ಶಾಲಾ ಪಠ್ಯಕ್ರಮದಲ್ಲಿ ಅಬಾಕಸ್ ಅಳವಡಿಕೆ ಅಗತ್ಯ – ಡಾ, ಮೀರಾಸಾಬಿಹಳ್ಳಿ ಶಿವಲಿಂಗಪ್ಪ ಪ್ರತಿಪಾದನೆ.
ಚಳ್ಳಕೆರೆ ಸೆ.09


ಇಂದಿನ ಶಾಲಾ ಪಠ್ಯಕ್ರಮದಲ್ಲಿ ಅಬಾಕಸ್ ಅಳವಡಿಸು ವುದರಿಂದ ಮಕ್ಕಳ ಕಲಿಕೆ ಸುಲಭವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಮತ್ತು ಬಂಡಾಯ ಸಾಹಿತಿ ಡಾ, ಮೀರಾಸಾಬಿಹಳ್ಳಿ ಶಿವಲಿಂಗಪ್ಪ ಅಭಿಪ್ರಾಯ ಪಟ್ಟರು.
ನಗರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ “ಅಕ್ಷರ ಅಕಾಡಮಿಯ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ ಹಾಗೂ ಪದವಿ ಪ್ರಧಾನ” ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು ಅಬಾಕಸ್ ಮಣಿ ಚೌಕಟ್ಟಿನಲ್ಲಿ ಮಣಿಗಳನ್ನು ಜರಿಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪದವಿ ಪ್ರಧಾನ ಮಾಡಿ ಮಾತನಾಡಿದರು.

ಅಬಾಕಸ್ ಶಿಕ್ಷಣವು ಒಂದು ಕೌಶಲ್ಯವಾಗಿದ್ದು ಮಕ್ಕಳ ಏಕಾಗ್ರತೆ, ಬೌದ್ಧಿಕ ಬೆಳವಣಿಗೆ, ಆತ್ಮವಿಶ್ವಾಸ ಮತ್ತು ಗಣಿತ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿ ಶಾಲಾ ಪಠ್ಯಕ್ರಮದಲ್ಲಿ ಒಂದು ಭಾಗವಾಗಿ ಅಬಾಕಸ್ ಅಳವಡಿಕೆಯ ಅವಶ್ಯಕತೆ ಇದೆ, ಕಬ್ಬಿಣದ ಕಡಲೆಯಾದ ಗಣಿತ ವಿಷಯವನ್ನು ಸುಲಭವಾಗಿ ಕಲಿಯಲು ಅಬಾಕಸ್ ನೆರವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಕ್ಷರ ಅಕಾಡೆಮಿಯ ಸಂಸ್ಥಾಪಕಿ ಹಾಗೂ ಶಿಕ್ಷಕಿ ಮಮತ ರಾಘವೇಂದ್ರ ರವರು ಸಂಸ್ಥೆಯ ಅಭಿವೃದ್ದಿ ಹಾಗೂ ಮುಂದಿನ ಹೊಸ ತರಗತಿಗಳ ಮಾಹಿತಿಯನ್ನು ನೀಡಿ ದಿನ ನಿತ್ಯದ ಚಟುವಟಿಕೆಗಳಲ್ಲಿ ಅಬಾಕಸ್ ಅಳವಡಿಕೆಯಿಂದ ಮಕ್ಕಳ ಬೌದ್ಧಿಕ ಬೆಳವಣಿಗೆ ವೇಗವಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಗೋವಿಂದರಾಜು, ಸರಸ್ವತಮ್ಮ, ರಾಘವೇಂದ್ರ ಗುಪ್ತ, ರವಿಕುಮಾರ್, ಯಶವಂತ್, ಲಕ್ಷ್ಮೀ, ವಂಶಿಕೃಷ್ಣ, ಸುಮ, ಭುವನ, ಯತೀಶ್ ಎಂ ಸಿದ್ದಾಪುರ, ವೈಷ್ಣವಿ ಅಕ್ಷರ, ನಂದನ್ ವಿಶೃತ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
