ಗುರು ಮುಖೇನ ಪಡೆಯುವ ಜ್ಞಾನವೇ ನಿಜವಾದ ಜ್ಞಾನ – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಆ.23

ಪುಸ್ತಕಗಳನ್ನು ಓದುವುದರಿಂದ ಸಿಗುವ ಜ್ಞಾನವು ಲೌಕಿಕ ಜ್ಞಾನವಾದರೆ ಗುರು ಮುಖೇನ ಪಡೆಯುವ ಅರಿವೇ ನಿಜವಾದ ಆಧ್ಯಾತ್ಮಿಕ ಜ್ಞಾನ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಮಹಾತೀರ್ಥಗಳಲ್ಲಿ ಮಹಾಮಾತೆ” ಅವರ ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡಿದರು.

ಶ್ರೀರಾಮಕೃಷ್ಣರ ಮಹಾ ಸಮಾಧಿಯ ನಂತರ ಶ್ರೀಮಾತೆ ಶಾರದಾದೇವಿಯವರು ಶ್ರೀರಾಮಕೃಷ್ಣರ ಮಾರ್ಗ ದರ್ಶನದಲ್ಲಿ ಸಾವಿರಾರು ಭಕ್ತರಿಗೆ ಮಂತ್ರ ದೀಕ್ಷೆ ನೀಡುವ ಗುರುವಾಗಿ- ಮಂತ್ರದೃಷ್ಟಾರರಾಗಿ ಕಾಣಿಸುತ್ತಾರೆ.

ಸ್ವಾಮಿ ಯೋಗಾನಂದರು ಶಾರದಾಮಾತೆಯವರ ಮೇಲಿಟ್ಟಿದ್ದ ಗುರು ಭಕ್ತಿ ಅಸಾಧಾರಣವಾದದ್ದು. ಶ್ರೀಮಾತೆಯವರ ಕೃಪೆಯಿಂದ ಅವರಿಗೆ ಬೃಂದಾವನದಲ್ಲಿ ಶ್ರೀಕೃಷ್ಣನ ಲೀಲಾ ರಹಸ್ಯ ಗೊತ್ತಾಗುತ್ತದೆ ಎಂದು ಮಾತಾಜೀ ‌ಹೇಳಿದರು.

ಸತ್ಸಂಗದ ಪ್ರಯುಕ್ತ ಸದ್ಭಕ್ತರಾದ ಶ್ರೀಮತಿ ಗೀತಾ ನಾಗರಾಜ್ ಅವರಿಂದ ವಿಶೇಷ ಭಜನೆ, ದಿವ್ಯತ್ರಯರಿಗೆ ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಸಂಧ್ಯಾ ಸುಧಾಕರ್, ವನಜಾಕ್ಷಿ ಮೋಹನ್, ಜಿ ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಬಿ ಸುಮನಾ, ಚೇತನ್, ಹೃತಿಕ್, ಪುಷ್ಪಲತಾ, ಪ್ರವಲ್ಲಿಕಾ, ಸುಧಾಮಣಿ, ಮಂಜುಳಮ್ಮ, ರಶ್ಮಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button