ವೈವಿದ್ಯತೆಯಲ್ಲಿ ಏಕತೆ ಮೆರೆದ – ಎಸ್.ಎನ್.ಡಿ ಶಾಲೆ.
ಹುಲ್ಲೂರು ಸೆ.06


ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರ ವಲಯದಲ್ಲಿರುವ ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೃಷ್ಣ ರಾಧೆಯ ಉಡುಪಿನಲ್ಲಿದ್ದರು. ಇದರಿಂದ ಇಡೀ ಶಾಲಾ ವಾತಾವರಣವೇ ಬೃಂದಾವನದಂತೆ ಕಂಡು ಬಂದಿತು.
ಶಾಲಾ ಆಡಳಿತ ಮಂಡಳಿಯು ತರಗತಿವಾರು ಎಲ್ಲಾ ಮಕ್ಕಳಿಗೆ ಪ್ರಥಮ ದ್ವೀತೀಯ ತೃತೀಯ ಬಹುಮಾನ ಹಂಚಿ ಉಳಿದ ಎಲ್ಲ ಮಕ್ಕಳಿಗೂ ಸಮಾಧಾನಕರ ಪ್ರಶಸ್ತಿಗಳನ್ನು ಹಂಚಿದರು.
ನಂತರ ಕೃಷ್ಣನನ್ನು ತೋಟ್ಟಿಲ್ಲಲ್ಲಿ ಹಾಕಿ ಮುತೈದಿಯರಿಗೆ ಉಡಿ ತುಂಬಿ ನಾಮಕರಣ ಮಾಡಿದರು. ನಂತರ ಶಾಲೆಗೆ ಆಗಮಿಸಿದ ಪಾಲಕರ ಕಣ್ಣಿಗೆ ಬಟ್ಟೆ ಕಟ್ಟಿ ಕೃಷ್ಣನ ಮಸರಿನ ಗಡಿಗೆ ಒಡೆಯುವ ಸ್ಪರ್ದೆಯನ್ನು ಏರ್ಪಡಿಸಿದ್ದರು.
ಅದರಲ್ಲಿ ಗಡಿಗೆ ಒಡೆದ ಪಾಲಕರಿಗೆ ಬಹುಮಾನಗಳನ್ನು ಹಂಚಿದರು. ನಂತರ ಮಾತನಾಡಿದ ಸಂಸ್ಥೆಯ ಅದ್ಯಕ್ಷರಾದ ಶ್ರೀ ಎಮ್ ಎಸ್ ಕೊಪ್ಪ ಅವರು ನಮ್ಮ ಶಾಲೆ ಗ್ರಾಮೀಣ ಪ್ರದೇಶದಲ್ಲಿ ಇದ್ದರೂ ಕೂಡಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪಟ್ಟಣವನ್ನು ಮಿರಿಸುವಂತಿತ್ತು ಎಂದು ಹೇಳಿದರಲ್ಲದೆ ಜಾತಿಯನ್ನು ಮೀರಿದ ಶಿಕ್ಷಣ ಸಂಸ್ಥೆ ಎಂದರು.
ಅದಕ್ಕೆ ಪುಷ್ಟಿ ಎಂಬಂತೆ ಒಬ್ಬ ಮುಸ್ಲಿಂ ದಂಪತಿಗಳು ತಮ್ಮ ಮಕ್ಕಳನ್ನು ರಾಧಾ ಕೃಷ್ಣನ ವೇಷದಲ್ಲಿ ಕರೆದು ಕೊಂಡು ಬಂದಿದ್ದು ವಿಷೇಶತೆ ಎದ್ದು ಕಾಣುತಿತ್ತು. ಶಾಲೆಯಲ್ಲಿ ಎಚ್ ಆರ್ ಬಾಗಲಕೋಟ ನಿರುಪಿಸಿದರು ಅನುಶ್ರೀ ಮೇಡಂ ಸ್ವಾಗತಿಸಿದರು. ಮುಖ್ಯ ಗರು ಮಾತೆಯರಾದ ಶ್ರೀಮತಿ ರೇಖಾ ಎಮ್.ಎಸ್ ವಂದಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

