🚨BREAKING NEWS | ಬ್ರೇಕಿಂಗ್ ನ್ಯೂಸ್🚨ಕೋಟ ಪೊಲೀಸ್ ಠಾಣೆಯಲ್ಲಿ ಅದ್ದೂರಿ ರಕ್ಷಾ ಬಂಧನ ಸಂಭ್ರಮ, ‘ರಕ್ಷಕ’ ರಿಗೆ ರಾಖಿ ಕಟ್ಟಿ ಸೌಹಾರ್ದತೆ ಮೆರೆದ – ಸಾರ್ವಜನಿಕರು ಹಾಗೂ ಗಣ್ಯರು..!
ಕೋಟ/ಕುಂದಾಪುರ ಆ.29


ಮಂಡಲ ಮಹಿಳಾ ಮೋರ್ಚಾ ವತಿಯಿಂದ ಇಂದು ಕೋಟ ಪೊಲೀಸ್ ಠಾಣೆಯಲ್ಲಿ ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಊರಿಗೆ ಊರೇ ನಿದ್ರಿಸುತ್ತಿರುವಾಗ ಹಗಲಿರುಳೆನ್ನದೆ ಸಾರ್ವಜನಿಕರ ಜೀವ-ಮಾಲುಗಳ ರಕ್ಷಣೆಗೆ ಶ್ರಮಿಸುವ ನಮ್ಮ ಹೆಮ್ಮೆಯ ಆರಕ್ಷಕರನ್ನು ‘ನಮ್ಮನ್ನು ಕಾಯುವ ಅಣ್ಣಂದಿರು’ ಎಂದು ಗೌರವಿಸಿ, ಆರತಿ ಎತ್ತಿ, ತಿಲಕವಿಟ್ಟು, ರಕ್ಷಾಸೂತ್ರ (ರಾಖಿ) ಕಟ್ಟಿ ಸಿಹಿ ಹಂಚಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಠಾಣಾಧಿಕಾರಿ ಪ್ರವೀಣ್ ಕುಮಾರ್ ಅವರು, “ಪೋಲೀಸ್ ಸಿಬ್ಬಂದಿಯ ಮೇಲಿರುವ ಈ ಗೌರವ ಹಾಗೂ ಪ್ರೀತಿ ಅಭಿನಂದನೀಯ. ಸಾರ್ವಜನಿಕರು ತೋರಿದ ಈ ಅಭಿಮಾನ ನಮಗೆ ಕರ್ತವ್ಯದಲ್ಲಿ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ನಿಮ್ಮ ಈ ರಕ್ಷಾ ಬಂಧನದ ಆಚರಣೆಯು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಸೌಹಾರ್ದತೆಯ ಉಳಿವಿನ ದಾರಿ ದೀಪವಾಗಲಿ,” ಎಂದು ಹಾರೈಸಿದರು.
ಠಾಣಾಧಿಕಾರಿ (PSI) ಪ್ರವೀಣ್, ಠಾಣಾಧಿಕಾರಿ (PSI) ಮಾಂತೇಶ್ ಹಾಗೂ ಠಾಣೆಯ ಇಡೀ ಸಿಬ್ಬಂದಿ ವರ್ಗದವರೊಂದಿಗೆ ಗಣ್ಯರು, ಮಹಿಳೆಯರು, ಶಾಲಾ ಶಿಕ್ಷಕರು, ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಹೋರಾಟಗಾರರು ರಕ್ಷಾ ಬಂಧನ ಆಚರಿಸಿ ಠಾಣೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದರು.
✨ ರಕ್ಷಾ ಬಂಧನ ಹಬ್ಬದ ಮಹತ್ವ ಮತ್ತು ವಿಶೇಷತೆ:-
ರಕ್ಷಾ ಬಂಧನವು ಕೇವಲ ಒಂದು ಸಂಪ್ರದಾಯವಲ್ಲ; ಅದು ರಕ್ಷಣೆ, ಭರವಸೆ ಮತ್ತು ಪ್ರೀತಿಯ ಸಂಕೇತ.
ಪವಿತ್ರ ಬಾಂಧವ್ಯ:-
ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿಯನ್ನು ಗಟ್ಟಿ ಗೊಳಿಸುವ ಹಬ್ಬ. ತಂಗಿ ಅಣ್ಣನಿಗೆ ರಕ್ಷಾಸೂತ್ರ ಕಟ್ಟಿ ಆತನ ಸುಖ-ಸಂತೋಷಕ್ಕಾಗಿ ಪ್ರಾರ್ಥಿಸಿದರೆ, ಅಣ್ಣನು ಆಕೆಯನ್ನು ಜೀವನಪೂರ್ತಿ ರಕ್ಷಿಸುವ ಅಭಯ ನೀಡುತ್ತಾನೆ.
ಸಾಮಾಜಿಕ ಸೌಹಾರ್ದತೆ:-
ಇಂದು ರಾಖಿಯ ಕಟ್ಟುವ ಆಚರಣೆಯು ಕುಟುಂಬದ ಗಡಿ ದಾಟಿ ಇಡೀ ಸಮಾಜವನ್ನು ಒಂದಾಗಿಸುವ ಶಕ್ತಿಯಾಗಿ ಬೆಳೆದಿದೆ. ನಾಡು ಕಾಯುವ ರಕ್ಷಕರಿಗೆ ಗೌರವ:-ಗಡಿಯಲ್ಲಿ ಕಾಯುವ ಯೋಧರು ಹಾಗೂ ಊರ ಭದ್ರತೆ ನೋಡಿಕೊಳ್ಳುವ ಆರಕ್ಷಕರಿಗೆ ರಾಖಿ ಕಟ್ಟುವ ಮೂಲಕ ಸಮಾಜವು ಅವರ ತ್ಯಾಗ ಮತ್ತು ಕರ್ತವ್ಯಕ್ಕೆ ಗೌರವ ಹಾಗೂ ಧನ್ಯವಾದ ಸಮರ್ಪಿಸುತ್ತದೆ.

