🚨💥ಬ್ರೇಕಿಂಗ್ ನ್ಯೂಸ್💥🚨 💥ಅಧಿಕಾರ ಮದದ ಅಟ್ಟಹಾಸ, ಶಸ್ತ್ರಚಿಕಿತ್ಸಕ ಡಾ, ಮಹೇಂದ್ರ ಶೆಟ್ಟಿ ಅಮಾನತು! ಉಡುಪಿ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಜೇಂದ್ರ ನಾಯಕ್ – ಅಮಾನತು ಯಾವಾಗ..?💥

ಉಡುಪಿ ಆ.22

ಸತ್ಯ ಬರೆಯುವ ಪೆನ್ನಿನ ತುದಿಗೆ ಎಷ್ಟು ತಾಕತ್ತು ಇದೆಯೋ, ಅಧಿಕಾರದ ಕುರ್ಚಿಯಲ್ಲಿ ತೇಲಾಡುವ ಭ್ರಷ್ಟರಿಗೆ ಅದನ್ನು ಕಂಡರೆ ಅಷ್ಟೇ ಭಯ! ಉಡುಪಿ ಜಿಲ್ಲೆಯಲ್ಲಿ ಈಗ ಅಧಿಕಾರಿಗಳ ದರ್ಬಾರ್ ಮತ್ತು ರೌಡಿಸಂ ಮಿತಿ ಮೀರಿದೆ. ಸಾರ್ವಜನಿಕರ ಹಿತಕ್ಕಾಗಿ ಲೇಖನಿ ಹಿಡಿದು ಅಕ್ರಮಗಳನ್ನು ಜಗತ್ತಿನೆದುರು ಬೆತ್ತಲೆ ಗೊಳಿಸುವ ಪತ್ರಕರ್ತರ ಮೇಲೆಯೇ ನೇರ ದಾಳಿ, ದೌರ್ಜನ್ಯ ಮತ್ತು ಸರಣಿ ಸುಳ್ಳು ಕೇಸ್‌ಗಳನ್ನು ಜಡಿಯುವ ಕರಾಳ ಧೋರಣೆ ತೀವ್ರ ಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಅಧಿಕಾರಿಗಳ ದುಶ್ಕೃತ್ಯಗಳು, ಅಧಿಕಾರ ದುರ್ಬಳಕೆಯ ಕಪ್ಪು ಮುಖಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಪ್ರಮುಖ ಪತ್ರಿಕೆಗಳಲ್ಲೂ ಎಲ್ಲೆಂದರಲ್ಲಿ ಬಟ್ಟ ಬಯಲಾಗುತ್ತಿರುವುದು ಸತ್ಯದ ವಿಚಾರವಾಗಿದೆ. ಆದರೆ, ಸತ್ಯ ಬರೆಯುವ ಪತ್ರಕರ್ತರ ಕೈ ಹಾಗೂ ಪೆನ್ನನ್ನು ಕಟ್ಟಿಹಾಕಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಬಾಯಿ ಮುಚ್ಚಿಸುವ ಕೀಳು ಹುನ್ನಾರವನ್ನು ಈ ಭ್ರಷ್ಟಾಧಿಕಾರಿಗಳು ಎಗ್ಗಿಲ್ಲದೆ ಮಾಡುತ್ತಿದ್ದಾರೆ.

ಕುಂದಾಪುರದ ಸರ್ಕಾರಿ ಆಸ್ಪತ್ರೆಯ ಒಳಗಡೆ ನಡೆಯುತ್ತಿದ್ದ ಹೊಲಸು ದಂಧೆ ಮತ್ತು ರೋಗಿಗಳ ಗೋಳನ್ನು ಮಾಧ್ಯಮಗಳು ಬಯಲಿಗೆಳೆದಿದ್ದೇ ತಡ, ಶಸ್ತ್ರಚಿಕಿತ್ಸಕ ಡಾ, ಮಹೇಂದ್ರ ಕುಮಾರ್ ಶೆಟ್ಟಿ ಎಂಬ ಅಹಂಕಾರಿಗೆ ರೌಡಿಸಂ ನೆತ್ತಿಗೇರಿತ್ತು..! ಹೋಟೆಲ್‌ನಲ್ಲಿ ನೆಮ್ಮದಿಯಾಗಿ ಕುಳಿತಿದ್ದ ಪತ್ರಕರ್ತನ ಮೇಲೆ ಏಕಾಏಕಿ ನುಗ್ಗಿ, ಕಾನೂನಿನ ಭಯವೇ ಇಲ್ಲದೆ ರಕ್ತ ಚಿಮ್ಮುವಂತೆ ಹಲ್ಲೆ ನಡೆಸಿದ್ದ.

