ಕನಕ ವಿದ್ಯಾಪೀಠ ಶಾಲೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ – ಬದುಕು ಬರಹ ಮತ್ತು ಸಾಹಿತ್ಯ ಅರಿವು ಕಾರ್ಯಕ್ರಮ ಜರಗಿತು.
ನಾಲವಾರ ಆ.26


ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾಲವಾರ ಸ್ಟೇಷನ್ ನಲ್ಲಿ ಇರುವ ಕನಕ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕ ಬರಹ ಮತ್ತು ಸಾಹಿತ್ಯದ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.
ಇದೇ ಸಂಧರ್ಭದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಿಸಲಾಯಿತು. ಈ ಕನ್ನಡ ನಾಡು,ನುಡಿ ಮತ್ತು ಭಾಷೆ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಎಲ್ಲರೂ ವ್ಯಕ್ತಪಡಿಸಿದರು.
ಎಲ್ಲಾ ವೇದಿಕೆಯ ಮೇಲೆ ಕುಳಿತು ಕೊಂಡ ಗಣ್ಯರಿಗೆ ನಾಲವಾರ ವಲಯ ಘಟಕ ಕಸಾಪ ಪದಾಧಿಕಾರಿಗಳು ಕನ್ನಡ ಶಾಲು ಹೊದಿಸಿ ಸತ್ಕಾರ ಮಾಡಿದರು. ಮಾಸ್ತಿ ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯ ನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು.
ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. ಸುಬ್ಬಣ್ಣ ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃ ಕರಣವನ್ನು ಕಥೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ.
ಸಣ್ಣ ಕಥೆಗಳ ಜನಕರೆಂದೇ ಅವರನ್ನು ಕರೆಯುತ್ತಿದ್ದರು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು. ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. “ಭಾರತತೀರ್ಥ” “ಆದಿಕವಿ ವಾಲ್ಮೀಕಿ” ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ “ಶ್ರೀರಾಮ ಪಟ್ಟಾಭಿಷೇಕ” ಅವರ ಒಂದು ಕಾವ್ಯ. ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ.
ಮಾಸ್ತಿ ಬರೆದ ಕಾದಂಬರಿಗಳು ಎರಡು.ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ – ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು,ಮತ್ತೊಂದು “ಚನ್ನಬಸವನಾಯಕ”. “ಭಾವ’–ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥ ಮುಖ್ಯ ಕೃತಿಗಳು. ಅವರ ಕಾಕನಕೋಟೆ ಚಲನ ಚಿತ್ರವಾಗಿ ಅತ್ಯಂತ ಜನಪ್ರಿಯವೂ ಆಗಿ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿ ಕೊಂಡಿತು.

ಮಾಸ್ತಿಯವರಿಗೆ ಹಲವು ಬಗೆಯ ಪ್ರಶಸ್ತಿಗಳು ಹುಡುಕಿ ಕೊಂಡು ಬಂದಿದ್ದವು:-
ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್ ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್ 1929 ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಮೈಸೂರು ಮಹಾರಾಜರು “ರಾಜಸೇವಾ ಪ್ರಸಕ್ತ” ಎಂದು ಗೌರವಿಸಿದ್ದರು.
1946 ರಲ್ಲಿ ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ 1953ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ 1968 ರಲ್ಲಿ ಅವರ ಕಥೆಗಳ ಸಂಕಲನಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1983 ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಕನ್ನಡಕ್ಕೆ ನಾಲ್ಕನೆಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಮಾಸ್ತಿ ಎಂದರೆ ಕನ್ನಡದ ಆಸ್ತಿ ಎಂಬ ಬಿರುದಾವಳಿಯೂ ಇತ್ತು, ಅಂತಹ ಮೇರು ಉತ್ತುಂಗದ ಲಯದಲ್ಲಿದ್ದ ಜೂನ್ 6-1983 ರಂದು ನಿಧನ ಹೊಂದಿದರು.
ಮತ್ತೊಂದು ಗಮನಿಸ ಬೇಕಾದ ಅಂಶವೆಂದರೆ:-
ಅವರು ಹುಟ್ಟಿದ್ದು ಮತ್ತು ನಿಧನರಾದದ್ದು ಜೂನ್ 6 ರಂದೇ. ಹೀಗೆ ಹುಟ್ಟು ಸಾವಿನಲ್ಲೂ ಒಂದು ರೀತಿಯ ದಾಖಲೆಯನ್ನೇ ಸೃಷ್ಟಿಸಿ ಹೋದಂತಹವರು ನಮ್ಮ ಮಾಸ್ತಿ.ಎಷ್ಟೇ ಅಧಿಕಾರವಿದ್ದರೂ ತಮ್ಮ ಬಾಲ್ಯದ ಬಡತನವನ್ನು ಮರೆಯದೆ ಅಧಿಕಾರದ ಮದವನ್ನು ತಲೆಗೆ ಏರಿಸಿ ಕೊಳ್ಳದೆ. ಜನರಿಗಾಗಿ ಮತ್ತು ಕನ್ನಡ ಸಾಹಿತ್ಯಕ್ಕಾಗಿಯೇ ತಮ್ಮ ಜೀವನವನ್ನು ಮೀಸಲಿಟ್ಟ ಧೀಮಂತ ವ್ಯಕ್ತಿ ನಮ್ಮ ಮಾಸ್ತಿ. ಹಾಗಾಗಿಯೇ ಅವರು ನಮ್ಮ ಕನ್ನಡದ ಆಸ್ತಿ. ಅದಕ್ಕಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳು ಎಂದು ಯುವ ಕವಯಿತ್ರಿ ರೂಪಾ ಪೂಜಾರಿ ಅವರು ಉಪನ್ಯಾಸ ಮಾಡಿದರು.
ಮತ್ತು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳು ಹರಿಶ್ಚಂದ್ರ ಚವ್ಹಾಣ ನಾಲವಾರ ಸ್ಟೇಷನ್. ಇಬ್ರಾಹಿಂ ಸೇಠ ನಾಲವಾರ ಸ್ಟೇಷನ್. ಮತ್ತು ನಾಲವಾರ ವಲಯ ಕಸಾಪ ಕಾರ್ಯದರ್ಶಿ ಸಿದ್ದುಗೌಡ ಕುರಾಳ ಸುಗೂರ ಎನ್. ರಾಜೇಂದ್ರ ಎನ್ ಕೊಲ್ಲೂರು ನಾಲವಾರ ವಲಯ ಘಟಕ ಕಜಾಪ ಅಧ್ಯಕ್ಷರು. ಮತ್ತು ರೋಹಿತ ಸಾಹೇಬ್. ಶಿವಲೀಲಾ ತುನ್ನೂರ ಅವರು ಮಾತನಾಡಿ ಶಿವಲೀಲಾ ತುನ್ನೂರ ಮೇಡಂ ಅವರು ರೈತರ ಸಂಕಷ್ಟವನ್ನು ಮನ ಮುಟ್ಟುವಂತೆ ಬಿಂಬಿಸುವ ಕವನವನ್ನು ವಾಚನ ಮಾಡಿದರು.
“ರೈತರ ಮೇಲೆ ಮುನಿಸೇಕೆ ಓ ಮಳೆರಾಯ? ನೀ ಇಲ್ಲದೇ ಇದ್ದರೆ ಈ ರೈತರ ಪಾಡೇನು? ಓ ಮಳೆರಾಯ, ನೀ ಇಲ್ಲದೆ ಈ ಬೆಳೆಯ ಕಳೆಯೇ ಹೇಗೆ?” ಎಂಬ ಭಾವಪೂರ್ಣ ಸಾಲುಗಳ ಮೂಲಕ ಮಳೆಯ ಮಹತ್ವ ಹಾಗೂ ರೈತರ ಬದುಕಿನ ಸಂಕಷ್ಟವನ್ನು ಅತ್ಯಂತ ಮನೋಜ್ಞವಾಗಿ ವ್ಯಕ್ತಪಡಿಸಿದರು. ಅವರ ಕವನ ವಾಚನ ಎಲ್ಲರ ಮನಸ್ಸನ್ನೂ ಮುಟ್ಟಿತು.

