ಅಡಿಕೆ ಬ್ಯಾನ್ ಮಾಡಿದ್ದು ಕೇಂದ್ರ ಸರ್ಕಾರ – ಜಿ.ಎಚ್ ಶ್ರೀನಿವಾಸ್.
ತರೀಕೆರೆ ಆ.23

ಅಭಿವೃದ್ಧಿ ಕೆಲಸವನ್ನು ಕ್ಷೇತ್ರದಲ್ಲಿ ಅತಿ ಹೆಚ್ಚಾಗಿ ಮಾಡುತ್ತಿದ್ದೇನೆ, ತಾಯಿ ಮಗು ಆಸ್ಪತ್ರೆ ಶೀಘ್ರದಲ್ಲಿ ಉದ್ಘಾಟನೆ ಮಾಡಿ ಸಾರ್ವಜನಿಕರ ಸೇವೆಗೆ ನೀಡಲಾಗುವುದು ಎಂದು ಶಾಸಕ ಜಿ ಎಚ್ ಶ್ರೀನಿವಾಸ್ ಹೇಳಿದರು, ಅವರು ಉಪ್ಪಾರ ಬಸವನಹಳ್ಳಿ ಗ್ರಾಮದಲ್ಲಿ 70ಲಕ್ಷ ಅನುದಾನದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ್ಯಾಂತ ರಸ್ತೆ ಚರಂಡಿ ಕಾಮಗಾರಿಗಳನ್ನು ಮಾಡಿಸಿದ್ದೇನೆ ಇನ್ನು ಅಗತ್ಯ ಇರುವ ಕಡೆ ಮಾಡಿಸುತ್ತೇನೆ.
ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡುತ್ತಿದ್ದೇನೆ ವಿರೋಧ ಪಕ್ಷದ ಕೆಲವರು ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ, ನನ್ನ ವಿರುದ್ಧ ಮುಷ್ಕರಗಳನ್ನು ಮಾಡುತ್ತಿದ್ದಾರೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ನಾನು ಲಭ್ಯವಿಲ್ಲದ ಸಮಯದಲ್ಲಿ ನನ್ನ ಪತ್ನಿ, ಮಗಳು ಸಾರ್ವಜನಿಕರ ಅವಹಾಲುಗಳನ್ನು ಸ್ವೀಕರಿಸಿ ಜನರಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವುದು ಅವರಿಗೆ ಸಹಿಸಲಾಗದೆ ಲೇವಡಿ ಮಾಡುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ. ಅಡಿಕೆ ಬ್ಯಾನ್ ಮಾಡಿದ್ದು ಕೇಂದ್ರ ಸರ್ಕಾರ ಈ ಕುರಿತು ಸುಪ್ರೀಂಕೋರ್ಟಿನಲ್ಲಿ ಕೇಸು ನಡಿಯುತ್ತಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಯು ಫಾರೂಕ್ ಮಾತನಾಡಿ ಶಾಸಕರ ಕುಟುಂಬದವರು ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವುದು ಕ್ಷೇತ್ರದ ಜನರ ಹಿತ ದೃಷ್ಟಿಯಿಂದ. ಆದರೆ ವಿರೋಧ ಪಕ್ಷದವರ ಟೀಕೆಗಳು ಆರೋಗ್ಯಕರ ವಾಗಿರಬೇಕು ಎಂದು ಹೇಳಿದರು.
ಪುರಸಭಾ ಅಧ್ಯಕ್ಷರಾದ ವಸಂತಕುಮಾರ್ ಮಾತನಾಡಿ ಶಾಸಕರು ಪುರಸಭೆಯ ಎಲ್ಲಾ ವಾರ್ಡ್ ಗಳಿಗೂ, ಸದಸ್ಯರಿಗೂ ಕೋಟ್ಯಾಂತರ ರೂಪಾಯಿ ಅನುದಾನ ಕೊಟ್ಟಿದ್ದಾರೆ, ಬಿಜೆಪಿಯ ಒಬ್ಬರೇ ಸದಸ್ಯರಿದ್ದರು ಸಹ ಕೋಟಿಗಟ್ಟಲೆ ಅನುದಾನ ನೀಡಿದ್ದಾರೆ ತಾರತಮ್ಯ ಮಾಡಿಲ್ಲ ಎಂದರು.
ಸದಸ್ಯರಾದ ದಾದಾಪೀರ್, ಪರಮೇಶ್, ಕುಮಾರಪ್ಪ ನಾಮಿನಿ ಸದಸ್ಯ ಆದಿಲ್ ಪಾಷಾ ನೌಕರ ಸಂಘದ ಅಧ್ಯಕ್ಷ ಅನಂತಪ್ಪ ಕೆ.ಡಿ.ಪಿ ಸದಸ್ಯರಾದ ಮೆಹಬೂಬ್ ಮತ್ತು ಗ್ರಾಮದ ಮುಖಂಡರು ಮಾತನಾಡಿದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
