🚨ಬ್ರೇಕಿಂಗ್ ನ್ಯೂಸ್🚨ಶ್ರೀ ಮಹಾಲಿಂಗೇಶ್ವರ ಸಹೌರ್ದ ಕ್ರೆಡಿಟ್ ಸೊಸೈಟಿಯ 8 ನೇ. ವಾರ್ಷಿಕ ಮಹಾಸಭೆ ಯಶಸ್ವಿ, ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ – ಅಶಕ್ತರಿಗೆ ಆರ್ಥಿಕ ನೆರವು ಘೋಷಣೆ..!

ತೆಕ್ಕಟ್ಟೆ ಸೆ.08

ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಯ ದ್ಯೋತಕವಾಗಿ, ಸಹಕಾರಿ ರಂಗದಲ್ಲಿ ವಿಶ್ವಾಸಾರ್ಹತೆಯ ಹಾದಿಯಲ್ಲಿ ಸಾಗುತ್ತಿರುವ ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ಸಹೌರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ 8 ನೇ. ವರ್ಷದ ವಾರ್ಷಿಕ ಮಹಾಸಭೆಯು ತೆಕ್ಕಟ್ಟೆ ಶ್ರೀ ಸುಧೀಂದ್ರ ಸಭಾ ಭವನದಲ್ಲಿ ಅತ್ಯಂತ ಸಂಭ್ರಮ ಹಾಗೂ ವ್ಯವಸ್ಥಿತವಾಗಿ ಜರುಗಿತು.

ಸಂಸ್ಥೆಯ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಅವರ ದಕ್ಷ ಹಾಗೂ ದೂರದೃಷ್ಟಿಯ ಅಧ್ಯಕ್ಷತೆಯಲ್ಲಿ ಜರುಗಿದ ಈ ಮಹಾಸಭೆಯಲ್ಲಿ, ಸೊಸೈಟಿಯ ಪ್ರಗತಿ ಪಥದ ಬಗ್ಗೆ ಹರ್ಷ ವ್ಯಕ್ತಪಡಿಸಲಾಯಿತು.

ಆರ್ಥಿಕ ಪ್ರಗತಿಯ ಹೆಗ್ಗುರುತು:-

ದಾಖಲೆಯ ಲಾಭ ಮತ್ತು ಠೇವಣಿಸಭೆಯಲ್ಲಿ ಸಂಸ್ಥೆಯ ಸಿ.ಇ.ಓ ಬಿ.ಚಂದ್ರಕಾಂತ ಶೆಟ್ಟಿ ಅವರು ಮಾತನಾಡಿ, ಗ್ರಾಹಕರ ಮತ್ತು ಸದಸ್ಯರ ಅಚಲ ವಿಶ್ವಾಸದಿಂದ ಸಂಸ್ಥೆಯು ಸಮರ್ಪಕ ನೆರವಿನೊಂದಿಗೆ ಬರೋಬ್ಬರಿ ₹5,96,57,643 ರೂ. ಠೇವಣಿಯನ್ನು ಸಂಗ್ರಹಿಸಿದೆ.

ಅಲ್ಲದೆ, ವರದಿ ಸಾಲಿನಲ್ಲಿ ₹31,62,011.26 ರೂ. ನಿವ್ವಳ ಲಾಭ ಗಳಿಸುವ ಮೂಲಕ ಸಂಸ್ಥೆಯು ತನ್ನ ಆರ್ಥಿಕ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಹೆಮ್ಮೆಯಿಂದ ತಿಳಿಸಿದರು.

ಸದಸ್ಯರಿಗೆ ಬಂಪರ್ ಕೊಡುಗೆ:-

ಶೇ. 10 ಡಿವಿಡೆಂಡ್ ಹಾಗೂ ಸಮಾಜ ಮುಖಿ ಕಾರ್ಯ ಸದಸ್ಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿರುವ ಆಡಳಿತ ಮಂಡಳಿಯು, ವರದಿ ವರ್ಷದಲ್ಲಿ ಸಂಸ್ಥೆಯ ಲಾಭಾಂಶದಿಂದ ಶೇ. 10ರಷ್ಟು ಆಕರ್ಷಕ ಡಿವಿಡೆಂಡ್ (ಲಾಭಾಂಶ) ಘೋಷಿಸುವ ಮೂಲಕ ಸದಸ್ಯರಿಗೆ ಸಿಹಿ ಸುದ್ದಿ ನೀಡಿದೆ. ಇದರೊಂದಿಗೆ, ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಾ 5 ಮಂದಿ ಅಶಕ್ತ ಸದಸ್ಯರಿಗೆ ವಿಶೇಷ ಆರ್ಥಿಕ ಸಹಾಯ ಧನವನ್ನು ವಿತರಿಸಿ ಮಾನವೀಯತೆ ಮೆರೆಯಿತು.

ದಕ್ಷ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕರ ಪರಿಶ್ರಮ ಸೊಸೈಟಿಯ ಈ ಅಭೂತ ಪೂರ್ವ ಯಶಸ್ಸಿನ ಹಿಂದೆ ಆಡಳಿತ ಮಂಡಳಿಯ ಸದಸ್ಯರು, ಸಿ.ಇ.ಓ ಹಾಗೂ ಸಮಸ್ತ ಸಿಬ್ಬಂದಿಯ ನಿರಂತರ ಶ್ರಮವಿದೆ. ಉಪಾಧ್ಯಕ್ಷರಾದ ಎನ್. ಕರುಣಾಕರ ಶೆಟ್ಟಿ ಹಾಗೂ ನಿರ್ದೇಶಕರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಸ್ಥೆಯು ದಿನದಿಂದ ದಿನಕ್ಕೆ ಉತ್ತುಂಗಕ್ಕೇರುತ್ತಿದೆ.

ಗ್ರಾಹಕ ಸ್ನೇಹಿ ಸೇವೆ ಮತ್ತು ಪಾರದರ್ಶಕ ಆಡಳಿತವೇ ಈ ಸಂಸ್ಥೆಯ ಯಶಸ್ಸಿನ ಮೂಲ ಮಂತ್ರವಾಗಿದೆ. ಗಣ್ಯರ ಉಪಸ್ಥಿತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಸಿಇಒ ಲೋಹಿತ್ ಸಾಲ್ಯಾನ್, ಡಾ, ಸುನೀತಾ ಶೆಟ್ಟಿ ಕೆಂಜೂರು, ಸಹೌರ್ದ ಅಭಿವೃದ್ಧಿ ಅಧಿಕಾರಿ ಬಿ.ಎಸ್. ವಿಜಯ್, ಲೆಕ್ಕಪರಿಶೋಧಕ ಎಂ. ರಾಜೀವ್ ಶೆಟ್ಟಿ ಸೇರಿದಂತೆ ನೂರಾರು ಗಣ್ಯರು, ಆಡಳಿತ ಮಂಡಳಿಯ ನಿರ್ದೇಶಕರು, ಊರ ಹಿತೈಷಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಿ.ಇ.ಓಒ ಬಿ.ಚಂದ್ರಕಾಂತ ಶೆಟ್ಟಿ ಸ್ವಾಗತಿಸಿದರು. ಶಾಖಾ ಪ್ರಬಂಧಕ ಪದ್ಮನಾಥ ಶೆಟ್ಟಿ ವರದಿ ವಾಚಿಸಿದರು. ಮುಕಾಂಬಿಕಾ ಅಡಿಗ ಪ್ರಾರ್ಥನೆ ಸಲ್ಲಿಸಿ, ಅಮೃತಾ ಶ್ಯನೈ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಶೆಟ್ಟಿ ಸುಶ್ಮಿತಾ ಆಚಾರ್ ಹಾಗೂ ಸಂದೇಶ ಶೆಟ್ಟಿ ಸಹಕರಿಸಿದರೆ, ಉಪಾಧ್ಯಕ್ಷ ಎನ್. ಕರುಣಾಕರ ಶೆಟ್ಟಿ ವಂದನಾರ್ಪಣೆಗೈದರು.

ವರದಿ:ಆರತಿ.ಗಿಳಿಯಾರ.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button