ಬಸವ ಸಮಿತಿಯಿಂದ ನಿಜಸುಖಿ ಹಡಪದ ಅಪ್ಪಣ್ಣನವರ ೯೦೯ ನೇ. ಅರಿವಿನ ಮನೆ – ದತ್ತಿ ಉಪನ್ಯಾಸ ಯಶಸ್ವಿ.
ಕಲಬುರಗಿ ಜು.23

ಜಿಲ್ಲೆಯ ಬಸವ ಸಮಿತಿಯ ವತಿಯಿಂದ ಜಯ ನಗರದ ಅನುಭವ ಮಂಟಪದ ವಿಶ್ವನಾಥರೆಡ್ಡಿ ಮುದ್ನಾಳ ವೇದಿಕೆಯಲ್ಲಿ ವಚನ ಆಷಾಢ–೨೦೨೬ರ ಅಂಗವಾಗಿ ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರ ೯೦೯ ನೇ. ಅರಿವಿನ ಮನೆ ದತ್ತಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಅನುಭಾವಿಗಳು ಹಾಗೂ ಪ್ರವಚನ ಯೋಗಿಗಳಾದ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು, ಕಲ್ಯಾಣ ಆಶ್ರಮ, ಮಹಾಂತೇಶ್ವರ ಮಠ, ಮುದಗಲ್–ತಿಮ್ಮಾಪೂರ ಅವರು “ಪ್ರಭುಲಿಂಗ ಲೀಲೆ” ವಿಷಯದ ಕುರಿತು ಆನುಭಾವಿಕ ಪ್ರವಚನ ನೀಡಿದರು.
ಪ್ರವಚನದಲ್ಲಿ ಅವರು, ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರು ೧೨ ನೇ. ಶತಮಾನದ ಶ್ರೇಷ್ಠ ವಚನಕಾರರು, ಕಾಯಕಯೋಗಿ ಹಾಗೂ ಜಗದ್ಗುರು ಬಸವಣ್ಣನವರ ಆಪ್ತ ಒಡನಾಡಿ ಯಾಗಿದ್ದರು ಎಂದು ವಿವರಿಸಿದರು.
ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅಪ್ಪಣ್ಣನವರು ಅಲ್ಲಮಪ್ರಭು, ಸಿದ್ಧರಾಮ ಸೇರಿದಂತೆ ಅನೇಕ ಶರಣರನ್ನು ಬಸವಣ್ಣನವರಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು ಎಂದು ತಿಳಿಸಿದರು.
ಹಡಪದ ಕಾಯಕವನ್ನೇ ಶಿವಸೇವೆಯೆಂದು ಸ್ವೀಕರಿಸಿದ ಅವರು “ಬಸವಪ್ರಿಯ ಅಪ್ಪಣ್ಣ” ಅಂಕಿತನಾಮದೊಂದಿಗೆ ಅನೇಕ ವಚನಗಳನ್ನು ರಚಿಸಿ, ಸಮಾನತೆ, ಕಾಯಕ ಹಾಗೂ ಭಕ್ತಿಯ ಸಂದೇಶವನ್ನು ಸಮಾಜಕ್ಕೆ ಸಾರಿದರು ಎಂದು ಹೇಳಿದರು.
ಬಸವಣ್ಣನವರು ಹಾಗೂ ಹಡಪದ ಅಪ್ಪಣ್ಣನವರ ಸಂಬಂಧವು ಕೇವಲ ಯಜಮಾನ–ಸೇವಕ ಸಂಬಂಧವಾಗಿರದೆ, ಆಧ್ಯಾತ್ಮಿಕ ಮತ್ತು ವೈಚಾರಿಕ ಸಹಯಾತ್ರೆ ಯಾಗಿತ್ತು.

ಸಮಾಜದಲ್ಲಿದ್ದ ಮೂಢ ನಂಬಿಕೆಗಳನ್ನು ನಿರ್ಮೂಲನೆ ಗೊಳಿಸಲು ಇಬ್ಬರೂ ಜೊತೆಯಾಗಿ ಶ್ರಮಿಸಿದ್ದು, ಅನುಭವ ಮಂಟಪದ ಕಾರ್ಯ ಚಟುವಟಿಕೆಗಳಲ್ಲಿ ಅಪ್ಪಣ್ಣನವರು ಬಸವಣ್ಣನವರ ಬಲಗೈ ಬಂಟರಾಗಿ ಕಾರ್ಯ ನಿರ್ವಹಿಸಿದ್ದನ್ನು ಅವರು ಸ್ಮರಿಸಿದರು.
ಬಸವಣ್ಣನವರ ಕೊನೆಯ ಕ್ಷಣದ ವರೆಗೂ ಅವರೊಂದಿಗೆ ಇದ್ದ ಅಪ್ಪಣ್ಣನವರು ತಮ್ಮ ನಿಷ್ಠೆ, ಸೇವೆ ಮತ್ತು ಭಕ್ತಿಯಿಂದ ಶರಣ ಸಂಸ್ಕೃತಿಯಲ್ಲಿ ಅಜರಾಮರ ಸ್ಥಾನ ಪಡೆದಿದ್ದಾರೆ ಎಂದು ವಿಶೇಷ ದತ್ತಿ ಉಪನ್ಯಾಸದಲ್ಲಿ ತಿಳಿಸಿದರು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಭಾಲಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳು, ಶಹಾಬಾದ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರಗಿ ಜಿಲ್ಲಾ ಬಸವ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ವಿಲಾಸವತಿ ಖೋಬಾ ತಾಯಿಯವರು ಹಾಗೂ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಈರಣ್ಣ ಸಿ. ಹಡಪದ (ಸಣ್ಣೂರ) ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀಮತಿ ಜಯಶ್ರೀ ದಂಡೆ, ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಗೌರವಾಧ್ಯಕ್ಷ ಬಸವರಾಜ ಹಡಪದ (ಸುಗೂರ ಎನ್), ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ (ಸಹ ಶಿಕ್ಷಕರು, ಕಿರಣಗಿ), ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ (ನೀಲೂರ), ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ (ಸುಗೂರ ಎನ್), ಕಲಬುರಗಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿನೋದ ಅಂಬಲಗಾ, ಶಂಕರ ಹಡಪದ (ಹರವಾಳ), ಸಮಾಜದ ಹಿರಿಯರಾದ ಶಿವಶರಣಪ್ಪ ಹಡಪದ (ಹಾಗರಗಿ), ಚನ್ನಬಸಪ್ಪ ಹಡಪದ (ಊಡಗಿ), ಸಂಗಮೇಶ ಹಡಪದ (ಮಾರಡಗಿ), ಪ್ರಸಾದ ಹಡಪದ (ಶಹಾಬಾದ), ನಾಗರಾಜ ಹಡಪದ (ರುದ್ನೂರು), ಭೀಮು ಹಡಪದ (ನಂದೂರು), ಶರಣು ಹಡಪದ (ನಂದೂರು), ಪರಮೇಶ್ವರ ಹಡಪದ (ಕಲಬುರಗಿ), ಶಿವಕುಮಾರ್ ಹಡಪದ (ಸಿಂದಗಿ), ಸುನೀಲ್ ಕುಮಾರ್ (ಭಾಗಹಿಪ್ಪರಗಾ) ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಸಾದ ಸೇವೆಯನ್ನು ಶ್ರೀಮತಿ ಅಂಭಿಕಾ ಗಂ/ ವಿಶ್ವನಾಥ ಹಡಪದ, ಗುಡೂರು ನೆರವೇರಿಸಿದರು. ತಬಲಾ ವಾದನವನ್ನು ಶ್ರೀ ಬಸವರಾಜ ಹೊನ್ನಿಗನೂರು, ಸಂಗೀತ ಸೇವೆಯನ್ನು ಶ್ರೀ ಶಂಕ್ರಯ್ಯ ಆರ್. ಗುರುಮಠ ನೀಡಿದರು.ಈ ಕಾರ್ಯಕ್ರಮವನ್ನು ಉದಡಂಪ್ಪ ಸರ ಅವರು ನಿರೂಪಿಸಿದರು.
ಈ ಕುರಿತು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ (ಸುಗೂರ ಎನ್) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
