ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ – ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ.

ವಿಜಯಪುರ ಆ.23

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ವಿಜಯಪುರ ಇದರ ನೂತನ ಪದಾಧಿಕಾರಿಗಳ ಸಮಾರಂಭವು ದಿನಾಂಕ 22-8-2026 ರಂದು ಮಧ್ಯಾಹ್ನ 2 ಗಂಟೆಗೆ ಮಧುವನ ಹೋಟೆಲ್ ವಿಜಯಪದಲ್ಲಿ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀಮತಿ ಸುಮತಿ ಜೆ ಕಾರ್ಯಾಧ್ಯಕ್ಷರಾದ ನಾಗನಗೌಡ, ಗೌರಾಧ್ಯಕ್ಷರಾದ ಶ್ರೀ ಸುರೇಶ ಶೆಡಶ್ಯಾಳ, ಪ್ರಧಾನ ಕಾರ್ಯದರ್ಶಿಗಳಾದ ಮಾನ್ಯ ಶ್ರೀ ಸಂತೋಷ ಸಲಗರ, ಸನ್ಮಾನ್ಯ ಶ್ರೀಮತಿ ಜಯಶ್ರೀ ಬೆಣ್ಣಿ, ಶ್ರೀಮತಿ ನೀಲಾ ಇಂಗಳೆ, ಉಪಾಧ್ಯಕ್ಷರಾದ ಶ್ರೀ ಬಿ ಟಿ ಗೌಡರ, ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ನೆರವೇರಿತು. ನೂತನವಾಗಿ ಜಿಲ್ಲಾಧ್ಯಕ್ಷರಾಗಿ ಶ್ರೀ ಜಗದೀಶ ಬೋಳಸೂರ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ರವೀಂದ್ರ ಹೂಗಾರ, ಉಪಾಧ್ಯಕ್ಷರಾಗಿ ಶ್ರೀ ರಾಯಪ್ಪ ಇವಣಗಿ, ಹಾಗೂ ಶ್ರೀಮತಿ ಎಸ್ ಎಮ್ ಭಾಟಿ, ಖಜಾಂಚಿಗಳಾಗಿ ಶ್ರೀ ಎಸ್ ಆರ್ ಪಾಟೀಲ.

ಗೌರವ ಸಲಹೆಗಾರರಾಗಿ ಶ್ರೀ ಬಸಯ್ಯ ಹಿರೇಮಠ, ಗೌರವಾಧ್ಯಕ್ಷರಾಗಿ ಶ್ರೀ ಎಂ ಎಸ್ ಭೂಸಗೊಂಡ, ಕಾರ್ಯಾಧ್ಯಕ್ಷರಾಗಿ ಶ್ರೀ ಅರ್ ಎಮ್ ರಜಪೂತ್, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಮತಿ ಶೈಲಶ್ರೀ ಬಿ ಯಡ್ರಾಮಿ, ಹಾಗೂ ಶ್ರೀ ಝಡ್ ಆಯ್ ಇಂಡಿಕರ್, ಸಹಕಾರದರ್ಶಿಗಳಾಗಿ ಶ್ರೀಮತಿ ಅಂಬಿಕಾ ಗೋಗಿ, ಶ್ರೀ ಎ ಎಲ್ ಆಲಗೂರ, ನೇಮಕ ಮಾಡಿ ಅನುಮೋದನೆ ಪತ್ರ ನೀಡಿ ಗೌರವಿಸಿ ಸನ್ಮಾನಿಸಿದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ್ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button