ಶ್ರೀಮಾತೆಯವರು ಶ್ರೀರಾಮಕೃಷ್ಣರ ಭಾವ ಚಿತ್ರದಲ್ಲಿ ಜೀವಂತ ಸಾನಿಧ್ಯವನ್ನು ಅನುಭವಿಸುತ್ತಿದ್ದರು – ಯತೀಶ್ ಎಂ ಸಿದ್ದಾಪುರ.

ಚಳ್ಳಕೆರೆ ಸೆ.14,

ಶ್ರೀಮಾತೆ ಶಾರದಾದೇವಿಯವರು ಶ್ರೀರಾಮಕೃಷ್ಣರ ಭಾವ ಚಿತ್ರದಲ್ಲಿ ಅವರ ಜೀವಂತ ಸಾನಿಧ್ಯವನ್ನು ಅನುಭವಿಸಿ ಅದರಲ್ಲಿ ಅವರನ್ನು ಸಾಕ್ಷಾತ್ ಆಗಿ ಕಾಣುತ್ತಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ವಾಲ್ಮೀಕಿ ನಗರದ ಸದ್ಭಕ್ತರಾದ ಶ್ರೀಮತಿ ಜಯಮ್ಮ ನರಸಿಂಹಮೂರ್ತಿ ಅವರ ಮೇಘಶ್ರೀ ನಿವಾಸದಲ್ಲಿ “ಶ್ರೀಕೃಷ್ಣ ಜನ್ಮಾಷ್ಟಮಿ” ಯ ಪ್ರಯುಕ್ತ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ನಡೆಸಿ ಕೊಟ್ಟ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಶ್ರೀಮಾತೆ-ಶ್ರೀರಾಮಕೃಷ್ಣ ರೂಪವೆರಡು ಶಕ್ತಿಯೊಂದು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಸತ್ಸಂಗದಲ್ಲಿ ಜಯಮ್ಮ, ನರಸಿಂಹಮೂರ್ತಿ, ಹೆಚ್ ಲಕ್ಷ್ಮೀದೇವಮ್ಮ, ಮೃದಂಗ ಶ್ರೀನಿವಾಸ್, ಪ್ರೇಮಾ, ಪ್ರಮೋದಾ ಆನಂದ, ಲಕ್ಷ್ಮೀ ವಂಶಿಕೃಷ್ಣ, ನಂದನ್ ವಿಶೃತ್, ಸರಸ್ವತಮ್ಮ ಗೋವಿಂದರಾಜು, ಗೀತಾ ಪ್ರಕಾಶ್, ಗೀತಾ ಸುಂದರೇಶ್ ದೀಕ್ಷಿತ್, ಸರಸ್ವತಿ ರೆಡ್ಡಿ, ಉಷಾ, ಗೋವಿಂದಶೆಟ್ಟಿ, ವಿಶಾಲಾಕ್ಷಿ ಪುಟ್ಟಣ್ಣ, ತಿಪ್ಪಮ್ಮ,ಗಿರಿಜಾ ಜಗದೀಶ್, ಅನಿತಾ, ಉಮಾ, ಕಲ್ಪನಾ, ಶೋಭಾ, ಪಂಕಜಾ, ದಾಕ್ಷಾಯಣಿ, ಗಾಯತ್ರಿ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ , ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button