🚨🚨ಬ್ರೇಕಿಂಗ್ ನ್ಯೂಸ್🚨🚨🔴 ಬ್ರೇಕಿಂಗ್ ನ್ಯೂಸ್ 🔴💥ಪೊಲೀಸ್ ದೂರು ಹಾಗೂ ವಾಟ್ಸಪ್ ಪ್ರಸಾರಕ್ಕೆ ಆಕ್ಷೇಪ, ಥಾಮಸ್ ರೋಡ್ರಿಗಸ್ ವಿರುದ್ಧ – ಕಾನೂನು ಕ್ರಮಕ್ಕೆ ಉಮಾಶಂಕರ್ ಆಗ್ರಹ💥
ಉಡುಪಿ/ಬ್ರಹ್ಮಾವರ ಆ.23

5 ನೇ. ಐರೋಡಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಕಸ ಸಂಗ್ರಹಣಾ ವಾಹನದ ವಿಚಾರದಲ್ಲಿ ತಮ್ಮ ವಿರುದ್ಧ ಆಧಾರ ರಹಿತ ಹಾಗೂ ವಾಸ್ತವಾಂಶಗಳಿಗೆ ವಿರುದ್ಧವಾದ ಆರೋಪಗಳನ್ನು ಮಾಡಿರುವುದಾಗಿ ಆರೋಪಿಸಿ, ಶ್ರೀ ಥಾಮಸ್ ರೋಡ್ರಿಗಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್. ಉಮಾಶಂಕರ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಥಾಮಸ್ ರೋಡ್ರಿಗಸ್ ಅವರು ಕೋಟ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ 5 ನೇ. ಐರೋಡಿ ಗ್ರಾಮ ಪಂಚಾಯತಿಯ ಎಸ್.ಎಲ್.ಆರ್.ಎಂ ಕಸ ಸಂಗ್ರಹಣಾ ಟಾಟಾ ಏಸ್ ವಾಹನ ಸಂಖ್ಯೆ KA-20-AB-2347 ದಿನಾಂಕ 01.03.2025 ರಿಂದ ಕಾಣೆ ಯಾಗಿರುವುದಾಗಿ ಆರೋಪಿಸಿರುವುದಾಗಿ ತಿಳಿದು ಬಂದಿದೆ. ಆದರೆ ತಾವು 05-02-2025 ರ ಫೆಬ್ರವರಿ ತಿಂಗಳಿನಿಂದಲೇ 5 ನೇ. ಐರೋಡಿ ಗ್ರಾಮ ಪಂಚಾಯತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯದಲ್ಲಿರಲಿಲ್ಲ ಎಂದು ಉಮಾಶಂಕರ್ ಸ್ಪಷ್ಟಪಡಿಸಿದ್ದಾರೆ.
“ವಾಹನ ಕಾಣೆ ಯಾಗಿದೆ ಎಂದು ಹೇಳಲಾಗಿರುವ 01.03.2025 ರ ವೇಳೆಗೆ ನಾನು ಆ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯದಲ್ಲೇ ಇರಲಿಲ್ಲ. ಹೀಗಿರುವಾಗ, ನನ್ನನ್ನು ವಾಹನ ನಾಪತ್ತೆ ಹಾಗೂ ಸರ್ವಿಸ್, ದುರಸ್ತಿ ಹಾಗೂ ಇತರ ವೆಚ್ಚಗಳ ಕುರಿತು ವಿವಿಧ ಮೊತ್ತಗಳನ್ನು ಉಲ್ಲೇಖಿಸಿರುವುದಕ್ಕೂ ಉಮಾಶಂಕರ್ ಪ್ರತಿಕ್ರಿಯಿಸಿದ್ದು, “ಗ್ರಾಮ ಪಂಚಾಯತಿಯ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಬಿಲ್, ವೋಚರ್, ಚೆಕ್, ಬ್ಯಾಂಕ್ ದಾಖಲೆ, ಸಭಾ ನಿರ್ಣಯ, ಲೆಕ್ಕಪತ್ರ ಹಾಗೂ ಆಡಿಟ್ ದಾಖಲೆಗಳನ್ನು ಪರಿಶೀಲಿಸದೆ ಕೇವಲ ಮೊತ್ತಗಳನ್ನು ಉಲ್ಲೇಖಿಸಿ ಅಪರಾಧದ ಅನುಮಾನ ಮೂಡಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.
