ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ – ಸಾಧಕ ಶಿಕ್ಷಕರಿಗೆ ಸನ್ಮಾನ.
ಚಳ್ಳಕೆರೆ ಸೆ.08



ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ “ಶಿಕ್ಷಕರ ದಿನಾಚರಣೆ” ಯ ಪ್ರಯುಕ್ತ ಸಾಧಕ ಶಿಕ್ಷಕರಾದ ಗೋಪನಹಳ್ಳಿಯ ಯಾದವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನಪ್ಟ, ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸಿ.ಎಸ್ ಭಾರತಿ, ಕರೀಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಧಾ ಶ್ರೀಪಾದ್, ತಿಮ್ಮಪ್ಪಯ್ಯಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಆಂಗ್ಲ ಭಾಷಾ ಸಹ ಶಿಕ್ಷಕಿ ವಿಜಯಗುರು, ನನ್ನಿವಾಳದ ಚಂದ್ರಗಿರಿ ಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಡಿ.ಶಬ್ರಿನಾ ಮಹಮದ್ ಅಲಿ ಅವರು ಶಿಕ್ಷಕರಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ರೋಟರಿ ಕ್ಲಬ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಿ ಸತ್ಕರಿಸಲಾಯಿತು.

ಸನ್ಮಾನ ಸಮಾರಂಭದಲ್ಲಿ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಖಜಾಂಚಿ ಡಾ, ಕವಿತಾ ನಾಗೇಶ್, ಎಡಿಟರ್ ಜಾನಕಿ, ನಳಿನ ಬಾಬು, ಸುನೀತಾ, ಪುಷ್ಪಲತಾ, ಪ್ರಮೀಳಾ, ವಿಶಾಲಾಕ್ಷಿ, ಮಂಗಳಾ, ಕವಿ ಮಹಮದ್ ಅಲಿ,ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಶಿಶಿರ,ವಿಹಾನ್ ಅಲಿ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

