ರೇಷ್ಮೆ ಕೃಷಿ ತಾಂತ್ರಿಕ ಕಾರ್ಯಗಾರ & ವಸ್ತು ಪ್ರದರ್ಶನ – ಕಾರ್ಯಾಗಾರ ಜರುಗಿತು.

ಗುಂಡಕರ್ಜಗಿ ಸೆ.09

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದ ರೇಷ್ಮೆ ಬೆಳೆ ರೈತರಾದ ಬಾಬುಲಾಲ್ ದಾವಲಸಾಬ್ ಚಪ್ಪರ ಬಂದ ಇವರ ಹಿಪ್ಪು ನೇರಳೆ ತೊಟದಲ್ಲಿ ಕಾರ್ಯಗಾರ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸಕರಾಗಿ ಡಾ, ಪರಮೇಶ್ ನಾಯಕ (ವಿಜ್ಞಾನಿಗಳು) (ಸಿ) ಆರ್,ಎಸ್,ಆರ್,ಎಸ್, ಚಿತ್ರದುರ್ಗ ಇವರು ಉಪಸ್ಥಿತರಿದ್ದರು.

ರೇಷ್ಮೆ ಗೂಡಿನ ಗುಣಮಟ್ಟ ನೇರವಾಗಿ ಹಿಪ್ಪು ನೇರಳೆ ಎಲೆಯ ಗುಣಮಟ್ಟದ ಮೇಲೆ ಅವಲಂಬಿತ ವಾಗಿರುವುದರಿಂದ ಗುಣಮಟ್ಟದ ಹಿಪ್ಪು ನೇರಳೆ ಸೊಪ್ಪಿನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡ ಬೇಕಾಗಿದೆ, ಮಣ್ಣಿನ ಫಲವತ್ತತೆ ಕಾಪಾಡಲು ಮತ್ತು ಬೆಳೆ ಉತ್ಪಾದನೆ ಹೆಚ್ಚಿಸಲು ಸಾವಯುವ ಮತ್ತು ಜೈವಿಕ ಗೊಬ್ಬರಗಳನ್ನು ಸಾಕಷ್ಟು ಬಳಸಿ ಹಾಗೂ ಹಸಿರೆಲೆ ಗೊಬ್ಬರಗಳಾದ ಸೆಣಬು, ಡಯಂಚ, ಬಿತ್ತನೆ ಮಾಡಿ ಹೂ ಬಿಡುವ ಸಮಯಕ್ಕೆ ಮಣ್ಣಿಗೆ ಸೇರಿಸುವುದು ಸೂಕ್ತ ಎಂದು ವಿಸ್ತಾರವಾಗಿ ರೈತರಿಗೆ ಹೇಳಿದರು.

ಅದೇ ಸಂದರ್ಭದಲ್ಲಿ ಶ್ರೀ ಎಸ್, ಸಿದ್ದರಾಜ್ (ರೇಷ್ಮೆ ಉಪ- ನಿರ್ದೇಶಕರು ಜಿ, ಪ0, ವಿಜಯಪುರ ಇವರು ಮಳೆಗಾಲದಲ್ಲಿ ಹೆಚ್ಚಿನ ಮಳೆಯಿಂದಾಗಿ ರೇಷ್ಮೆ ಹುಳುಗಳ ಸಾಕಾಣಿಕೆಯಲ್ಲಿ ಏರುಪೆರಾಗುವುದರಿಂದ ರೇಷ್ಮೆ ಹುಳುಗಳು ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ.

ರೇಷ್ಮೆ ಬೆಳೆಗಾರರು ಮುಂಜಾಗ್ರತ ಕ್ರಮವಾಗಿ ಸೋಂಕು ನಿವಾರಣಾ ಕ್ರಮಗಳನ್ನು ಅನುಸರಿಸುವುದು ಹಾಗೂ 5 ನೇ. ಹಂತದ ರೇಷ್ಮೆ ಹುಳುಗಳಿಗೆ ಕುಡಿ ತೆಗೆದ ಸೊಪ್ಪನ್ನು ಕೊಡುವುದರಿಂದ ಹಾಲು ರೋಗವನ್ನು ತಡೆಗಟ್ಟ ಬಹುದಾಗಿದೆ ಎಂದು ರೈತರಿಗೆ ವಿಸ್ತಾರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯವರಾದ, ಶ್ರೀ ಬಿ,ವೈ ಬಿರಾದಾರ, ಶ್ರೀ ಗಂಗಾಧರ್ ಜೆವೂರ, ಶ್ರೀಮತಿ ಜೆ, ವಾಸಂತಿ, ವಿನೋದ್ ಬಿರಾದಾರ, ಹಾಗೂ ಗ್ರಾಮದ ರೈತರು ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button