🚨 BREAKING NEWS 🚨🔴 BREAKING NEWS 🔴KRIDL ಹಾಗೂ ಮೀನುಗಾರಿಕಾ ಇಲಾಖೆ ಹೆಸರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ – ತಕ್ಷಣ ತನಿಖೆಗೆ ಕಾಂಗ್ರೆಸ್ ಉಗ್ರ ಆಗ್ರಹ..!

ಬೆಂಗಳೂರು/ಉಡುಪಿ ಆ.23

ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ವ್ಯಾಪ್ತಿಯಲ್ಲಿ KRIDL (ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ) ಮತ್ತು ಮೀನುಗಾರಿಕಾ ಇಲಾಖೆಯ ಹೆಸರನ್ನು ಬಳಸಿ ಕೊಂಡು ಬೃಹತ್ ಪ್ರಮಾಣದ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ತಕ್ಷಣವೇ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ, ನಿಯಮ ಬಾಹಿರವಾಗಿ ನಡೆಯುತ್ತಿರುವ ಮರಳು ದಂಧೆಯನ್ನು ತಕ್ಷಣ ಸ್ಥಗಿತ ಗೊಳಿಸ ಬೇಕು ಎಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಪ್ರಮುಖ ಆರೋಪಗಳು ಮತ್ತು ಆಗ್ರಹಗಳು:-

ದಾಖಲೆಗಳಿಲ್ಲದೆ ಮರಳು ಲೂಟಿ:-

ಸಂಬಂಧಪಟ್ಟ ಪ್ರದೇಶಗಳಲ್ಲಿ ನಿಜವಾದ ಸರ್ಕಾರಿ ಕಾಮಗಾರಿಗಳು ನಡೆಯುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸದೇ, ಅಗತ್ಯ ಅನುಮತಿ ಹಾಗೂ ದಾಖಲೆಗಳಿಲ್ಲದೆ ಇಲಾಖೆಗಳ ಹೆಸರಿನಲ್ಲಿ ಮರಳು ತೆಗೆಯಲಾಗುತ್ತಿದೆ.

6 ಡೆಕ್ಕ್‌ಗಳಿಗೆ ಅಕ್ರಮ ಅನುಮತಿ:-

ಉಸ್ತುವಾರಿ ಸಚಿವರ ಗಮನಕ್ಕೆ ತರದೆ ಅಥವಾ ಯಾವುದೇ ಮಾಹಿತಿ ನೀಡದೆ ಇತ್ತೀಚೆಗೆ 6 ಡೆಕ್ಕ್‌ಗಳಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ. ಯಾವ ಅಧಿಕಾರ ಮತ್ತು ನಿಯಮಗಳ ಅಡಿಯಲ್ಲಿ ಈ ಅನುಮತಿ ನೀಡಲಾಗಿದೆ ಎಂಬುದನ್ನು ಜಿಲ್ಲಾಡಳಿತ ತಕ್ಷಣ ಸ್ಪಷ್ಟಪಡಿಸ ಬೇಕು.

ಸ್ಥಳ ಪರಿಶೀಲನೆಗೆ ಆಗ್ರಹ:-

ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಬೇಕು. ಮಂಜೂರಾದ ಕಾಮಗಾರಿಗಳು, ಅನುಮತಿ ಪತ್ರಗಳು ಮತ್ತು ತೆಗೆಯಲಾದ ಮರಳಿನ ಪ್ರಮಾಣದ ಬಗ್ಗೆ ಪಾರದರ್ಶಕ ಮಾಹಿತಿ ನೀಡಬೇಕು.

ಕಾನೂನು ಕ್ರಮಕ್ಕೆ ಪಟ್ಟು:-

ಸರ್ಕಾರಿ ಇಲಾಖೆಗಳ ಹೆಸರು ಬಳಸಿ ಸಾರ್ವಜನಿಕ ಸಂಪನ್ಮೂಲ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಬೇಕು. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ವ್ಯಕ್ತಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು.

ಪಾರದರ್ಶಕ ಟೆಂಡರ್‌ಗೆ ಒತ್ತಾಯ:-

ಕರಾವಳಿ ಭಾಗದ ಮರಳು ಸಂಪನ್ಮೂಲವನ್ನು ಮುಕ್ತ ಹಾಗೂ ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ಮೂಲಕ ನಿರ್ವಹಿಸಬೇಕು. ನಿಯಮ ಬಾಹಿರ ಚಟುವಟಿಕೆಗಳನ್ನು ತಡೆದು ಸರ್ಕಾರಕ್ಕೆ ಬರುವ ಆದಾಯ ಸೋರಿಕೆಯನ್ನು ತಪ್ಪಿಸಬೇಕು ಮತ್ತು ಸಾರ್ವಜನಿಕರಿಗೆ ನ್ಯಾಯ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button