ಶ್ರೀ ಹವಾ ಮಲ್ಲಿನಾಥ ಮಹಾರಾಜರ 59 ನೇ. ಜನ್ಮದಿನೋತ್ಸವದ ಅಂಗವಾಗಿ – ಬಡ ರೈತರಿಗೆ ಉಚಿತ ಕ್ಷೌರ ಸೇವೆ.
ನಾಲವಾರ ಆ.27


ಪರಮ ಪೂಜ್ಯರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜರ 59 ನೇ. ಶುಭ ಜನ್ಮದಿನೋತ್ಸವದ ಪ್ರಯುಕ್ತ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಜನಪ್ರಿಯ ಹೇರ್ ಸಲೂನ್ & ಬ್ಯೂಟಿ ಪಾರ್ಲರ್‌ನಲ್ಲಿ ಸಾರ್ವಜನಿಕರು ಹಾಗೂ ಬಡ ರೈತ ಬಂಧುಗಳಿಗಾಗಿ ಉಚಿತ ಕ್ಷೌರ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜೈ ಭಾರತ ಮಾತಾ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಾಮಾಜಿಕ ಕಳಕಳಿಯ ಹರಿಕಾರರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನದ ಅಂಗವಾಗಿ, ನಿಸ್ವಾರ್ಥ ಸಮಾಜ ಸೇವಕರಾದ ಹಾಗೂ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಿ. ಹಡಪದ, ಸುಗೂರ ಎನ್. ಅವರು ಈ ವಿಶೇಷ ಸೇವಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ 85 ಕ್ಕೂ ಹೆಚ್ಚು ಬಡ ರೈತ ಕುಟುಂಬಗಳ ಜನತೆಗೆ ಉಚಿತ ಕ್ಷೌರ ಸೇವೆ ಸಲ್ಲಿಸಲಾಯಿತು.
📅 ದಿನಾಂಕ:-26-08-2026
⏰ ಸಮಯ:-ಬೆಳಿಗ್ಗೆ 9 ಗಂಟೆ ಯಿಂದ ಮಧ್ಯಾಹ್ನ 4 ಗಂಟೆಯ ವರೆಗೆ
📍 ಸ್ಥಳ:-ಜನಪ್ರಿಯ ಹೇರ್ ಸಲೂನ್, ನಾಲವಾರ ಗ್ರಾಮ, ಚಿತ್ತಾಪುರ ತಾಲೂಕ
ಮಲ್ಲಿಕಾರ್ಜುನ ಬಿ. ಹಡಪದ ಅವರು ಇದು ವರೆಗೆ 2065 ಕ್ಕೂ ಹೆಚ್ಚು ಜನರಿಗೆ ಉಚಿತ ಕ್ಷೌರ ಸೇವೆ ಸಲ್ಲಿಸುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.
ಅನಾಥರು, ವಿಕಲ ಚೇತನರು, ನಿರ್ಗತಿಕರು, ಹಿರಿಯ ನಾಗರಿಕರು, ಅನಾಥಾಶ್ರಮದ ನಿವಾಸಿಗಳು, ಶಾಲಾ ಮಕ್ಕಳು, ವಿಶೇಷ ಚೇತನ ಮಕ್ಕಳು, ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ಸಾಧು-ಸಂತರು, ಅಂಧರು, ಮೂಕ-ಕಿವುಡರು ಹಾಗೂ ವಿವಿಧ ಸಂಕಷ್ಟದಲ್ಲಿರುವ ಜನರಿಗೆ ಅವರು ನಿರಂತರವಾಗಿ ಉಚಿತ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಸಮಾಜ ಸೇವೆಯನ್ನು ತನ್ನ ಜೀವನದ ಧ್ಯೇಯವನ್ನಾಗಿ ಮಾಡಿ ಕೊಂಡಿರುವ ಮಲ್ಲಿಕಾರ್ಜುನ ಬಿ. ಹಡಪದ, ಸುಗೂರ ಎನ್. ಅವರು, ಪೂಜ್ಯರ ಜನ್ಮದಿನೋತ್ಸವ ಗಳಂತಹ ವಿಶೇಷ ಸಂದರ್ಭಗಳಲ್ಲಿ ಸಮಾಜದ ಬಡವರು, ನಿರ್ಗತಿಕರು ಹಾಗೂ ಅಗತ್ಯವಿರುವವರಿಗೆ ಉಚಿತ ಸೇವೆ ಸಲ್ಲಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಅವರು ಮಾತನಾಡಿ “ನನ್ನಿಂದ ಸಾಧ್ಯವಾದಷ್ಟು ಸಮಾಜದ ಬಡವರು, ಅನಾಥರು, ನಿರ್ಗತಿಕರು, ಶಾಲಾ ಮಕ್ಕಳು ಹಾಗೂ ದುರ್ಬಲ ವರ್ಗದ ಜನರಿಗೆ ಉಚಿತ ಸೇವೆ ಸಲ್ಲಿಸುವುದು ನನ್ನ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿಯೂ ಅನಾಥಾಶ್ರಮಗಳು, ಶಾಲೆಗಳು ಹಾಗೂ ನಿರ್ಗತಿಕರ ಕೇಂದ್ರಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೇವಾ ಕಾರ್ಯಕ್ರಮಗಳನ್ನು ನಡೆಸಲು ನಾನು ಸಿದ್ಧನಿದ್ದೇನೆ” ಎಂದು ತಿಳಿಸಿದರು.
ಸಮಾಜದ ಸೇವೆ ಮಾಡುವ ಅವರ ಈ ಮಾನವೀಯ ಕಾರ್ಯ ಇನ್ನೂ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಮುಂದುವರೆಯಲಿ ಹಾಗೂ ಅವರ ಸೇವೆ ಇನ್ನಷ್ಟು ಅಗತ್ಯವಿರುವ ಜನರಿಗೆ ತಲುಪಲಿ ಎಂಬುದು ಸಮಾಜದವರ ಆಶಯವಾಗಿದೆ.
🙏“ಜನಸೇವೆಯೇ ಜನಾರ್ದನ ಸೇವೆ”🙏
ನಿಸ್ವಾರ್ಥ ಸಮಾಜ ಸೇವಕ ಮಲ್ಲಿಕಾರ್ಜುನ ಬಿ. ಹಡಪದ, ಸುಗೂರ ಎನ್. ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ

