ವಾಕಿಂಗ್ & ವ್ಯಾಯಾಮ ಮಾಡುವ ಬ್ಯಾಚ್ ನಿಂದ – ಸೋಮವಾರದ ಅನ್ನ ಸಂತರ್ಪಣೆ ಜರುಗಿತು.
ತರೀಕೆರೆ ಸೆ.08


ಸಾವಿರಾರು ಜನ ಭಕ್ತರು ಅನ್ನ ದಾಸೋಹದಲ್ಲಿ ಭಾಗವಹಿಸಿ ದೇವರ ಕೃಪಾಶೀರ್ವಾದ ಪಡೆದರು ಎಂದು ಸಿದ್ದರಾಮೇಶ್ವರ ಬಸ್ ಮಾಲೀಕರಾದ ಹಾಗೂ ವಾಕಿಂಗ್ ಬ್ಯಾಚಿನ ಅಧ್ಯಕ್ಷರಾದ ಬಿ ತಿಪ್ಪೇಶಣ್ಣ ಹೇಳಿದರು.

ಅವರು ಇಂದು ಪಟ್ಟಣದ ಚಿಕ್ಕೆರೆ ಬಳಿ ಇರುವ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎಪಿಎಂಸಿ ವಾರ್ಡ್ ನಲ್ಲಿ, ಕಳೆದ 15 ವರ್ಷಗಳಿಂದ ವಾಕಿಂಗ್ ಮತ್ತು ವ್ಯಾಯಾಮ ಮಾಡುವ ಬ್ಯಾಚ್ ನ ಸದಸ್ಯರಾದ ಪ್ರಕಾಶ್ ಶ್ರೆಷ್ಠಿ, ನಾಗರಾಜ್ ಗೀತಾಂಜಲಿ ಕಾಫಿ ವರ್ಕ್ಸ್, ಕುರುಬ ಸಮಾಜದ ಮುಖಂಡರಾದ ಎಂ ನರೇಂದ್ರ, ಬಸವರಾಜ್, ಪುಟ್ಟಸ್ವಾಮಿ, ದೇವಾಂಗ ಸಮಾಜದ ಅಡಿಕೆ ಗಂಗಾಧರ ಗೋಪಿ, ಮೋಹನ್, ದನಿಯ ಪ್ರಕಾಶ್, ಸಪ್ತಗಿರಿ ಮಂಜುನಾಥ್, ಟಿ ಆರ್ ಚಂದ್ರು, ಟಿ ವಿ ಸುಧಾಕರ, ಚಂದ್ರಪ್ಪ, ಎಂ ಎಸ್ ಎಚ್ ನಾಗರಾಜ್, ಬಿ ಕೆ ಮಂಜಣ್ಣ, ಕೃಷ್ಣ ಬೆಣ್ಣೆ, ಡೇವಿಡ್, ಅಮ್ಜದ್, ಮುಂತಾದವರ ತಂಡ 45 ನೇ. ಸೋಮವಾರದ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಟಿ ಎಸ್ ಧರ್ಮರಾಜ್, ಡಿಎಸ್ಎಸ್ ವೆಂಕಟೇಶ್ ಉಪಸ್ಥಿತರಿದ್ದು ಬಹುತೇಕ ಪಟ್ಟಣದ ಎಲ್ಲಾ ಸಮುದಾಯದ ಭಕ್ತರು ಭಾಗವಹಿಸಿದ್ದರು ಎಂದು ಹೇಳಿದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

