“ವಿಶ್ವಾಸ ಜೀವ ಕಳೆ”…..

ತಂದೆ ತಾಯಿ ಮಮತೆಯ ಆಸರೆಯು
ಸಹೋದರಲಿ ಕರುಳಿನ ಕನಿಕರವು
ಅಕ್ಕ ತಂಗಿಯರ ಹಾರೈಸುವ ಸುಭಾವವು
ಗುರುವಿನ ಮೇಲೆ ಭಕ್ತಿ ಶಿಷ್ಯನ ಶಕ್ತಿಯು
ಜ್ಞಾನ ಬೆಳದಂತೆ ಬದುಕುವ ಕಲೆ ಕರಗತವು
ಗೆಳತನದ ಒಲವು ಬಾಳ ಬಲವು
ನೆರೆ ಹೊರೆಯವರ ಸಹಕಾರ ಅಗತ್ಯತೆಯ
ನಿತ್ಯ ಸತ್ಯ ನುಡಿ ಬಾಳ್ವೆಯ ಬೆಳಕು
ಸೇವಾ ಮನೋಭಾವ ಇರಲು ವಿಶ್ವಾಸದ
ಜೀವ ಕಳೆಯು
ಬಾಳ ಬಂಡಿ ಸಾಗಲು ಮನದರಿವು ಮುಖ್ಯವು
ಪತಿ ಸತಿ ಒಂದಾದ ಭಕ್ತಿ ಜೀವನ ಶಕ್ತಿಯು
ನಿಯತ್ತು ಇದ್ದವ ಜಗದ ನಾಯಕನು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ
