ಮುಖ್ಯ ಮಂತ್ರಿಗಳ ಬಂಗಾರದ ಪದಕ ಪುರಸ್ಕೃತ ವೀರ – ಸೈನಿಕ ಶಬ್ಬೀರ್ ನಿಧನ.

ತರೀಕೆರೆ ಸೆ.14

ಭಾರತೀಯ ಸೇನಾ ಪಡೆಯಲ್ಲಿ 22 ವರ್ಷಗಳ ಕಾಲ ಸೈನಿಕನಾಗಿ, ಚಾಲಕನಾಗಿ ಮೆಕಾನಿಕ್ ಆಗಿ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಭಾರತಕ್ಕೆ ಜಯ ತಂದ ವೀರ ಸೈನಿಕ ಶಬ್ಬೀರ್ ರವರು ಇಂದು ನಿಧನರಾಗಿದ್ದು.

ಅವರ ಕುಟುಂಬಕ್ಕೆ ಇವರ ಅಗಲಿಕೆಯ ದುಃಖ ತಡೆಯುವ ಶಕ್ತಿ ಭಗವಂತನು ಅಲ್ಲಾಹನು ಕರುಣಿಸಲಿ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಿಲಿಟರಿ ಶ್ರೀನಿವಾಸ್ ಹೇಳಿದರು.

ಅವರು ಪಟ್ಟಣದ ಮೃತ ಶಬೀರ್ ಸ್ವಗೃಹದಲ್ಲಿ ಮಾತನಾಡಿದರು. ಮಾಜಿ ಸೈನಿಕರಾದ ಎಸ್ ಹೆಚ್ ಕುಮಾರ್, ದೇವೇಂದ್ರ, ಗೋವಿಂದಪ್ಪ, ಸೋಮಶೇಖರ್ ಮತ್ತು ಲಿಂಗದಹಳ್ಳಿ ಯ ಮಾಜಿ ಸೈನಿಕರು,ಕಡೂರಿನ ಮಾಜಿ ಸೈನಿಕರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಕಾರ್ಗಿಲ್ ಯೋಧ ಸೈನ್ಯದಲ್ಲಿ ನಾಯಕ್ ರಾಂಕ್ ಪಡೆದಿದ್ದ ಶಬ್ಬೀರ್ ಅವರಿಗೆ 2026-27 ನೇ. ಸಾಲಿನ ಮುಖ್ಯಮಂತ್ರಿಗಳ ಬಂಗಾರದ ಪದಕ ಪುರಸ್ಕೃತರಾಗಿದ್ದಾರೆ ಇವರು ಖಾಜಿ ಬೀದಿಯಲ್ಲಿರುವ ತಮ್ಮ ಮನೆಯನ್ನು ಸರ್ಕಾರದ ನಮ್ಮ ಕ್ಲಿನಿಕ್ ಆಸ್ಪತ್ರೆ ತೆರೆಯಲು ನೀಡಿದ್ದಾರೆ, ಇವರು ತರೀಕೆರೆಯ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇವರ ಅಗಲಿಕೆಯಿಂದ ದೇಶ ಸೇವೆ ಮಾಡಿದ ವೀರ ಸೈನಿಕನನ್ನು ಕಳೆದು ಕೊಂಡಿದ್ದೆವೆ ಇವರಿಗೆ ನೌಶಾಧಿಕಾ ಎಂಬ ಹೆಣ್ಣು ಮಗಳು ಪಿದಾ ಮೊಹಮ್ಮದ್ ಎನ್ನುವ ಮಗ ಪತ್ನಿ ಜೈದಾ ಬಾನು ರವರನ್ನು ಅಗಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಕೆ ವಿ ಠಾಣಾಧಿಕಾರಿ ತಿಪ್ಪೇಸ್ವಾಮಿ ಆರ್ ಸಹಾಯಕ ಠಾಣಾಧಿಕಾರಿ ಡಿ..ಜಿ ನಾಗೇಂದ್ರ ಮತ್ತು ಸಿಬ್ಬಂದಿ ವರ್ಗದವರು ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್ ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button