ವಾಟ್ಸಪ್ ಗ್ರೂಪ್‌ಗಳಲ್ಲಿ ಆರೋಪ ಪ್ರಸಾರ ಮಾಡಿದ ಆರೋಪ:-
ಪೊಲೀಸ್ ಠಾಣೆಗೆ ದೂರು ನೀಡುವುದರಲ್ಲೇ ವಿಷಯವನ್ನು ಸೀಮಿತ ಗೊಳಿಸದೆ, ತಮ್ಮ ವಿರುದ್ಧದ ಆರೋಪಗಳನ್ನು ವಾಟ್ಸಪ್ ಗ್ರೂಪ್ ಹಾಗೂ ಇತರ ಸಾಮಾಜಿಕ ಜಾಲ ತಾಣಗಳಲ್ಲಿಯೂ ಪ್ರಸಾರ ಮಾಡಲಾಗಿದೆ ಎಂದು ಉಮಾಶಂಕರ್ ಗಂಭೀರ ಆರೋಪ ಮಾಡಿದ್ದಾರೆ.
“ಪೊಲೀಸರಿಗೆ ದೂರು ನೀಡುವುದು ಒಬ್ಬ ನಾಗರಿಕನ ಕಾನೂನು ಬದ್ಧ ಹಕ್ಕು. ಆದರೆ ಆರೋಪಗಳು ಸತ್ಯವೆಂದು ಇನ್ನೂ ಯಾವುದೇ ಅಧಿಕೃತ ತನಿಖೆ ಅಥವಾ ನ್ಯಾಯಾಂಗ ನಿರ್ಣಯವಾಗುವ ಮೊದಲೇ ಅದನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ಗ್ರೂಪ್‌ಗಳಲ್ಲಿ ಹರಡಿ ನನ್ನನ್ನು ಸಾರ್ವಜನಿಕವಾಗಿ ಅಪರಾಧಿಯಂತೆ ಬಿಂಬಿಸುವುದರಿಂದ ನನ್ನ ವೃತ್ತಿಪರ ಗೌರವ ಮತ್ತು ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆಯಾಗಿದೆ,” ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್, ಗ್ರೂಪ್ ವಿವರ, ಸಂದೇಶದ ದಿನಾಂಕ ಮತ್ತು ಸಮಯ ಸೇರಿದಂತೆ ಲಭ್ಯವಿರುವ ಎಲೆಕ್ಟ್ರಾನಿಕ್ ದಾಖಲೆಗಳನ್ನು ಕಾನೂನು ಬದ್ಧ ಕ್ರಮಕ್ಕಾಗಿ ಸಂರಕ್ಷಿಸಿರುವುದಾಗಿ ತಿಳಿಸಲಾಗಿದೆ.
ಪೊಲೀಸರಿಗೆ ಸಮಗ್ರ ತನಿಖೆಗೆ ಮನವಿ ತಮ್ಮ ವಿರುದ್ಧ ಉದ್ದೇಶ ಪೂರ್ವಕವಾಗಿ ಆಧಾರ ರಹಿತ ಆರೋಪಗಳನ್ನು ಮಾಡಲಾಗಿದೆ ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ದೃಢ ಪಟ್ಟಲ್ಲಿ, ಸಂಬಂಧಪಟ್ಟವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಇತರ ಅನ್ವಯಿಸುವ ಕಾನೂನುಗಳಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸತ್ಯಾಂಶಗಳು ಮತ್ತು ಅಧಿಕೃತ ದಾಖಲೆಗಳು ಹೊರ ಬರಬೇಕು. ತಪ್ಪು ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮವಾಗಲಿ. ಅದೇ ಸಮಯದಲ್ಲಿ, ಕರ್ತವ್ಯದಲ್ಲೇ ಇರದ ವ್ಯಕ್ತಿಯ ಮೇಲೆ ಆಧಾರ ರಹಿತ ಆರೋಪ ಮಾಡಿ ಸಾರ್ವಜನಿಕವಾಗಿ ಮಾನಹಾನಿ ಮಾಡುವುದಕ್ಕೂ ಕಾನೂನು ರಕ್ಷಣೆ ಇರಬಾರದು,” ಎಂದು ಎಚ್.ಉಮಾಶಂಕರ್ ತಿಳಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ
