57 ನೇ. ಸಂಸ್ಥಾನಾ ದಿನಾಚರಣೆಯನ್ನು ಆರ್.ಟಿ.ಪಿ.ಎಸ್/ವಾಯ್.ಟಿ.ಪಿ.ಎಸ್ – ಇವರ ಸಹಯೋಗದಲ್ಲಿ ಆಚರಣೆ ಕಾರ್ಯಕ್ರಮ ಜರಗಿತು.

ರಾಯಚೂರು ಜು.21

ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿದ ಹಾಗೂ 25 ವರ್ಷಗಳು ಪೂರ್ಣ ಗೊಳಿಸದೇ ವಯೋ ನಿವೃತ್ತಿ ಹೊಂದಿದ ಉದ್ಯೋಗಿಗಳಿಗೆ ಕೈ ಗಡಿಯಾರ ಪ್ರಶಂಶನಾ ಪತ್ರ ನೀಡಿ ಗೌರವಿಸಲಾಯಿತು. ಅಲ್ಲದೆ SSLC ಮತ್ತು PUC-II ನಲ್ಲಿ ಶೇಕಡಾ 90 ಅದಕ್ಕೂ ಹೆಚ್ಚಿನ ಅಂಕ ಪಡೆದ ಉದ್ಯೋಗಿಗಳ ಮಕ್ಕಳಿಗೂ ಬೆಳ್ಳಿ ಪದಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ರಾಷ್ಟ್ರ, ರಾಜ್ಯ ಮಟ್ಟದ ವಿವಿಧ ಕ್ರೀಡೆಯಲ್ಲಿ ಪದಕ ಪಡೆದ ನಿಗಮದ ಉದ್ಯೋಗಿಗಳಿಗೂ ಹಾಗೂ ಉದ್ಯೋಗಿಗಳ ಮಕ್ಕಳಿಗೂ ಗೌರವಿಸಲಾಯಿತು.

ದಿನಾಂಕ:20.07.2026 ರಂದು ಡಾ, B.R ಅಂಬೇಡ್ಕರ್ ಭವನ ಶಕ್ತಿ ನಗರದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 57 ನೇ. ಸಂಸ್ಥಾಪನಾ ದಿನಾಚರಣೆಯನ್ನು RTPS/YTPS ಇವರ ಸಹಯೋಗದಲ್ಲಿ ಆಚರಿಸಲಾಯಿತು.

ಅಧ್ಯಕ್ಷತೆಯನ್ನು RTPS ಯೋಜನಾ ಪ್ರದೇಶದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ರಮೇಶ ಎಚ್.ಆರ್ ಇವರು ಪ್ರಸ್ತುತ ವಿದ್ಯುತ್ ಉತ್ಪಾದನೆ ಬಗ್ಗೆ ಮಾತನಾಡಿ ನಿಗಮದ ಎಲ್ಲಾ ಉದ್ಯೋಗಿಗಳು ಒಗ್ಗಟ್ಟಿನಲ್ಲಿ ಕೆಲಸ ಮಾಡಿದಲ್ಲಿ ನಿಗಮವನ್ನು ಅತ್ಯುನ್ನತ ಮಟ್ಟಕ್ಕೆ ತರಲು ಸಾಧ್ಯ ಎಂದು ತಿಳಿಸದರು. YTPS ಯೋಜನಾ ಪ್ರದೇಶದ ಶ್ರೀ ಕೆ.ಕೆ ರಾಜ್ ಸಿ.ಇ (ಓ&ಎಂ) ಇವರು ಉಪಸ್ಥಿತರಿದ್ದರು.ವಿಶೇಷ ಆಹ್ವಾನಿತರಾದ ಶ್ರೀ ಚಂದ್ರಕಾಂತ್ ಧೋoಡಿಬ, ನಿವೃತ್ತ ಪ್ರಭಾರಿ ಕಾರ್ಯನಿರ್ವಾಹ ನಿರ್ದೇಶಕರು, ಕ.ವಿ.ನಿ.ನಿ ಇವರು ನಿಗಮದ ಆಗು ಹೋಗುಗಳ ಮತ್ತು ಕರ್ತವ್ಯಗಳನ್ನು ನಿರ್ವಹಿಸಿದ ಬಗ್ಗೆ ಹಾಗೂ ಶ್ರೀ ಎ.ಹೆಚ್ ರೋಣ, ನಿವೃತ್ತ ಸೀ. ಅಸಿಸ್ಟೆಂಟ್ ವರ್ಕ್ಸ್, ಇವರು ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಕರ್ತವ್ಯ ಹಾಗೂ ಸಂಘದ ಚಟುವಟಿಕೆಗಳ ಕುರಿತು ಮಾತನಾಡಿದರು.

ಪ್ರಾಸ್ತಾವಿಕ ಭಾಷಣದಲ್ಲಿ ಶ್ರೀ ಕೃಷ್ಣರಾಜ್ ಕೆ.ಕೆ CE (O&M) YTPS, ರವರು RTPS &YTPS ಯೋಜನೆಗಳಲ್ಲಿ ವಿದ್ಯುತ್ ಉತ್ಪಾದನೆ ಬಗ್ಗೆ ತಿಳಿಸಿದರು.

ಕಾರ್ಯಕ್ರಮ ಅಭೂತ ಪೂರ್ವ ಯಶಸ್ವಿ ಯಾಗಲು ಕಾರಣೀಭೂತರಾದ ವೇದಿಕೆ ಸಮಿತಿ, ಸ್ವಾಗತ ಸಮಿತಿ, ಪೂಜಾ ಸಮಿತಿ, ಸಾಂಸ್ಕೃತಿಕ ಸಮಿತಿ, ಆಹಾರ ಸಮಿತಿ, ಕ್ರೀಡಾ ಸಮಿತಿ ಹಾಗೂ ಖರೀದಿ ಸಮಿತಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು /ಕಾರ್ಯದರ್ಶಿಗಳು, RTPS /YTPS ನ ಎಲ್ಲಾ ಅಧಿಕಾರಿ /ಉದ್ಯೋಗಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.🙏🏻

ಸಂಸ್ಥಾಪನಾ ದಿನಾಚರಣೆ ಸಮಿತಿ, ಶಕ್ತಿನಗರ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button