ಸೆಪ್ಟೆಂಬರ್ 3 ರಂದು ವಿದ್ವಾನ್ ಕೆ ಗುರುರಾಜ್ ಅವರಿಂದ – ಶ್ರೀಕೃಷ್ಣ ಸಂಕೀರ್ತನೆ.
ಚಳ್ಳಕೆರೆ ಆ.31


ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಕೃಷ್ಣ ಜನ್ಮಾಷ್ಟಮಿ” ಯ ಪ್ರಯುಕ್ತ ಇದೇ ಸೆಪ್ಟೆಂಬರ್ 3 ರ ಗುರುವಾರ ಸಂಜೆ 5 ಗಂಟೆ ಯಿಂದ ಬೆಂಗಳೂರಿನ ಪ್ರಸಿದ್ಧ ಗಾಯಕರಾದ ವಿದ್ವಾನ್ ಕೆ ಗುರುರಾಜ್ ಅವರಿಂದ “ಶ್ರೀಕೃಷ್ಣ ಸಂಕೀರ್ತನೆ ಜರುಗುವುದು.
ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರಿಂದ ವಿಶೇಷ ಪ್ರವಚನ, ಸೆಪ್ಟೆಂಬರ್ 4 ರಂದು ಸಂಜೆ 5:30 ರಿಂದ ಶ್ರೀಮತಿ ವನಜಾಕ್ಷಿ ಮೋಹನ್ ಅವರಿಂದ “ಶ್ರೀಕೃಷ್ಣನ ಭಜನೆಗಳು” ಮತ್ತು ಮಾತಾಜೀಯವರಿಂದ “ಶ್ರೀಕೃಷ್ಣ ಲೀಲಾಮೃತ” ಎಂಬ ವಿಷಯವಾಗಿ ವಿಶೇಷ ಪ್ರವಚನ, ಅನ್ನಪ್ರಸಾದ ವಿನಿಯೋಗ ನಡೆಯಲಿದ್ದು.
ಭಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದು ಕೊಳ್ಳುವಂತೆ ಶ್ರೀಶಾರದಾಶ್ರಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