🤝 ಸಾರ್ವಜನಿಕರ ಜೊತೆ ಸೌಹಾರ್ದ ಸಹಬಾಳ್ವೆ – ಇತರ ಠಾಣೆಗಳಿಗೆ ಕೋಟ ಠಾಣೆ ಮಾದರಿ..!
ಕೋಟ ವ್ಯಾಪ್ತಿಯಲ್ಲಿ ಸಾರ್ವಜನಿಕರು ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಜೀವನ ನಡೆಸಲು ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಅತ್ಯುತ್ತಮ ಕಾರ್ಯವೈಖರಿಯೇ ಮುಖ್ಯ ಕಾರಣ.
ತ್ವರಿತ ಸ್ಪಂದನೆ:-
ಸಾರ್ವಜನಿಕರ ಯಾವುದೇ ಕರೆ ಅಥವಾ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವುದು. ಶಾಂತಿ ಸಂಧಾನ:-ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಭದ್ರತೆ ಒದಗಿಸಿ ಕರ್ತವ್ಯ ನಿರ್ವಹಿಸುವುದು.
ಸಹಬಾಳ್ವೆ ಹಾಗೂ ಬೆಂಬಲ:-
ಸಾರ್ವಜನಿಕರೊಂದಿಗೆ ಅತ್ಯುತ್ತಮ ಒಡನಾಟ ಇಟ್ಟುಕೊಂಡಿರುವ ಕೋಟ ಠಾಣೆ ಎಲ್ಲರಿಗೂ ಮಾದರಿಯಾಗಿದೆ. ಇಂತಹ ದಕ್ಷ ಅಧಿಕಾರಿಗಳನ್ನು ನಿಯೋಜಿಸಿದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಊರಿನ ಜನತೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
👥 ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖರು:-
ಸೌರಭಿ ಪೈ (ಅಧ್ಯಕ್ಷರು, ಕುಂದಾಪುರ ಮಹಿಳಾ ಮೋರ್ಚಾ)ಸುರೇಶ್ ಶೆಟ್ಟಿ ಗೋಪಾಡಿ (ಮಂಡಲ ಅಧ್ಯಕ್ಷರು) ವಿದ್ಯಾ ಸಾಲಿಯಾನ್, ಶ್ವೇತಾ ಶ್ರೀನಿಧಿ ಉಪಾಧ್ಯಾಯ (ಪ್ರಧಾನ ಕಾರ್ಯದರ್ಶಿಗಳು)ರೂಪಾ ಪೈ, ನೇತ್ರಾವತಿ, ಅನಿತಾ ಶ್ರೀಧರ್ (ಪದಾಧಿಕಾರಿಗಳು) ಪೃಥ್ವಿರಾಜ್ ಶೆಟ್ಟಿ, ಪ್ರಸಾದ್ ಬಿಲ್ಲವ, ಕಿರಣ ತೆಕ್ಕಟ್ಟೆ (ಯುವ ಮೋರ್ಚಾ ನಾಯಕರು)
ಮಾಜಿ ಅಧ್ಯಕ್ಷರು ಹಾಗೂ ಪ್ರಮುಖರು:-
ಅಜಿತ್ ದೇವಾಡಿಗ, ಸತೀಶ್ ಕುಂದರ್ ಬಾರಿಕೆರೆ, ಸುರೇಶ್ ಕುಂದರ್, ಅಜಿತ್ ಶೆಟ್ಟಿ, ಮಂಜುನಾಥ, ಜಯಶೀಲ್ ಶೆಟ್ಟಿ, ಶ್ರೀಲತಾ ಸುರೇಶ್ ಶೆಟ್ಟಿ, ನಿರ್ಮಲ ಶೆಟ್ಟಿ, ಸುಲತಾ ಹೆಗ್ದೆ
ಸ್ಥಳೀಯ ಪಂಚಾಯತ್ ಸದಸ್ಯರು:-
ಚಂದ್ರ ಪೂಜಾರಿ, ವಾಸು ಪೂಜಾರಿ, ಯೋಗೇಂದ್ರ, ಶೇಖರ್, ಗುಲಾಬಿ

ಪ್ರಮುಖರಾದ:-
ಅನಿಲ್ ಹಂದಟ್ಟು, ರಾಜು ಪಡುಕರೆ, ಪ್ರಶಾಂತ್, ರತ್ನಾಕರ ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು.
🌸 ಅಣ್ಣ-ತಂಗಿಯರ ಪವಿತ್ರ ಬಾಂಧವ್ಯದ ಹಬ್ಬ ರಕ್ಷಾ ಬಂಧನವು ಕೋಟ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ಮತ್ತು ಆರಕ್ಷಕರ ನಡುವಿನ ಸಹೋದರತ್ವ, ನಂಬಿಕೆ ಹಾಗೂ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಗೊಳಿಸಿತು.
ವರದಿ:ಆರತಿ.ಗಿಳಿಯಾರು.ಉಡುಪಿ
