ಶಾರದಾದೇವಿಯವರು ಶ್ರೀರಾಮಕೃಷ್ಣರ ಜೊತೆ ಅಪೂರ್ವ ಆತ್ಮೀಯ ಸಂಬಂಧವನ್ನು ಹೊಂದಿದ್ದರು – ಯತೀಶ್.ಎಂ ಸಿದ್ದಾಪುರ.

ಚಳ್ಳಕೆರೆ ಆ.21

ಶ್ರೀರಾಮಕೃಷ್ಣ ಪರಮಹಂಸರ ಜೊತೆ ಶ್ರೀಮಾತೆ ಶಾರದಾದೇವಿಯವರು ಅಪೂರ್ವ ಆತ್ಮೀಯವಾದ ಸಂಬಂಧವನ್ನು ಇಟ್ಟುಕೊಂಡಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ಸರಸ್ವತಿ ನಾಗರಾಜ್ ಅವರ ನಿವಾಸದಲ್ಲಿ “ಶ್ರಾವಣ ಮಾಸ” ದ ಪ್ರಯುಕ್ತ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ನಡೆಸಿ ಕೊಟ್ಟ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಶ್ರೀಮಾತೆ-ಶ್ರೀರಾಮಕೃಷ್ಣ ರೂಪವೆರಡು ಶಕ್ತಿಯೊಂದು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದ್ಭಕ್ತ ಬಳಗ…..🌺

ಶ್ರೀಮಾತೆಯವರು ಶ್ರೀರಾಮಕೃಷ್ಣರ ಭಾವ ಚಿತ್ರದಲ್ಲಿ ಅವರ ಇರುವಿಕೆಯನ್ನು ಸ್ಪಷ್ಟವಾಗಿ ಕಂಡು ನಿರಂತರ ಪ್ರಾರ್ಥನೆಯ ಮೂಲಕ ಶ್ರೀರಾಮಕೃಷ್ಣರ ದಿವ್ಯ ಅಸ್ತಿತ್ವವನ್ನು ನಾವು ಅನುಭವಿಸಬಹುದು ಎಂದು ಅವರು ಹೇಳಿದರು.

ಸತ್ಸಂಗದಲ್ಲಿ ಸರಸ್ವತಿ ನಾಗರಾಜ್, ವೈಷ್ಣವಿ ರಾಜ್, ಸೃಜನ್ ರಾಜ್, ಗೀತಾ ಷಣ್ಮುಖಪ್ಪ, ಕೌಸಲ್ಯಾ, ಜಯಲಕ್ಷ್ಮೀ ರವಿ, ಚಿತ್ತಮ್ಮ, ಹೆಚ್ ಲಕ್ಷ್ಮೀದೇವಮ್ಮ, ತಿಪ್ಪಮ್ಮ, ಗೀತಾ ನಾಗರಾಜ್, ಗೀತಾ ಪ್ರಕಾಶ್, ಸುನೀತಾ ಗೋಪಾಲಕೃಷ್ಣ, ಮಾಕಂಸ್ ಲಕ್ಷ್ಮೀ ಬಾಲಾಜೀ, ದ್ರಾಕ್ಷಾಯಣಿ, ರಂಗಮ್ಮ , ತಳುಕಿನ ತೊಯಜಾಕ್ಷಿ, ಪ್ರೇಮಾ, ನಾಗರತ್ನಮ್ಮ ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button