ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ಕಾಲುವೆಯಲ್ಲಿ – ಮಣ್ಣು ಹಾಕಿ ಪ್ರತಿಭಟನೆ.

ಸಿದ್ದಾಪುರ ಪಿ.ಟಿ ಜು.22

ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಪಿ.ಟಿ ಗ್ರಾಮದಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆ 0.484 ರಿಂದ 2.193 ವರೆಗೆ ಕಾಲುವೆ 2009-10 ರಲ್ಲಿ ನಿರ್ಮಾಣವಾಗಿದ್ದು ಇಲ್ಲಿಯ ವರೆಗೆ ಕಾಲುವೆ ನಿರ್ಮಾಣ ಗೊಂಡು 17 ವರ್ಷಗಳು ಗತಿಸಿದರು.

ರೈತರಿಗೆ ಪರಿಹಾರ ದೊರತಿಲ್ಲವೆಂದು ಆಕ್ರೋಶ ಗೊಂಡ ರೈತ ಮುಖಂಡ ಗುರು ರಾಯಗೊಂಡ ಮತ್ತು ರೈತರು ಕೆನಾಲ್ ನೀರು ಹರಿಯದಂತೆ ಕಾಲುವೆಯಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಮಣ್ಣು ಹಾಕಿ ಪ್ರತಿಭಟನೆ ನಡೆಸಿದರು.

ಘಟನೆಯ ಮಾಹಿತಿ ಪಡೆದ ಮುದ್ದೇಬಿಹಾಳ ತಹಶೀಲ್ದಾರ್ ಕೀರ್ತಿ ಚಾಲಕ್, ಸಂಬಂಧಿಸಿದ ತಾಲೂಕು ಮಟ್ಟದ ಅಧಿಕಾರಿಗಳು, ಕೆಬಿಜೆಎನ್ಎಲ್ ಅಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಸಿದ್ದಾಪುರ್ ಪಿ.ಟಿ ಗ್ರಾಮಕ್ಕೆ ಭೇಟಿ ನೀಡಿ. ಪರಿಹಾರ ನೀಡಲು ರೈತರಲ್ಲಿ ಕಾಲಾವಕಾಶ ಕೇಳಿದರು.

ಅದಕ್ಕೆ ರೈತರು ಒಪ್ಪದೇ ಪಟ್ಟು ಹಿಡಿದರು, ನಂತರ ಆಲಮಟ್ಟಿ ಎಸ್ ಎಲ್ ಓ ಅಧಿಕಾರಿಗಳು ಬಂದು ಪರಿಹಾರ ನೀಡಲು 2-3 ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದರು.

ಅದಕ್ಕೆ ರೈತರು ಒಪ್ಪಿಗೆ ನೀಡಲಿಲ್ಲ, ಕೊನೆಯಲ್ಲಿ ಎಸ್ ಎಲ್ ಓ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ನಂತರ ರೈತರಿಗೆ ಹೇಳುವುದಾಗಿ ತಿಳಿಸಿದ್ದಾರೆ.

ಆದರೆ ರೈತರು ಪರಿಹಾರ ನೀಡುವ ವರೆಗೂ ನಾವು ಮಣ್ಣು ತೆರವು ಮಾಡುವುದಿಲ್ಲ, ಅಲ್ಲಿಯ ವರೆಗೆ ಪ್ರತಿಭಟನೆ ನಿರಂತರವಾಗಿ ಇರುತ್ತದೆ ಎಂದು ಹೇಳಿದರು. ಪಿ.ಎಸ್.ಐ ಆರ್.ಎಸ್ ಬಂಗಿ ಮತ್ತು ಸಿಬ್ಬಂದಿ ಇದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button