🪔ನಿಧನ ವಾರ್ತೆ-ದೊರೆಗಳ ಒಬಯ್ಯ ನಿಧನ🪔

ಗುಡೇಕೋಟೆ ಸೆ.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ದೊರೆಗಳ ಒಬಯ್ಯ ಇವರು 4 ನೇ. ವಾರ್ಡಿನ ಗುಡೇಕೋಟೆ ಗ್ರಾಮದ ನಿವಾಸಿಗಳಾದ (81) ವರ್ಷ ಸೆಪ್ಟೆಂಬರ್ 14 ರ ಸೋಮವಾರ ಇಂದು 12:ಗಂಟೆಗೆ ಸುಮಾರಿಗೆ ಬಳ್ಳಾರಿಯ ಸರ್ಕಾರಿ ಆಸ್ಪತ್ರೆ ವೀಮ್ಸ್ ನಲ್ಲಿ ಅನಾರೋಗ್ಯ ನಿಮಿತ್ಯವಾಗಿ ನಿಧನರಾಗಿದ್ದಾರೆ.

ಇವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಮೂರು ಜನ ಗಂಡು ಮಕ್ಕಳಿದ್ದು ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತಿದ್ದರು. ಮೃತರ ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ಸೇರಿದಂತೆ, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಹೊಂದಿದವರಾಗಿದ್ದರು.

ಅಂತ್ಯಕ್ರಿಯೆ-ಸೆಪ್ಟೆಂಬರ್ 15 ರ ಮಂಗಳವಾರ ಮಧ್ಯಾಹ್ನ 12:30 ಕ್ಕೆ ಗುಡೇಕೋಟೆ ಗ್ರಾಮದಲ್ಲಿ ಬರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಗುರು ಹಿರಿಯರು ತಿಳಿಸಿರುತ್ತಾರೆ.

ಸಂತಾಪ ಕೂಡ್ಲಿಗಿ ತಾಲೂಕಿನ ಹಲವಾರು ಗ್ರಾಮದ ವಾಲ್ಮೀಕಿ ಸಮುದಾಯದ ಬಂಧುಗಳು ಹಾಗೂ ದಲಿತ, ಮುಸ್ಲಿಂ ಸಮುದಾಯದವರು, ಸ್ಥಳೀಯ ಗ್ರಾಮವಾದ ಗುಡೇಕೋಟೆ ಗ್ರಾಮದ ಸಂಬಂಧಿಕರು ಹಾಗೂ ವಿವಿಧ ಸಮುದಾಯದವರು ಸಮಸ್ತ ಗ್ರಾಮಸ್ಥರು. ಹಲವು ಸಮುದಾಯದವರು ಸೇರಿದಂತೆ, ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ.

ರೈತರು, ಕಾರ್ಮಿಕರು ಮಹಿಳೆಯರು ಕನ್ನಡಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿಧ ಜನ ಪ್ರತಿನಿಧಿಗಳು, ಹಾಗೂ ಹೋರಾಟಗಾರರು ಗಣ್ಯರು. ಕೂಡ್ಲಿಗಿ ತಾಲೂಕಿನ ಪ್ರಮುಖ ನಾಗರೀಕರು, ಗುಡೇಕೋಟೆ ಗ್ರಾಮದ ನೆರೆ ಹೊರೆ ಗ್ರಾಮಸ್ಥರು. ಮೃತ ದೊರೆಗಳ ಒಬಯ್ಯ್ ರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ‌

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button