💥💥ಬ್ರೇಕಿಂಗ್ ನ್ಯೂಸ್ | BREAKING NEWS 💥💥 🚨🚨ಕುಂದಾಪುರ ಅರಣ್ಯ ವಿಭಾಗದಲ್ಲಿ ಬೃಹತ್ ಅಕ್ರಮ ಬಯಲು, ಉಸ್ತುವಾರಿ ಸಚಿವರೇ, ಭ್ರಷ್ಟ ಅರಣ್ಯಾಧಿಕಾರಿಗಳ ಸರ್ವಾಧಿಕಾರಕ್ಕೆ – ಬ್ರೇಕ್ ಹಾಕುವುದು ಯಾವಾಗ..?! 🚨🚨
ಉಡುಪಿ ಸೆ.01


ಜಿಲ್ಲೆಯ ಕುಂದಾಪುರ ಅರಣ್ಯ ವಿಭಾಗದ ವಿವಿಧ ವಲಯಗಳಲ್ಲಿ ಕೌನ್ಸಿಲಿಂಗ್ ಅಧಿನಿಯಮ ಮತ್ತು ಸರ್ಕಾರದ ಸ್ಪಷ್ಟ ಆದೇಶಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ನಿಯಮ ಬಾಹಿರವಾಗಿ ಹುದ್ದೆಗಳ ನಿಯೋಜನೆ ನಡೆಸಿರುವ ಬೃಹತ್ ಅಕ್ರಮ ಹಾಗೂ ಕರ್ತವ್ಯ ಲೋಪ ಬೆಳಕಿಗೆ ಬಂದಿದೆ!
🔥 ಸರ್ಕಾರದ ಆದೇಶ ಹಾಗೂ ಕೌನ್ಸಿಲಿಂಗ್ ಅಧಿನಿಯಮದ ಸ್ಪಷ್ಟ ನಿಯಮಗಳು:–
‘A’ ಹುದ್ದೆಯ ಅಧಿಕಾರಿಗಳು:-
ಕಡ್ಡಾಯವಾಗಿ ಕಚೇರಿ (Office) ವಿಭಾಗದಲ್ಲೇ ಕರ್ತವ್ಯ ನಿರ್ವಹಿಸ ಬೇಕು.
‘B’ ಹುದ್ದೆಯ ಅಧಿಕಾರಿಗಳು:-
ವನ್ಯಜೀವಿ (Wildlife) ವಿಭಾಗದಲ್ಲಿ ಕರ್ತವ್ಯ ನಿರ್ವಹಿಸ ಬೇಕು.
‘C’ ಹುದ್ದೆಯ ಅಧಿಕಾರಿಗಳು:-
ಪ್ರಾದೇಶಿಕ (Regional) ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಬೇಕು.ಆದರೆ, ಕುಂದಾಪುರ ಅರಣ್ಯ ವಿಭಾಗದ ಕೆಲವು ವಲಯ ಅರಣ್ಯಾಧಿಕಾರಿಗಳು (RFO) ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DFO) ಸರ್ಕಾರದ ಈ ಕಟ್ಟುನಿಟ್ಟಿನ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಿದ್ದಾರೆ. ಕೌನ್ಸಿಲಿಂಗ್ ಮೂಲಕ ‘A’ ಹುದ್ದೆಗೆ ನಿಯೋಜನೆ ಯಾದ ನೌಕರರನ್ನು ನಿಯಮ ಬಾಹಿರವಾಗಿ ‘C’ ಹುದ್ದೆಗೆ ನಿಯೋಜಿಸಿ (In-charge) ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುತ್ತಿದ್ದಾರೆ.
💸💸 ಸರ್ಕಾರದ ಖಜಾನೆಗೆ ಕೋಟ್ಯಂತರ ಕನ್ನ, ಕಾನೂನು ಬಾಹಿರ ‘ಪ್ರಭಾರ ಭತ್ಯೆ’ ಲೂಟಿ! 💸💸
ಕಾನೂನಿನ ಪ್ರಕಾರ ‘A’ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ‘C’ ಹುದ್ದೆಯ ಪ್ರಭಾರ ನೀಡಿ ‘ಪ್ರಭಾರ ಭತ್ಯೆ’ (Charge Allowance) ನೀಡಲು ಯಾವುದೇ ಅವಕಾಶವಿರುವುದಿಲ್ಲ. ಆದರೂ, ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ‘A’ ಹುದ್ದೆಯ ಸಿಬ್ಬಂದಿಯನ್ನು ‘C’ ಹುದ್ದೆಯಲ್ಲಿ ಕೂರಿಸಿ, ಸರ್ಕಾರದಿಂದ ಕಾನೂನು ಬಾಹಿರವಾಗಿ ಪ್ರಭಾರ ಭತ್ಯೆ ಪಾವತಿಸಲಾಗಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ತೀವ್ರ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ. ಇದು ಕೇವಲ ಕರ್ತವ್ಯ ಲೋಪವಲ್ಲ, ಸಂವಿಧಾನಾತ್ಮಕ ವ್ಯವಸ್ಥೆಗೆ ಎಸಗಿದ ದ್ರೋಹ ಮತ್ತು ತೆರಿಗೆದಾರರ ಹಣದ ದುರ್ಬಳಕೆ ಯಾಗಿದೆ!
📢📢 ಸಾರ್ವಜನಿಕರ ಉಗ್ರ ಆಕ್ರೋಶ – ಅಧಿಕಾರಿಗಳ ಅಮಾನತಿಗೆ ಜನಾಕ್ರೋಶ! 📢📢
ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಈ ಮನ ಬಂದಂತೆ ನಿಯೋಜನೆ ಮತ್ತು ಅಕ್ರಮಗಳ ವಿರುದ್ಧ ಉಡುಪಿ ಜಿಲ್ಲೆಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
🚨 ಡಿ.ಎಫ್.ಓ (DFO) ಅಮಾನತು:-
ನಿಯಮ ಉಲ್ಲಂಘನೆಗೆ ಕುಮ್ಮಕ್ಕು ನೀಡಿ, ಅಕ್ರಮಕ್ಕೆ ಸಾಥ್ ನೀಡಿರುವ ಕುಂದಾಪುರ DFO ಅವರನ್ನು ತಕ್ಷಣವೇ ಅಮಾನತು (Suspend) ಮಾಡಬೇಕು ಅಥವಾ ತಕ್ಷಣವೇ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು.
🚨 ಜಿಲ್ಲಾಧಿಕಾರಿಗಳಿಂದ ತಕ್ಷಣದ ತನಿಖೆ:–
ಈ ಇಡೀ ಅಕ್ರಮ ನಿಯೋಜನೆ ಮತ್ತು ಆರ್ಥಿಕ ನಷ್ಟದ ಕುರಿತು ಉಡುಪಿ ಜಿಲ್ಲಾಧಿಕಾರಿಗಳು ತಕ್ಷಣವೇ ಪರಿಶೀಲನೆ ನಡೆಸಿ, ಉನ್ನತ ಮಟ್ಟದ ತನಿಖೆಗೆ ಆದೇಶಿಸ ಬೇಕು.
🚨 ಮೂಲ ಹುದ್ದೆಗೆ ಮರು ನಿಯೋಜನೆ:-
ಕೌನ್ಸಿಲಿಂಗ್ ಮೂಲಕ ‘A’ ಹುದ್ದೆಗೆ ಆಯ್ಕೆಯಾದ ಸಿಬ್ಬಂದಿಯನ್ನು ತಕ್ಷಣವೇ ಅವರ ಮೂಲ ‘A’ ಹುದ್ದೆಗೆ (ಕಚೇರಿ ಕರ್ತವ್ಯಕ್ಕೆ) ಮರಳಿಸುವಂತೆ DFO ಕಟ್ಟು ನಿಟ್ಟಿನ ಆದೇಶ ಹೊರಡಿಸ ಬೇಕು.
❓❓ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರ ನೇರ ಪ್ರಶ್ನೆ!❓❓
ಜಿಲ್ಲೆಯಲ್ಲಿ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆ ಮಿತಿಮೀರುತ್ತಿದ್ದರೂ ಇಲಾಖೆ ಹಾಗೂ ಆಡಳಿತ ಮೌನ ವಹಿಸಿರುವುದು ಏಕೆ?
“ಮಾನ್ಯ ಉಸ್ತುವಾರಿ ಸಚಿವರೇ, ಕುಂದಾಪುರ ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಈ ಅಕ್ರಮಗಳಿಗೆ, ಕಾನೂನು ಉಲ್ಲಂಘನೆಗೆ ಮತ್ತು ಭ್ರಷ್ಟ ಅಧಿಕಾರಿಗಳ ಆಟಕ್ಕೆ ಬ್ರೇಕ್ ಹಾಕುವುದು ಯಾವಾಗ?
“ಸರ್ಕಾರದ ನಿಯಮಗಳನ್ನು ಮೀರಿ ಕರ್ತವ್ಯ ಲೋಪ ಎಸಗಿರುವ ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಅಧಿಕಾರಿಗಳನ್ನು ತಕ್ಷಣವೇ ಅಮಾನತ್ ಗೊಳಿಸಿ, ಪಾರದರ್ಶಕ ಆಡಳಿತವನ್ನು ಎತ್ತಿಹಿಡಿಯ ಬೇಕೆಂದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ.

