ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ, ಶಾಸಕರೇ ಸಿ.ಎಂ ಮನೆ ಮುಂದೆ ಧರಣಿ ಮಾಡಿ – ನಡಹಳ್ಳಿ ಹೇಳಿಕೆ.
ಮುದ್ದೇಬಿಹಾಳ ಸೆ.07


ವಿಧಾನ ಸಭಾ ಕ್ಷೇತ್ರವನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸ ಬೇಕು. ಆದಷ್ಟು ಬೇಗ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು, ಇಲ್ಲವಾದರೆ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎ,ಎಸ್ ಪಾಟೀಲ್ ನಡಹಳ್ಳಿ ಎಚ್ಚರಿಸಿದ್ದರು.
ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಗ್ಗಲ ಮುಳ್ಳಾಗಿ ಚುಚ್ಚುವ ಕೆಲಸ ಮಾಡಬೇಕು, ರೈತರು ಸ್ವಯಂ ಪ್ರೇರಣೆಯಿಂದ ಧರಣಿ ಸತ್ಯಾಗ್ರಕ್ಕೆ ಬೆಂಬಲ ನೀಡಿ ಸರ್ಕಾರದ ಗಮನ ಸೆಳೆಯಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ ವಿಜಯೇಂದ್ರ ನೇತೃತ್ವದಲ್ಲಿ ಬರದ ವಿಚಾರವಾಗಿ ಪಾದಯಾತ್ರೆ ಆರಂಭವಾಗಿದೆ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುದ್ದೆಬಿಹಾಳ ಸೇರಿದಂತೆ ವಿಜಯಪುರ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು, ಇಲ್ಲವಾದರೆ ರೈತರ ಹೋರಾಟ ಮತ್ತಷ್ಟು ತೀವ್ರ ಗೊಳ್ಳಲಿದೆ ಎಂದು ನಡಹಳ್ಳಿ ಎಚ್ಚರಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಶೇ. 46 ರಷ್ಟು ಮಳೆ ಕೊರತೆ ಇದ್ದರೂ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿಲ್ಲ, ಮೊದಲ ಪಟ್ಟಿಯಲ್ಲಿ ಮೂರು ಹಾಗೂ ಎರಡನೆಯ ಪಟ್ಟಿಯಲ್ಲಿ ಮೂರು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಆದರೆ ಮುದ್ದೇಬಿಹಾಳ ಕ್ಷೇತ್ರವನ್ನು ಕೈ ಬಿಡಲಾಗಿದೆ, ಇದು ರೈತರಿಗೆ ಮಾಡಿರುವ ಅನ್ಯಾಯ ಎಂದು ನಡಹಳ್ಳಿ ಆರೋಪಿಸಿದರು.
ನಾಡಗೌಡರ ನಾಟಕ ಇನ್ನೂ ನಿಂತಿಲ್ಲ:-
ಶಾಸಕ ಸಿ,ಎಸ್ ನಾಡಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಡಹಳ್ಳಿ 30 ವರ್ಷಗಳಿಂದ ನಾಟಕ ಮಾಡುತ್ತಿದ್ದೀರಿ. ಇನ್ನು ನಿಮ್ಮ ನಾಟಕ ನಿಂತಿಲ್ಲ ತಾಲೂಕಿನ ಜನ ಮುಗ್ಧರು, ದೇವರಂತವರು, ಆದರೆ ಈಗ ಜನ ಎಚ್ಚೆತ್ತು ಕೊಂಡಿದ್ದಾರೆ ಎಂದು ಟೀಕಿಸಿದರು.
ಚಮಚಾಗಿರಿ ರಾಜಕಾರಣವನ್ನು ನಾನು ಎಂದಿಗೂ ಮಾಡಿಲ್ಲ ರೈತರ ಪರವಾಗಿ ಚುಚ್ಚುವ ರಾಜಕಾರಣ ಮಾಡುತ್ತೇನೆ, ರೈತರ ಸಮಸ್ಯೆಗಳನ್ನು ಮುಂದಿಟ್ಟು ಕೊಂಡು ಸರ್ಕಾರವನ್ನು ಪ್ರಸ್ತಾಪಿಸುತ್ತೇನೆ. ಎಂ,ಬಿ,ಪಾಟೀಲರ ಹೆಸರು ಹೇಳಿಕೊಂಡು ಜವಾಬ್ದಾರಿಯಿಂದ ನೂಣುಚಿ ಕೊಳ್ಳಲು ಸಾಧ್ಯವಿಲ್ಲ. ನಾಟಕ ಮಾಡುವುದನ್ನು ಬಿಟ್ಟು ಬರ ಘೋಷಣೆ ಮಾಡಿಸಿ ಎಂದು ನಾಡಗೌಡರಿಗೆ ತಿರುಗೇಟು ನೀಡಿದರು. ಕ್ಷೇತ್ರದ ಜನರು ಮತ ಹಾಕಿ 30 ವರ್ಷಗಳಿಂದ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳುಸಿದ್ದಾರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ನೈತಿಕ ಜವಾಬ್ದಾರಿ ಶಾಸಕರ ಮೇಲಿದೆ, ಹೀಗಾಗಿ ಇನ್ನೊಬ್ಬರ ಮೇಲೆ ಜವಾಬ್ದಾರಿ ಹೊರಿಸುವ ಬದಲು ರೈತರ ಪರವಾಗಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.
ಆಡಳಿತ ಪಕ್ಷದ ಶಾಸಕರು ಏಕೆ ಮೌನ:-
ವಿಜಯಪುರ ಜಿಲ್ಲೆಯಲ್ಲಿ ಆಡಳಿತ ಪಕ್ಷದ ಆರು ಶಾಸಕರಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಗುರುತರವಾದ ಜವಾಬ್ದಾರಿ ಇದೆ, ಒಂದೇ ಪಕ್ಷದ ಸರ್ಕಾರವಿರುವಾಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಿಲ್ಲೆಯ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಕೊಡಬೇಕು, ಆದರೆ ಇದುವರೆಗೆ ಪರಿಣಾಮಕಾರಿ ಪ್ರಯತ್ನ ನಡೆದಿಲ್ಲ ಎಂದು ನಡಹಳ್ಳಿ ಆರೋಪಿಸಿದರು. ಮುಖ್ಯಮಂತ್ರಿ ಸೂಚನೆ ನೀಡಿದ್ದರೂ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಭೇಟಿ ನೀಡಿಲ್ಲ, ಶಾಸಕರು ಅಧಿಕಾರಿಗಳನ್ನು ಕರೆದುಕೊಂಡು ಹಳ್ಳಿಗಳಿಗೆ ತೆರಳಿ ಬೆಳೆ ಹಾನಿ ಹಾಗೂ ಮಳೆಯ ಕೊರತೆಯ ವಾಸ್ತವ ಸ್ಥಿತಿಯ ಸರ್ವೇ ಮಾಡ ಬೇಕಿತ್ತು, ವಾಸ್ತವ ವರದಿ ಸರ್ಕಾಕ್ಕೆ ಸಲ್ಲಿಕೆ ಯಾಗಿದ್ದರೆ ರೈತರು ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
‘ಹೊಲದಲ್ಲಿ ಬೆಳೆ ಒಣಗಿದೆ, ಫೋಟೋ ಶೂಟ್ ಬೇಡ’:-
ಕೃಷಿ ಅಧಿಕಾರಿಗಳಾದ ಶರಣಗೌಡ, ಸುರೇಶ್ ಬಾವಿಕಟ್ಟಿ ಹಾಗೂ ಮುತ್ತಣ್ಣ ಹಳ್ಳೂರ್ ಅವರ ಹೊಲದಲ್ಲಿ ಸಜ್ಜೆ ಬೆಳಿ ಪರಿಶೀಲನೆ ನಡೆಸಿದಾಗ ಬೆಳೆ ವಣಗಿರುವುದು ಕಂಡು ಬಂದಿದೆ, ಸಜ್ಜೆ ಬರುವುದಿಲ್ಲ ಎಂದು ರೈತರು ಹೇಳಿದರೂ ಮಳೆ ಬಂದರೆ ಚಿಗುರುತ್ತದೆ ಎಂಬ ರೀತಿಯಲ್ಲಿ ಹೇಳಲಾಗುತಿದೆ ರೈತರ ಹೊಲದ ವಾಸ್ತವ ಸ್ಥಿತಿ ಅರಿಯದೆ ಫೋಟೋ ಶೂಟ್ ಮಾಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ನಡಹಳ್ಳಿ ಟೀಕಿಸಿದರು.
