ರೈತಪರ ಪಾದಯಾತ್ರೆಗೆ ಕನ್ನಡ ಸೇನೆ ಬೆಂಬಲ – ನೀರಿನ ಬಾಟಲ್ ವಿತರಣೆ.

ಮಾನ್ವಿ ಜು.21

ರೈತರ ಬದುಕು ಹಸನಾಗಲಿ ಹಾಗೂ ಉತ್ತಮ ಮಳೆಯಾಗಿ ನಾಡು ಸುಭಿಕ್ಷವಾಗಲಿ ಎಂಬ ಸಂಕಲ್ಪದೊಂದಿಗೆ ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಳೆಗಾಗಿ ಪಾದಯಾತ್ರೆಗೆ ಕನ್ನಡ ಸೇನೆ ತಾಲೂಕು ಘಟಕ ಬೆಂಬಲ ಸೂಚಿಸಿ, ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ರೈತರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಬಸವರಾಜ ಮೈಲಾರಿ, ರೈತರ ಹಿತಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಈ ಪಾದಯಾತ್ರೆಗೆ ನಮ್ಮಿಂದ ಅಳಿಲು ಸೇವೆಯಾಗಿ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿದ್ದೇವೆ. ರೈತರ ಪರವಾಗಿ ನಡೆಯುವ ಹೋರಾಟಗಳಿಗೆ ಕನ್ನಡ ಸೇನೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.

ನಂತರ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ರೈತಪರ ಪಾದಯಾತ್ರೆಗೆ ನಮ್ಮ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಸಂಪೂರ್ಣ ಬೆಂಬಲ ನೀಡಿದ್ದೇವೆ. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಯುವ ಜನಪರ ಹೋರಾಟಗಳಿಗೆ ನಮ್ಮ ಸಂಘಟನೆ ಸದಾ ಕೈಜೋಡಿಸಲಿದೆ ಎಂದು ತಿಳಿಸಿದರು.

ಸದಸ್ಯ ನಾಗರಾಜ್ ಶೆಟ್ಟಿ ಮಾತನಾಡಿ, ರೈತರ ಪರವಾಗಿ ಹೋರಾಟ ಮಾಡುವವರ ಜೊತೆ ಭಗವಂತ ಯಾವತ್ತೂ ಇರುತ್ತಾನೆ ಎನ್ನುವುದಕ್ಕೆ ಪಾದಯಾತ್ರೆ ಆರಂಭವಾದ ಕೆಲವೇ ಹೊತ್ತಿನಲ್ಲಿ ಸುರಿದ ಮಳೆಯೇ ಸಾಕ್ಷಿಯಾಗಿದೆ. ಉತ್ತಮ ಮಳೆಯಾಗಿ ರೈತರಿಗೆ ಒಳಿತಾಗಲಿ ಎಂದು ಹಾರೈಸಿದರು.

ನಗರ ಘಟಕದ ಅಧ್ಯಕ್ಷ ಶೇಖ್ ಮುಸ್ತಫಾ ಮಾತನಾಡಿ, ರೈತರ ಹೋರಾಟಗಳು ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಗೆ ಕನ್ನಡ ಸೇನೆ ನಿರಂತರ ಬೆಂಬಲ ನೀಡಲಿದೆ ಎಂದು ಹೇಳಿದರು.

ವೀರೇಶ್ ವಿಶ್ವಕರ್ಮ ಮಾತನಾಡಿ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ರೈತರ ಹಿತಕ್ಕಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆ ಶ್ಲಾಘನೀಯವಾಗಿದೆ. ರೈತರ ಸಮಸ್ಯೆಗಳ ಪರವಾಗಿ ಅವರು ನಡೆಸುತ್ತಿರುವ ಹೋರಾಟಗಳು ಪ್ರಶಂಸನೀಯವಾಗಿದ್ದು, ಇಂತಹ ಜನಪರ ಕಾರ್ಯಗಳಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರ ಸಮರ ಕರ್ನಾಟಕದ ಅಧ್ಯಕ್ಷ ಮಲ್ಲನಗೌಡ, ಸಾಜಿದ್, ಪ್ರಭು ಬಾಲನಗರ, ಸಿದ್ದಪ್ಪ ನಾಯಕ್, ಭೀಮೇಶ್ ನಾಯಕ್, ಸಂಜಯ್, ಬುಜ್ಜಿ ವಾಟರ್ ಪ್ಲಾಂಟ್‌ನ ಪ್ರತಿನಿಧಿಗಳು ಸೇರಿದಂತೆ ಕನ್ನಡ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button