🚨BREAKING NEWS ಬ್ರೇಕಿಂಗ್ ನ್ಯೂಸ್🚨ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ನೇಮಕಕ್ಕೆ ಒತ್ತಾಯ – ಹೈಕಮಾಂಡ್ ಗೆ ಅಜಿತ್ ಕುಮಾರ್ ಶೆಟ್ಟಿ ಆಗ್ರಹ..!
ಉಡುಪಿ ಜು.18

ಜಿಲ್ಲಾ ಕಾಂಗ್ರೆಸ್ ಸಮಿತಿಯ ಚುಕ್ಕಾಣಿಯನ್ನು ಹಿರಿಯ ನಾಯಕ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರಿಗೆ ವಹಿಸಬೇಕೆಂಬ ಬೇಡಿಕೆ ಇದೀಗ ತೀವ್ರ ಗೊಂಡಿದ್ದು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ “ಅಜಿತ್ ಕುಮಾರ್ ಶೆಟ್ಟಿ” ಅವರು ಪಕ್ಷದ ವರಿಷ್ಠರಿಗೆ ಬಲವಾಗಿ ಒತ್ತಾಯಿಸಿದ್ದಾರೆ.
ಈ ಕುರಿತು ಪಕ್ಷದ ಹೈಕಮಾಂಡ್‌ಗೆ ಮನವಿ ಸಲ್ಲಿಸಿರುವ ಅಜಿತ್ ಕುಮಾರ್ ಶೆಟ್ಟಿ, ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗಾಗಿ ಈ ಬದಲಾವಣೆ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.
ನಾಲ್ಕು ದಶಕಗಳ ನಿಷ್ಠೆ:-
ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕಾಗಿ ಬದ್ಧತೆಯಿಂದ ದುಡಿಯುತ್ತಿರುವ, ಡಿಸಿಸಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷರೂ ಆಗಿರುವ ಕಿಶನ್ ಹೆಗ್ಡೆ ಅವರು, ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಅವರ ಅನುಭವ ಮತ್ತು ಪಕ್ಷದ ಮೇಲಿನ ಬದ್ಧತೆ ನಮಗೆ ಮಾದರಿಯಾಗಿದೆ ಎಂದು ಅಜಿತ್ ಕುಮಾರ್ ಶೆಟ್ಟಿ ಬಣ್ಣಿಸಿದ್ದಾರೆ.
ಹಳೆಯ ಭರವಸೆಯ ಜಾರಿಗಾಗಿ ಮನವಿ:-
2024 ರ ಏಪ್ರಿಲ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಶನ್ ಹೆಗ್ಡೆ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಂದು ತಡೆ ಹಿಡಿಯಲಾಗಿದ್ದ ನೇಮಕಾತಿಯನ್ನು, ಚುನಾವಣೆ ಮುಗಿದ ನಂತರ ಜಾರಿ ಗೊಳಿಸುವ ಭರವಸೆ ನೀಡಲಾಗಿತ್ತು.
ಆ ಭರವಸೆ ಈವರೆಗೂ ಈಡೇರದಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದ್ದು, ತಕ್ಷಣವೇ ಈ ಆದೇಶವನ್ನು ಕಾರ್ಯಗತ ಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಪಕ್ಷ ಸಂಘಟನೆಗೆ ಅನಿವಾರ್ಯ:-
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮರು ಸಂಘಟಿಸಲು ಮತ್ತು ಬಿಜೆಪಿಯ ಜನ ವಿರೋಧಿ ನೀತಿಗಳ ವಿರುದ್ಧ ಸಮರ್ಥವಾಗಿ ಹೋರಾಡಲು ಕಿಶನ್ ಹೆಗ್ಡೆ ಅವರಂತಹ ಅನುಭವಿ ನಾಯಕರ ನೇತೃತ್ವ ಅತ್ಯಗತ್ಯ.
ಪಕ್ಷದ ಶಿಸ್ತನ್ನು ಪಾಲಿಸುತ್ತಾ ಬಂದಿರುವ ನಿಷ್ಠಾವಂತ ನಾಯಕರಿಗೆ ನ್ಯಾಯ ಒದಗಿಸುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ತುಂಬಬೇಕು ಎಂದು ಅಜಿತ್ ಕುಮಾರ್ ಶೆಟ್ಟಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

