ಚೌಡಮ್ಮ ದೇವಸ್ಥಾನದ ಆವರಣದಲ್ಲಿ ಡಿ.ಎಸ್.ಎಸ್ ಪದಾಧಿಕಾರಿಗಳ – ಆಯ್ಕೆ ಸಭೆ ಜರುಗಿತು.
ದಾವಣಗೆರೆ ಸೆ.14

ನಿನ್ನೆ ದಾವಣಗೆರೆ ಗಾಂಧಿ ನಗರದ ಚೌಡಮ್ಮ ದೇವಸ್ಥಾನದ ಆವರಣದಲ್ಲಿ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಹಾಗೂ ರಾಜ್ಯ ಸಂಘಟನಾ ಸಂಚಾಲಕರಾದ ಕೋಲಾರದ ವೆಂಕಟರಾಮಪ್ಪ ವಿ ರವರು ದಾವಣಗೆರೆ ಜಿಲ್ಲಾ ಸಂಚಾಲಕರಾಗಿ ಉಚ್ಚಂಗಪ್ಪ ಮತ್ತು ರಾಜ್ಯ ಸಮಿತಿ ಸದಸ್ಯರಾಗಿ ವಾಸುದೇವ ಎನ್, ರಾಜ್ಯ ವಿಭಾಗೀಯ ಸಂಚಾಲಕರಾಗಿ ಮಂಜುನಾಥ ಎನ್, ಕರ್ನಾಟಕ ದಲಿತ ಮಹಿಳಾ ಒಕ್ಕೂಟಕ್ಕೆ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಮಂಜಮ್ಮ, ಜಿಲ್ಲಾ ಸಂಚಾಲಕಿಯಾಗಿ ಭಾಗ್ಯಮ್ಮ ಮತ್ತು ಅನ್ನಪೂರ್ಣ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

