ಹಿರದಲಿಂಗೇಶ್ವರ ದೇವರ ಶ್ರಾವಣ ಮಾಸದ – ಜಾತ್ರಾ ಮಹೋತ್ಸವ ಅತ್ಯಂತ ಶ್ರದ್ಧೆ ಭಕ್ತಿಯಿಂದ ಅದ್ದೂರಿಯಾಗಿ ಜರುಗಿತು.

ತಾವರಖೇಡ ಆ.31

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ತಾವರಖೇಡ ಗ್ರಾಮದಲ್ಲಿ ಶ್ರೀ ಹಿರದಲಿಂಗೇಶ್ವರ ದೇವರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ ಅತ್ಯಂತ ಶ್ರದ್ಧೆ ಭಕ್ತಿಯಿಂದ ಅದ್ದೂರಿಯಾಗಿ ಪ್ರಾರಂಭ ಗೊಂಡಿದೆ.

ದಿನಾಂಕ 30 ಆಗಸ್ಟ್ 2026 ರವಿವಾರ ಸಾಯಂಕಾಲ 6 ಗಂಟೆಗೆ ಶ್ರೀ ಬ್ರಹ್ಮಲಿಂಗ ದೇವರ ಪಲ್ಲಕ್ಕಿ ತೊಂಟಾಪುರ ಶ್ರೀ ಕೆಂಚರಾಯ ದೇವರ ಪಲ್ಲಕ್ಕಿ ಹಂಚನಾಳ ಶ್ರೀ ನಿಂಗರಾಯ ದೇವರ ಪಲ್ಲಕ್ಕಿ ದೇವಣಗಾಂವ ಹಾಗೂ ರಬಕಮ್ಮ ದೇವಿ ಪಲ್ಲಕ್ಕಿ ಗುಂದಗಿ ಹೊಸ ತಾವರಖೇಡ ಗ್ರಾಮಕ್ಕೆ ಆಗಮಿಸಿ.

ಮರು ದಿವಸ ಧಾರ್ಮಿಕ ವಿದಿ ವಿಧಾನ ಆಗಸ್ಟ್ 31 2026 ಸೋಮವಾರ ಬೆಳಿಗ್ಗೆ 6 ಗಂಟೆಗೆ ಗಂಗಾ ಸ್ನಾನ ನೆರವೇರಿತು. ತದನಂತರ ನಿಂಗರಾಯ ಮುತ್ಯಾ ಡೊಳ್ಳಿನ ಸಂಘ ಕಕ್ಕಳಮೇಲಿ ಶ್ರೀಹಿರಗಲಿಂಗ ಡೊಳ್ಳಿನ ಸಂಘ ಹೊಸತಾವರಖೇಡ ಮಂಗಳ ವಾದ್ಯಗಳೊಂದಿಗೆ ಭವ್ಯ ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮ ಬೆಳಗ್ಗೆ 9 ಗಂಟೆಗೆ ಸಾಂಪ್ರದಾಯಿಕ ಹಾಗೂ ಪವಿತ್ರ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಮುಂದಿನ ಕಾರ್ಯಕ್ರಮ ಸೆಪ್ಟೆಂಬರ್/1/2026 ಮಹಾಲಕ್ಷ್ಮಿ ಮಾಯಮ್ಮನ ಹಬ್ಬ ಶ್ರೀ ಅಶೋಕ್ ಗೌಡ್ ಪಾಟೀಲ್ ಇವರ ನೇತೃತ್ವದಲ್ಲಿ ಜರುಗಲಿದೆ ಎಂದು ತಾವರಕೇಡ ಜಾತ್ರಾ ಕಮೀಟಿಯ ಪದಾಧಿಕಾರಿಗಳು ತಿಳಿಸಿದರು.

ತಾವರಖೇಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗ ಬೇಕೆಂದು ಕಮೀಟಿಯ ಸದಸ್ಯರು ಮನವಿ ಮಾಡಿ ಕೊಂಡರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ್ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button