ಬ್ರೇಕಿಂಗ್ ನ್ಯೂಸ್🚨⚡💥ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಕುಂಭಾಸಿ ನೇಮಕ – ಅಭಿನಂದನೆಗಳ ಮಹಾಪೂರ..!💥
ಉಡುಪಿ ಸೆ.14

ನೇಮಕಾತಿ ವಿವರ:-
‘ಕರಾವಳಿ ಚಾಣಕ್ಯ’ ಪತ್ರಿಕೆಯ ಸಂಪಾದಕರಾದ ಹರೀಶ್ ಕುಂಭಾಸಿ ಅವರನ್ನು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ’ ಸಂಘಟನೆಯ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಅಧಿಕೃತ ಆದೇಶ:-
ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ (ನೋಂದಣಿ) ಸಂಖ್ಯೆ:-
DRB4/SOR/52/2022-2023) ಈ ಸಂಘಟನೆಯ ರಾಜ್ಯಧ್ಯಕ್ಷರಾದ ಬಿ. ಮಲ್ಲಿಕಾರ್ಜುನ ಅವರು 14/09/2026 ರಂದು ಈ ನೇಮಕಾತಿ ಆದೇಶ ಪತ್ರವನ್ನು ಹೊರಡಿಸಿದ್ದಾರೆ.
ಜವಾಬ್ದಾರಿ ಹಾಗೂ ಕರ್ತವ್ಯ:-
ಉಡುಪಿ ಜಿಲ್ಲೆಯ ಪತ್ರಕರ್ತರನ್ನು ಒಗ್ಗೂಡಿಸಿ ಸಂಘಟಿಸುವುದು ಹಾಗೂ ಅವರ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ವೃತ್ತಿಪರ ಸಮಸ್ಯೆಗಳಿಗೆ ಧನಿಯಾಗುವಂತೆ ನೂತನ ಕಾರ್ಯದರ್ಶಿಗೆ ಸೂಚಿಸಲಾಗಿದೆ.
ಅಭಿನಂದನೆಗಳು:-
ಹರೀಶ್ ಕುಂಭಾಸಿ ಅವರು ನೂತನ ಜವಾಬ್ದಾರಿಯನ್ನು ವಹಿಸಿ ಕೊಳ್ಳುತ್ತಿದ್ದಂತೆ, ವಿವಿಧ ಪತ್ರಿಕೆಗಳ ಸಂಪಾದಕರು, ಹಿರಿಯ ಪತ್ರಕರ್ತರು ಹಾಗೂ ಸಂಘಟನೆಯ ಪ್ರಮುಖರು ಹರ್ಷ ವ್ಯಕ್ತಪಡಿಸಿ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

