ಸ್ವಾಮಿ ವಿವೇಕಾನಂದರ ಪ್ರಶ್ನಿಸುವಿಕೆ, ಧೈರ್ಯ ಮಕ್ಕಳಿಗೆ ಆದರ್ಶವಾಗ ಬೇಕು – ಡಾ, ಭೂಮಿಕ.

ಚಳ್ಳಕೆರೆ ಸೆ.14

ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಲ್ಲಿ ವ್ಯಕ್ತವಾಗುವ ಅವರ ಪ್ರಶ್ನಿಸುವಿಕೆಯ ಗುಣ, ಕುತೂಹಲ ಮತ್ತು ಅಸೀಮ ಧೈರ್ಯ ಇಂದಿನ ಮಕ್ಕಳಿಗೆ ಸದಾ ಆದರ್ಶವಾಗ ಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಡಾ‌, ಭೂಮಿಕ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಸ್ವಾಮಿ ವಿವೇಕಾನಂದರ ಬಾಲ್ಯ ಜೀವನ” ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ತರಗತಿಯಲ್ಲಿ ಕುಮಾರಿ ಪ್ರವಲ್ಲಿಕಾ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಶ್ರೀರಾಮಕೃಷ್ಣರ ಮತ್ತು ಗಾಯತ್ರಿ ಮಂತ್ರ ಪಠಣ, ಶ್ರೀಮದ್ ಭಗವದ್ಗೀತೆಯ ಭಕ್ತಿ ಯೋಗದ ಶ್ಲೋಕಗಳ ಕಲಿಕೆ, ಯತೀಶ್ ಎಂ ಸಿದ್ದಾಪುರ ಅವರಿಂದ ಗಣೇಶನ ನಾಮಾವಳಿ, ಮಾತಾಜೀ ತ್ಯಾಗಮಯೀ ಅವರಿಂದ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ ಪಠಣ ನಡೆಯಿತು.

ಕಾರ್ಯಕ್ರಮದಲ್ಲಿ ಸುಧಾಮಣಿ, ಸಂತೋಷ್, ಯಶಸ್, ತನುಜಾ, ಯಶಸ್ವಿನಿ, ಶುಕ್ತಿಜಾ, ನಿರಂಜನ್, ವಿವೇಕ, ಸೋಹನ್, ಪುರಂದರ, ಭಾವನಾ, ಅವಂತಿಕಾ, ವಿವಿಕ್ತ, ಕೋಮಲಸಿರಿ, ಚರಣ್ಯ, ಸಹನಾ, ತನ್ಮಯಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button