ಪಟ್ಟಣದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ – ಚಾಲನೆ ನೀಡಿದ ಶಾಸಕರು.
ಮೊಳಕಾಲ್ಮೂರು ಆ.23

ಪಟ್ಟಣದಲ್ಲಿ ನಿರ್ಮಿಸಲಾಗಿರುವ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎನ್. ವೈ ಗೋಪಾಲಕೃಷ್ಣರವರು, ಮಾನ್ಯ ಸಚಿವರಾದ ಶ್ರೀ ಟಿ. ರಘುಮೂರ್ತಿಯವರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು.
ಬಹು ದಿನಗಳಿಂದ ಸಾರ್ವಜನಿಕರ ಬೇಡಿಕೆ ಯಾಗಿದ್ದ ನೂತನ ಬಸ್ ನಿಲ್ದಾಣ ಸೇವೆಗೆ ಲಭ್ಯವಾಗಿರುವುದು ಮೊಳಕಾಲ್ಮೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.
ಮೊಳಕಾಲ್ಮೂರು ಕ್ಷೇತ್ರಕ್ಕೆ ನ್ಯಾಯಯುತವಾದ ಎಂ.ಎಲ್.ಎ ಬಂದಿರುವುದರಿಂದ ಮೊಳಕಾಲ್ಮೂರು ತಾಲೂಕು ಸುಭಿಕ್ಷವಾಗಿ ಮುಂದುವರೆಯಲಿದೆ ಎಂದು ಕಾಲಜ್ಞಾನ ಶಿವಕುಮಾರ ಸ್ವಾಮಿಗಳು ಅವರು ನುಡಿದಂತಹ ಮಾತುಗಳು ಮತ್ತು ಅಭಿವೃದ್ಧಿ ಹರಿಕಾರರು ಜ್ಞಾನದ ದಾರಿಯಲ್ಲಿ ನಡೆಯುವವರು ಅಜ್ಞಾನವೆಂಬ ಕತ್ತಲನ್ನು ತೊಳೆದು ಜ್ಞಾನವೆಂಬ ಬೆಳಕಿನಲ್ಲಿ ಮುಂದುವರೆಸಲಿದ್ದಾರೆ ಎನ್.ವೈ ಗೋಪಾಲಕೃಷ್ಣ ಶಾಸಕರು ಮೊಳಕಾಲ್ಮೂರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜನ ಪ್ರತಿನಿಧಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಜನರ ಅನುಕೂಲಕ್ಕಾಗಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಮೊಳಕಾಲ್ಮೂರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಶಾಸಕರಾದ ಶ್ರೀ ಎನ್. ವೈ ಗೋಪಾಲಕೃಷ್ಣರವರು ತಿಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಎಚ್ ಮೀನಕೆರಿ ಹೊಂಬಾಳೆ ಮೊಳಕಾಲ್ಮುರು