ರೈತರ ಬದುಕು ಮಳೆಯ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬ ಸಂದೇಶವನ್ನು ಕವನದ ಮೂಲಕ ಪರಿಣಾಮಕಾರಿ ಯಾಗಿ ಸಾರಿಕೋಶಾಧ್ಯಕ್ಷರು ಸಿದ್ದು ಮಳಬಾ ನಾಲವಾರ ವಲಯ ಕಸಾಪ ಕೋಶಾಧ್ಯಕ್ಷರು ಸಿದ್ದು ಮಳಬಾ ಅವರು, ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರು, ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರ ಇಡೀ ರಾಜ್ಯಾದ್ಯಂತ ಸರ್ಕಾರಿ ಆವರಣಗಳಲ್ಲಿ ನಿರ್ಬಂಧ ಹೇರಬಾರದು ಎಂದು ಆಗ್ರಹಿಸಿದರು.
ಈ ವೇದಿಕೆಯ ಮೂಲಕ ಅವರು, “ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯ ಬೆಳವಣಿಗೆಗಾಗಿ ನಡೆಯುವ ಕಸಾಪ ಕಾರ್ಯಕ್ರಮಗಳಿಗೆ ಸರ್ಕಾರದ ಸಹಕಾರ ಅಗತ್ಯ. ಆದ್ದರಿಂದ ಇಂತಹ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರದೆ ಅವಕಾಶ ಕಲ್ಪಿಸಬೇಕು” ಎಂಬ ಸಂದೇಶವನ್ನು ಸಾರಿದರು. ಇದೇ ಸಮಯದಲ್ಲಿ ರಣಧೀರ ಹೊಸ್ಮನಿ ಭಾಷಣ ಮಾಡಿದರು.
ಆಶಯ ನುಡಿ ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಅಧ್ಯಕ್ಷರಾದ ಅಂಜುನಾಥ ಎಸ್. ನಾಯ್ಕಲ್ ಅವರು ಆಶಯ ನುಡಿಗಳನ್ನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ಕಾರ್ಯಕ್ರಮಗಳ ಮೂಲಕ ಪ್ರತಿಯೊಂದು ಗ್ರಾಮೀಣ ಮಟ್ಟದಲ್ಲಿಯೂ ಕನ್ನಡ ಸಾಹಿತ್ಯದ ಅರಿವುನ್ನು ಮಕ್ಕಳಲ್ಲಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಮಕ್ಕಳಿಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಕೈಲಾದ ಸೇವೆಯನ್ನು ಕನ್ನಡ ನಾಡು ನುಡಿಗಾಗಿ ಮಾಡಬೇಕು ಎಂದು ತಿಳಿಸಿದರು. ತಮ್ಮ ಮಾತಿನ ನಡುವೆ ಮಕ್ಕಳೊಂದಿಗೆ ಹಾಸ್ಯಮಯವಾಗಿ ಸಂವಾದ ನಡೆಸಿ, ಮನರಂಜನೆಯನ್ನೂ ನೀಡಿದರು.
ಅವರ ಸರಳ, ಸ್ನೇಹಪರ ಮಾತುಗಳು ಮಕ್ಕಳಲ್ಲಿ ಸಂತೋಷ ಮೂಡಿಸಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಮಲ್ಲೇಶಿ ಸೊಂಟೇನರ್ ಮತ್ತು ಶಾಲಾ ಮಕ್ಕಳು ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸಿಂಧು. ದ್ವೀತಿಯ ಸ್ಥಾನ ದಲ್ಲಿ ಜಾನ್ವೀ ಗೇ ಪ್ರಮಾಣ ಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ವಾಗತ ಭಾಷಣ ಉದಯ ಕುಮಾರ ಸ ಶಿಕ್ಷಕರು ಮಾಡಿದರು. ವಂದನಾರ್ಪಣೆ ಅರುಣಕುಮಾರ ಸುಣಗಾರ ನಾಲವಾರ ವಲಯ ಕಸಾಪ ಕಾರ್ಯದರ್ಶಿ ಮಾಡಿದರು.
ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಅವರು ನಿರೂಪಣೆ ಮಾಡಿದರು.

