ದೀರ್ಘ ಸುಮಂಗಲಿತನಕ್ಕಾಗಿ ಮಂಗಳಗೌರಿ ಮತ್ತು ವರ ಮಹಾಲಕ್ಷ್ಮೀ ವ್ರತದ ಆಚರಣೆ – ಗೀತಾ ಪ್ರಕಾಶ್.
ಚಳ್ಳಕೆರೆ ಆ.22

ಮಂಗಳ ಗೌರಿ ಮತ್ತು ವರ ಮಹಾಲಕ್ಷ್ಮೀ ವ್ರತದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಗೀತಾ ಪ್ರಕಾಶ್ ಅವರಿಗೆ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ರಂಗಮ್ಮ ಅವರು “ವಿವೇಕಹಂಸ” ಮಾಸ ಪತ್ರಿಕೆಯನ್ನು ಮತ್ತು ಸಿಹಿಯನ್ನು ಕೊಡುಗೆಯಾಗಿ ನೀಡಿದ ಸುಸಂದರ್ಭ…..
ವಿಧವೆತನವನ್ನು ತಪ್ಪಿಸಿ ದೀರ್ಘ ಸುಮಂಗಲಿತನಕ್ಕಾಗಿ ಮಹಿಳೆಯರು ಪ್ರಾಚೀನ ಕಾಲದಿಂದಲೂ ಮಂಗಳ ಗೌರಿ ಮತ್ತು ವರ ಮಹಾಲಕ್ಷ್ಮೀ ವ್ರತದ ಆಚರಣೆಯನ್ನು ಮಾಡುತ್ತಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಮತ್ತು ಕದಳಿ ವಚನ ಮಂಡಳಿಯ ಶ್ರೀಮತಿ ಗೀತಾ ಪ್ರಕಾಶ್ ಅಭಿಪ್ರಾಯ ಪಟ್ಟರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ಸರಸ್ವತಿ ನಾಗರಾಜ್ ಅವರ ನಿವಾಸದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರಾವಣ ಮಾಸದಲ್ಲಿ ಮಂಗಳಗೌರಿ ಮತ್ತು ವರಮಹಾಲಕ್ಷ್ಮೀ ವ್ರತದ ಮಹತ್ವ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ವಿಶೇಷ ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸುನೀತಾ ಗೋಪಾಲಕೃಷ್ಣ, ಮಾಕಂಸ್ ಲಕ್ಷ್ಮೀ ಬಾಲಾಜೀ, ಗೀತಾ ನಾಗರಾಜ್, ತಿಪ್ಪಮ್ಮ ಉಮಾಶಂಕರ್, ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ ನಡೆದರೆ ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ಸರಸ್ವತಿ ನಾಗರಾಜ್, ಗೀತಾ ಷಣ್ಮುಖಪ್ಪ, ವೈಷ್ಣವಿ ರಾಜ್, ಸೃಜನ್ ರಾಜ್, ಚಿತ್ತಮ್ಮ, ಹೆಚ್ ಲಕ್ಷ್ಮೀದೇವಮ್ಮ, ಜಯಲಕ್ಷ್ಮೀ ರವಿ, ಕೌಸಲ್ಯಾ, ತಳುಕಿನ ತೊಯಜಾಕ್ಷಿ, ಪ್ರೇಮಾ, ನಾಗರತ್ನಮ್ಮ, ದ್ರಾಕ್ಷಾಯಣಿ ಉಪಸ್ಥಿತರಿದ್ದರು.