ಇತ್ತ ಉಡುಪಿ ಲೋಕಾಯುಕ್ತ ವಿಭಾಗದ ಇನ್ಸ್ಪೆಕ್ಟರ್ ರಾಜೇಂದ್ರ ನಾಯಕ್ ಎಂಬಾತ ತನ್ನ ಹುದ್ದೆಯ ಪ್ರಭಾವ ದುರ್ಬಳಕೆ ಮಾಡಿಕೊಂಡು, ಧೈರ್ಯವಂತ ಪತ್ರಕರ್ತೆ ಸೇರಿದಂತೆ ಸತ್ಯ ಸಂಗತಿಗಳನ್ನು ಹೊರತರುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ವಿರುದ್ಧವೇ ಸುಳ್ಳು ದೂರುಗಳನ್ನು ಹೆಣೆದು ಕಿರುಕುಳ ನೀಡಿದ್ದ. ಆದರೆ, ಈ ಭ್ರಷ್ಟ ಅಧಿಕಾರಿಯ ರಾಜೇಂದ್ರ ನಾಯಕ್ ಹೆಣೆದ ಸುಳ್ಳು ದೂರಿಗೆ ಮಾನ್ಯ ಹೈಕೋರ್ಟ್ ನ್ಯಾಯಾಲಯವೇ ತಡೆಯಾಜ್ಞೆ (Stay) ನೀಡಿ, ಸತ್ಯಕ್ಕೆ ಎಂದಿಗೂ ಸೋಲಿಲ್ಲ ಎಂಬುದನ್ನು ಸಾಬೀತು ಪಡಿಸಿದೆ..!

ಇಂತಹ ವಿಚಾರಗಳು ಹಾಗೂ ಅಧಿಕಾರಿಗಳ ಅಕ್ರಮಗಳು ಈಗಾಗಲೇ ಮಾನ್ಯ ನ್ಯಾಯಾಲಯದ ಗಮನಕ್ಕೂ ಇದ್ದು, ಸತ್ಯಕ್ಕೆ ಯಾವತ್ತೂ ಜಯ ಅನ್ನೋದೇ ಇದಕ್ಕೆ ಅಂತಿಮ ಉತ್ತರವಾಗಿದೆ. ಸತ್ಯವನ್ನು ರಕ್ತದ ಹನಿಯಿಂದಾಗಲಿ, ಸುಳ್ಳು ದೂರಿನ ಕಾಗದಗಳಿಂದಾಗಲಿ ಎಂದಿಗೂ ಮುಚ್ಚಿ ಹಾಕಲು ಸಾಧ್ಯವಿಲ್ಲ!

ಪತ್ರಕರ್ತನ ಮೇಲೆ ಗೂಂಡಾಗಿರಿ ನಡೆಸಿದ ವೈದ್ಯಾಧಿಕಾರಿ ಡಾ, ಮಹೇಂದ್ರ ಕುಮಾರ್ ಶೆಟ್ಟಿಯನ್ನು ಆರೋಗ್ಯ ಇಲಾಖೆಯ ಆಯುಕ್ತ ಶ್ರೀ ಗುರುದತ್ತ ಹೆಗಡೆ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು (Suspension) ಮಾಡಿ, ಗದಗ ಜಿಲ್ಲೆಯ ಮುಂಡರಗಿಗೆ ಎಸೆದು ಖಡಕ್ ಆದೇಶ ಹೊರಡಿಸಿದ್ದಾರೆ.

🚨💥ಉಡುಪಿ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಜೇಂದ್ರ ನಾಯಕ್ ಅಮಾನತು ಯಾವಾಗ..?💥🚨

ವೈದ್ಯಾಧಿಕಾರಿ ಡಾ, ಮಹೇಂದ್ರ ಶೆಟ್ಟಿಗೆ ಅಮಾನತಿನ ಬಿಸಿ ತಟ್ಟಿದ್ದು ಸರಿ, ಆದರೆ ತನ್ನ ಹುದ್ದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಪತ್ರಕರ್ತರ ಮೇಲೆ ಸುಳ್ಳು ಕೇಸ್ ಜಡಿದು ಮಾನಸಿಕ ಕಿರುಕುಳ ನೀಡುತ್ತಿರುವ ಲೋಕಾಯುಕ್ತ ಸಿಬ್ಬಂದಿ ರಾಜೇಂದ್ರ ನಾಯಕ್ ಅಮಾನತು ಯಾವಾಗ.? ಇಲಾಖೆಯ ಒಳಗಡೆಯೇ ಇದ್ದು ಕೊಂಡು ಕಾನೂನನ್ನು ದುರ್ಬಳಕೆ ಮಾಡಿ ಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ..? ಈತನ ಮೇಲೆ ರಾಜ್ಯ ಸರ್ಕಾರ ಮತ್ತು ಲೋಕಾಯುಕ್ತ ಮೇಲಧಿಕಾರಿಗಳು ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.

🚨💥ರಾಜೇಂದ್ರ ನಾಯಕನ ಅಮಾನತು ಆಗೋ ವರೆಗೂ ಈ ಕಾನೂನು ಹೋರಾಟ ನಿಲ್ಲುವುದಿಲ್ಲ..!💥🚨

ತನ್ನ ಅಧಿಕಾರದ ಮುಸುಕಿನಲ್ಲಿ ಸತ್ಯದ ಧ್ವನಿಯನ್ನು ಅಡಗಿಸಲು ಹೊರಟಿರುವ ಉಡುಪಿ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಜೇಂದ್ರ ನಾಯಕನ ಅಮಾನತು ಆಗೋ ವರೆಗೂ, ಆತನನ್ನು ಸಂಪೂರ್ಣವಾಗಿ ಅಮಾನತು ಮಾಡಿ ಮನೆಗೆ ಕಳಿಸುವ ವರೆಗೂ ಈ ಕಾನೂನು ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ..!

🚨💥ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತ ಇಲಾಖೆಗೆ ಕಟು ಆಗ್ರಹ..!💥🚨

ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಧಿಕಾರಿಗಳ ದರ್ಬಾರ್, ಅಧಿಕಾರ ದುರ್ಬಳಕೆ ಮತ್ತು ಪತ್ರಕರ್ತರ ಮೇಲಿನ ಬೆದರಿಕೆಗೆ ತಕ್ಷಣವೇ ಬ್ರೇಕ್ ಬೀಳ ಬೇಕಿದೆ. ಮಾಧ್ಯಮದ ಧ್ವನಿಯನ್ನು ಅಡಗಿಸಲು ಯತ್ನಿಸುವ, ರಾಜೇಂದ್ರ ನಾಯಕ್‌ನಂತಹ ಹುದ್ದೆಯ ಪ್ರಭಾವ ದುರ್ಬಳಕೆ ಮಾಡಿ ಕೊಳ್ಳುವ ಹಾಗೂ ಸಾರ್ವಜನಿಕರ ಸೇವಕರೆಂಬುದನ್ನು ಮರೆತು ವರ್ತಿಸುವ ಪ್ರತಿಯೊಬ್ಬ ಭ್ರಷ್ಟ ಅಧಿಕಾರಿಯನ್ನು ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತ ಮೇಲಧಿಕಾರಿಗಳು ಕೂಡಲೇ ಅಮಾನತುಗೊಳಿಸಬೇಕು! ಇಂತಹ ಭ್ರಷ್ಟರನ್ನು ಸೇವೆಯಿಂದ ವಜಾಗೊಳಿಸಿ ಕಠಿಣ ಕಾನೂನು ಶಿಕ್ಷೆಗೆ ಗುರಿ ಪಡಿಸಬೇಕು ಎಂಬುದೇ ಸಾರ್ವಜನಿಕರ, ಹಾಗೂ ಪತ್ರಕರ್ತರ ಸಂಘಟನೆಯ ಖಡಕ್ ಆಗ್ರಹವಾಗಿದೆ!

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button