‘ರೈತರಿಗೆ 25000 ಸಾವಿರ ಪರಿಹಾರ ನೀಡಿ’:-
ರಾಜ್ಯದಲ್ಲಿ 190 ತಾಲೂಕುಗಳನ್ನು ಬರ ಪಿಡಿತವೆಂದು ಎಂದು ಘೋಷಿಸಿ,79 ಲಕ್ಷ ಜನರಿಗೆ ತಲಾ ₹25 ಸಾವಿರ ಪರಿಹಾರ ನೀಡಬೇಕು, ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಇಂಡಿ, ದೇವರ ಹಿಪ್ಪರಗಿ, ಹಾಗೂ ತಾಳಿಕೋಟಿ ಭಾಗಗಳಲ್ಲಿ ರೈತ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆದಿದೆ, ಅದೇ ರೀತಿಯಲ್ಲಿ ಮುದ್ದೇಬಿಹಾ ಕ್ಷೇತ್ರ ರೈತರು ಪಕ್ಷಾತೀತವಾಗಿ ಒಂದಾಗಿ ಹೋರಾಟಕ್ಕೆ ಇಳಿಯಬೇಕು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸರ್ವೇ ಮಾಡಲು ಬಿಡಲಿಲ್ಲ, ತಪ್ಪು ಯಾರದು?:-
ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆದು ಕೊಂಡು ಬಂದು ವಾಸ್ತವ ವರದಿ ತಯಾರಿಸಲು ಮುಂದಾದಾಗ ಅವಕಾಶ ನೀಡಲಿಲ್ಲ. ಸರ್ವೇ ಮಾಡಲು ಬಿಡಲಿಲ್ಲ ಎಂಬ ಆರೋಪಗಳಿವೆ. ಹಾಗಾದರೆ ತಪ್ಪು ಯಾರದು? ಏಕೆ ಸರ್ವೆ ಬೇಡ ಎಂದಿರಿ? ಇದರ ಹಿಂದಿನ ಉದ್ದೇಶ ಏನು ಎಂದು ನಡಹಳ್ಳಿ ಟೀಕಿಸಿದರು.
ಧರಣಿಯಲ್ಲಿ ಮುಖಂಡರಾದ ಹೇಮರೆಡ್ಡಿ ಮೇಟಿ, ಮಲಕೇಂದ್ರ ಗೌಡ ಪಾಟೀಲ್, ಗುರುನಾಥ ಗೌಡ ಬಿರಾದಾರ್, ಸೋಮನಗೌಡ ಬಿರಾದರ್, ವೆಂಕನಗೌಡ ಪಾಟೀಲ್, ಜಗದೀಶ್ ಪಂಪಣ್ಣವರ, ಬಸವರಾಜ್ ಚಿತ್ರಗಿ, ಲಕ್ಷ್ಮಣ ಬಿಜ್ಜೂರ್, ಸಂಗಮೇಶ್ ಹತ್ತಿ, ಶಂಕರಗೌಡ ಶಿವಣಗಿ, ಶ್ರೀಶೈಲ್ ದೊಡ್ಡಮನಿ,ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

