ಶ್ರೀಮದ್ ಭಾಗವತ ಶ್ರವಣದಿಂದ ಮೋಕ್ಷಿ ಪ್ರಾಪ್ತಿ – ಸ್ವಾಮಿ ಸೌಖ್ಯಾನಂದಜೀ.
ಚಳ್ಳಕೆರೆ ಜು.22

ಶ್ರೀಮದ್ ಭಾಗವತವನ್ನು ಏಳು ದಿನಗಳ ಕಾಲ ಶ್ರವಣ ಮಾಡುವುದರಿಂದ ನಾಲ್ಕು ಪುರುಷಾರ್ಥಗಳಲ್ಲಿ ಒಂದಾದ ಹಾಗೂ ಮನುಷ್ಯ ಜೀವನದ ಮುಖ್ಯ ಗುರಿಯಾದ ಮೋಕ್ಷವನ್ನು ಪಡೆಯಬಹುದು ಎಂದು ಬೆಂಗಳೂರಿನ ಬಸವನಗುಡಿಯ ಶ್ರೀರಾಮಕೃಷ್ಣ ಮಠದ ಸ್ವಾಮಿ ಸೌಖ್ಯಾನಂದಜೀ ಮಹಾರಾಜ್ ಅಭಿಪ್ರಾಯ ಪಟ್ಟರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಷಾಡ ಮಾಸದ ಪ್ರಯುಕ್ತ ಆಯೋಜಿಸಿದ್ದ “ಶ್ರೀಮದ್ ಭಾಗವತ ಸಪ್ತಾಹ” ಕಾರ್ಯಕ್ರಮದ ಮೊದಲ ದಿನದ ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಮದ್ ಭಾಗವತದಿಂದ ನಾವೇನು ಕಲಿಯಬಹುದು” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡಿದರು.

ಶ್ರೀಮದ್ ಭಾಗವತದ ಅಧ್ಯಯನ ಮತ್ತು ಅದರ ಶ್ರವಣದಿಂದ ಅನೇಕ ವಿಷಯಗಳನ್ನು ಕಲಿಯಬಹುದು.ಅದರಲ್ಲಿ ಬರುವ ಪರೀಕ್ಷಿತ್ ರಾಜನಂತೆ ಜನನ-ಮರಣದ ಚಕ್ರದಿಂದ ಬಿಡುಗಡೆ ಹೊಂದಬಹುದು.
ಶ್ರವಣ, ಧ್ಯಾನ, ನಿಧಿಧ್ಯಾಸನವನ್ನು ಬೆಳೆಸಿ ಕೊಳ್ಳಬೇಕು. ಸತ್ಸಂಗ-ಸಾಧು ಸಂಗದಿಂದ ಜೀವನ್ ಮುಕ್ತಿ ಸಿಗುತ್ತದೆ. ಗೋಪಿಯರಂತೆ ಭಗವಂತನನ್ನು ಪ್ರೀತಿಸಿ ಆತನ ದರುಶನಕ್ಕಾಗಿ ವ್ಯಾಕುಲತೆ ಪಡೆಯಬೇಕು. ಕಲಿಯುಗಕ್ಕೆ ಭಕ್ತಿಮಾರ್ಗವೇ ಸೂಕ್ತವಾದದ್ದು ಎಂದು ವಿವರಿಸಿದರು.

ಸತ್ಸಂಗದ ಆರಂಭದಲ್ಲಿ ವನಜಾಕ್ಷಿ ಮೋಹನ್ ಅವರ ನೇತೃತ್ವದಲ್ಲಿ ಸದ್ಭಕ್ತರಿಂದ ವಿಶೇಷ ಭಜನೆ,ಮಾತಾಜೀ ತ್ಯಾಗಮಯೀ ಅವರಿಂದ ದಿವ್ಯತ್ರಯರಿಗೆ, ಭಗವಾನ್ ಶ್ರೀಕೃಷ್ಣನಿಗೆ ಆರತಿ ನಡೆದರೆ ಬಿ ಸುಮನಾ ಕೋಟೇಶ್ವರ ಅವರು ಸ್ವಾಗತ-ಪರಿಚಯ-ವಂದನಾರ್ಪಣೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹರಿಕೇಶವ, ನರೇಂದ್ರ, ರಂಗನಾಥ,ಎಚ್ ಲಕ್ಷ್ಮೀದೇವಮ್ಮ, ಪ್ರೇಮಾ, ಯತೀಶ್ ಎಂ ಸಿದ್ದಾಪುರ, ಗೀತಾ, ಪ್ರಕಾಶ್,ಸುಮ, ವೆಂಕಟಸುಬ್ಬಣ್ಣ, ರಾಧಮ್ಮ, ಪಿ.ಎಸ್. ಮಾಣಿಕ್ಯ ಕವಿತಾ, ಅಂಬುಜಾ, ಮಂಜುಳ, ರಶ್ಮಿ, ಡಾ.ಭೂಮಿಕ, ಸಂತೋಷ್, ಮಾನ್ಯ, ಹೃತಿಕ್, ಪುಷ್ಪಲತಾ, ವೀಣಾ,ಜಿ ಯಶೋಧಾ, ಶಾಂತಮ್ಮ, ನಾಗರತ್ನಮ್ಮ, ವಿಮಲಾ, ಅನುಸೂಯ, ಸಂಜನಾ, ಚೇತನ್, ಚೆನ್ನಕೇಶವ,ನಾಗರಾಜ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
