ಆಧ್ಯಾತ್ಮಿಕ ಸಾಧನೆಗಳಿಂದ ಸಂಸಾರದ ದುಃಖ ನಿವಾರಣೆ – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಆ.31

ಪ್ರತಿ ನಿತ್ಯ ಭಜನೆ, ಸ್ತೋತ್ರ ಪಾರಾಯಣ, ಧ್ಯಾನ, ಅಧ್ಯಯನ, ಜಪ, ಸತ್ಸಂಗ ಸೇರಿದಂತೆ ಆಧ್ಯಾತ್ಮಿಕ ಸಾಧನೆಗಳನ್ನು ಭಗವಂತನನ್ನು ಆಶ್ರಯಿಸಿ ಮಾಡುವುದರಿಂದ ಸಂಸಾರದ ಘೋರ ದುಃಖಗಳಿಂದ ಪಾರಾಗಬಹುದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.

ತ್ಯಾಗರಾಜ ನಗರದ ಶ್ರೀದತ್ತ ಮಂದಿರದಲ್ಲಿ “ಶ್ರಾವಣ ಮಾಸದ ಶನಿವಾರ”ದ ಪ್ರಯುಕ್ತ ಆಯೋಜಿಸಿದ್ದ ಶ್ರೀಶಾರದಾಶ್ರಮದ ಭಕ್ತ ವೃಂದದಿಂದ ನಡೆದ ವಿಶೇಷ ಭಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಲಿಯುಗಕ್ಕೆ ನಾರದೀಯ ಭಕ್ತಿ ಸೂತ್ರಗಳು ಸಹಕಾರಿ ಯಾಗಿದ್ದು ಭಗವಂತನಲ್ಲಿ ಪ್ರೇಮ ಭಕ್ತಿಯನ್ನು ಬೆಳೆಸಿ ಕೊಳ್ಳಬೇಕು. ಓಂಕಾರ ಸ್ವರೂಪಿಯಾದ ಭಗವಂತನಿಗಾಗಿ ಹುಡುಕಾಟ ನಡೆಸಬೇಕು. ಅವನ ನಾಮವನ್ನು ನಿತ್ಯ ಸ್ಮರಣೆ ಮಾಡುವುದರಿಂದ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಪಡೆಯಬಹುದು ಎಂದು ಹೇಳಿದರು.

ವಿಶೇಷ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಗೀತಾ ನಾಗರಾಜ್, ವನಜಾಕ್ಷಿ ಮೋಹನ್, ಗೀತಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ವಿಶೇಷ ಭಜನೆ ನಡೆದರೆ ಹರೇ ಕೃಷ್ಣ ಭಜನಾ ಮಂಡಳಿಯ ಮುಖ್ಯಸ್ಥರಾದ ಮಹೇಶ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ವಂದನಾರ್ಪಣೆಯನ್ನು ಶ್ರೀನಾಥ್ ನಡೆಸಿ ಕೊಟ್ಟರು. ಕೊನೆಯಲ್ಲಿ ದಿವ್ಯತ್ರಯರಿಗೆ ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ಭಜನಾ ಕಾರ್ಯಕ್ರಮದಲ್ಲಿ ಶ್ರೀದತ್ತ ಮಂದಿರದ ಅರ್ಚಕ ಬಾಲಾಜೀ ವೆಂಕಟೇಶ್, ಮೃದಂಗ ಶ್ರೀನಿವಾಸ್, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ವನಜಾಕ್ಷಿ ಪಂಚಾಕ್ಷರಿ, ಅಂಬುಜಾ, ಕವಿತಾ,ಪಂಕಜಾ, ದಾಕ್ಷಾಯಣಿ, ಸುಧಾಮಣಿ, ಸವಿತಾ, ಮಂಜುಳಾ, ಮಂಗಳಾ, ಶಾರದಮ್ಮ, ಯಶೋಧಾ, ಸುಮಂಗಳಾ, ಭಜಂತ್ರಿ, ಗಿರಿಜಾ, ಸರಸ್ವತಿಗೋವಿಂದರಾಜು, ಅಕ್ಷರ, ಗೀತಾ ಭಕ್ತವತ್ಸಲ, ಶಿವಣ್ಣ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button