🔴ಬ್ರೇಕಿಂಗ್ ನ್ಯೂಸ್🔴ಕುಂದಾಪುರ, ವನ್ಯಜೀವಿ ಹತ್ಯೆ ಆರೋಪಿಯನ್ನು ಮತ್ತೆ ಅರಣ್ಯ ಇಲಾಖೆ ಜೀಪಿಗೆ ಚಾಲಕನಾಗಿ ನೇಮಿಸಿದ RFO – ಕ್ರಮಕ್ಕೆ ತೀವ್ರ ವಿರೋಧ..!
ಉಡುಪಿ ಸೆ.01


ವಿವಾದಾತ್ಮಕ ನೇಮಕಾತಿ:-
ನಾಡ ಕೋವಿಯಿಂದ ‘ಮೌಸ್ ಡೀರ್’ (Mouse deer) ವನ್ಯಜೀವಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ, ತಲೆಮರೆಸಿ ಕೊಂಡು ನಂತರ ಕೋರ್ಟ್‌ನಿಂದ ಬೇಲ್ ಪಡೆದಿದ್ದ ತಾತ್ಕಾಲಿಕ ಜೀಪು ಚಾಲಕ ಅಶೋಕ ಶೇರುಗಾರ್‌ನನ್ನು, ಕುಂದಾಪುರ ರೇಂಜಿನ ಆರ್.ಎಫ್.ಓ (RFO) ಕಿರಣ್ ಬಾಬು ಅವರು ಪುನಃ ಇಲಾಖೆಯ ಸರ್ಕಾರಿ ಜೀಪಿಗೆ ಚಾಲಕನಾಗಿ ನೇಮಕ ಮಾಡಿರುವುದು ತೀವ್ರ ವಿವಾದಕ್ಕೆ ಹಾಗೂ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಗ್ರಾಮಸ್ಥರಿಂದ ಆಕ್ರೋಶ ಹಾಗೂ ಕಾನೂನು ಕ್ರಮಕ್ಕೆ ಆಗ್ರಹ:-
ವನ್ಯಜೀವಿ ಕಾಯ್ದೆ (Wild Life Act) ಹಾಗೂ ಆರ್ಮ್ಸ್ ಆಕ್ಟ್ (Arms Act) ಅಡಿಯಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಮತ್ತೆ ಅರಣ್ಯ ಇಲಾಖೆಯ ವಾಹನಕ್ಕೆ ಚಾಲಕನಾಗಿ ನೇಮಿಸಿ ಕೊಂಡಿರುವುದನ್ನು ಖಂಡಿಸಿ, ನಾಕಳಿ ಮತ್ತು ಹಕ್ಕೂರು ಗ್ರಾಮಸ್ಥರು ಕನ್ಸರ್ವೇಟರ್ ಆಫ್ ಫಾರೆಸ್ಟ್ ಹಾಗೂ ಪಿ.ಸಿ.ಸಿ.ಎಫ್ (ವೈಲ್ಡ್ ಲೈಫ್) ಅವರಿಗೆ ದೂರು ಸಲ್ಲಿಸಿದ್ದು, ಈ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಟ್ಟು ನಿಟ್ಟಾಗಿ ಆಗ್ರಹಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

