ಕೆ.ಇ.ಬಿಯಲ್ಲಿ ಹೆಸ್ಕಾಂ ಉಪ ವಿಭಾಗ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು & ನೂಲಿ ಚಂದಯ್ಯನವರ ಜಯಂತೋತ್ಸವ ಆಚರಣೆ.
ಮುದ್ದೇಬಿಹಾಳ ಆ.29


ಪಟ್ಟಣದ ಕೆಇಬಿಯಲ್ಲಿ ಹೆಸ್ಕಾಂ ಮುದ್ದೇಬಿಹಾಳ ಉಪ ವಿಭಾಗದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಮತ್ತು ನೂಲಿಯ ಚಂದಯ್ಯ ಜಯಂತಿಯ ಅಂಗವಾಗಿ ಭಾವ ಚಿತ್ರಕ್ಕೆ ಮುದ್ದೇಬಿಹಾಳ ಉಪ ವಿಭಾಗದ ಸಹಾಯಕ ಇಂಜಿನಿಯರ್ ಆದ ಆರ್. ಆರ್ ಹಂಡಿ ಅವರು ಪೂಜೆ ಸಲ್ಲಿಸಿದರು. ಇದೇ ವೇಳೆಯಲ್ಲಿ ಸಹಾಯಕ ಲೇಕ್ಕಾಧಿಕಾರಿಗಳಾದ ಹೆಚ್ ಎ ನಾಯ್ಕೋಡಿ, ಮತ್ತು ತಾಂತ್ರಿಕ ಸಹಾಯಕ ಇಂಜಿನಿಯರ್ ನಾಗರಾಜ ಬಸರಕೋಡ ಸೇರಿದಂತೆ ಸಿಬ್ಬಂದಿಗಳು ಇದ್ದರು.
ವರದಿ:ಜಿ.ಎನ್ ಬೀರಗೊಂಡ (ಮುತ್ತು) ಢವಳಗಿ
