರಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಮತ್ತು ಬೇರೆ ಕಡೆ ವರ್ಗಾವಣೆ ಗೊಂಡ ಇನ್ನೂ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ನೋಡುವುದೇ ಒಂದು ಸೌಭಾಗ್ಯ, ಮತ್ತು ಸಂಭ್ರಮ, ಅವರುಗಳ ಕೈಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಅಂದರೆ ನಮ್ಮೂರಿನ ಯುವ ಕಣ್ಮಣಿಗಳು ದೊಡ್ಡ ದೊಡ್ಡ ಹುದ್ದೆ ಪಡೆದು ಕೊಂಡಿದ್ದಾರೆ.

ಎಂ.ಬಿ.ಬಿ ಎಸ್,ಎಂ ಡಿ, ಬಿಡಿಎಸ್, ಡಿ.ಡಿ,ಮಕ್ಕಳ ಕಲ್ಯಾಣ ಇಲಾಖೆ, ಸಿಡಿಪಿಒ, ಪಿಡಿಒ, ಬಿಲ್ ಕಲೆಕ್ಟರ್, ಶಿಕ್ಷಕರು, ಪೊಲೀಸರು, ಜೆಸ್ಕಾಂ ವಿಭಾಗ, ಕೆ.ಎಸ್.ಆರ್.ಟಿ.ಸಿ/ ಬಿ.ಎಂ.ಟಿ.ಸಿ, ಅನೇಕ ಖಾಸಗಿ ಸಂಸ್ಥೆಗಳು, ಸ್ವಂತ ಬಂಡವಾದ ಮೂಲಕ ಸ್ವಯಂ ಉದ್ಯೋಗ ಆರಂಭಿಸಿದ್ದು ಉಂಟು. ಇದಕ್ಕೆಲ್ಲ ನಮ್ಮ ಗುರು ವೃಂದವನ್ನು ನೆನೆಯಲೇ ಬೇಕು ಅದಕ್ಕಾಗಿಯೇ ಈ ಗುರು ಶಿಷ್ಯರ ಸಮಾಗಮ ಕಾರ್ಯಕ್ರಮ ನಡೆಸಲು ನಿಶ್ಚಯಿಸಲಾಗಿದೆ.

ನಮ್ಮೂರಿನ ಎಲ್ಲಾ ಹಳೆ ವಿಧ್ಯಾರ್ಥಿ ಬಳಗ ಬನ್ನಿ, ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮವರನ್ನೂ ಕರೆತನ್ನಿ ಗುರುಗಳ ಆಶೀರ್ವಾದ ಪಡೆದು ನಾವೆಲ್ಲರೂ ಪುನೀತ ರಾಗೋಣ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button