‘ವಕ್ರತುಂಡ’ ಚಿತ್ರದ ಧಮಾಕಾ ‘ಜೈ ಗಣೇಶ’ ಟೈಟಲ್ ಟ್ರ್ಯಾಕ್ – ಸಾಂಗ್ ಭರ್ಜರಿ ಸದ್ದು.

ಬೆಂಗಳೂರ ಸೆ.15

ಗೌರಿ-ಗಣೇಶ ಹಬ್ಬದ ಸಡಗರದಲ್ಲಿರುವ ಸಿನಿ ರಸಿಕರಿಗೆ ಬಹು ನಿರೀಕ್ಷಿತ ಕನ್ನಡ ಚಲನ ಚಿತ್ರ ‘ವಕ್ರತುಂಡ’ ಚಿತ್ರ ತಂಡವು ಭರ್ಜರಿ ಹಬ್ಬದ ಗಿಫ್ಟ್ ನೀಡಿದೆ. ಚಿತ್ರದ ಹೈ-ಎನರ್ಜಿ ಮತ್ತು ಭಕ್ತಿ ಭಾವದ ವಿಡಿಯೋ ಟೈಟಲ್ ಟ್ರ್ಯಾಕ್ ಸಾಂಗ್ ‘ಜೈ ಗಣೇಶ’ ಬಿಡುಗಡೆ ಯಾಗಿ ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ.

ಲೋಚನ್ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ದೂರಿಯಾಗಿ ಮೂಡಿ ಬಂದಿರುವ ಈ ಹಾಡಿಗೆ ಪ್ರತಿಭಾವಂತ ಸಂಗೀತ ನಿರ್ದೇಶಕ ಜೇಮ್ಸ್ ಆರ್ಕಿಟೆಕ್ಟ್ ಮಾಸ್ ಮತ್ತು ಕ್ಲಾಸ್ ಶೈಲಿಯಲ್ಲಿ ರಾಗಸಂಯೋಜನೆ ಮಾಡಿದ್ದಾರೆ. ಹಬ್ಬದ ಜೋಶ್ ಹೆಚ್ಚಿಸುವ ಸಾಹಿತ್ಯವನ್ನು ರಾಘವ ರಂಜನ್ ಬರೆದಿದ್ದು, ಖ್ಯಾತ ಗಾಯಕ ಶಶಾಂಕ್ ಶೇಷಗಿರಿ ಹಾಡಿಗೆ ಜೀವ ತುಂಬಿದ್ದಾರೆ.

ಮಾಸ್ಟರ್ ಕೊರಿಯೋಗ್ರಾಫರ್ ಕಂಬಿ ರಾಜು ಅವರ ನೃತ್ಯ ನಿರ್ದೇಶನದಲ್ಲಿ. ಛಾಯಾಗ್ರಾಹಕ ಜೈ ಆನಂದ ಅವರ ಛಾಯಾಗ್ರಹಣದಲ್ಲಿ ಮೂಡಿ ಬಂದಿರುವ ಈ ವಿಡಿಯೋ ಸಾಂಗ್ ವೀಕ್ಷಕರಿಗೆ ಹಬ್ಬದ ನಿಜವಾದ ಕಿಕ್ ನೀಡುತ್ತಿದೆ. ಎಡಿಟರ್ ರವಿ ತೇಜ ಸಂಕಲನ ಹಾಡಿನ ಮೆರುಗನ್ನು ಹೆಚ್ಚಿಸಿದೆ. ಪ್ರತಿಭಾವಂತ ನಿರ್ದೇಶಕ ಹರೀಶ್ ಕುಂದುರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಈ ಹಿಂದೆ ನೈಂಟಿಕುಡಿ ಪಲ್ಟಿ ಹೊಡಿ, ದೇವರಾಣೆ, ಸಿಗರೇಟ್ ಸೇದ್ಬೇಡಿ.

ಜಿಲೇಬಿ ಚಿತ್ರಗಳನ್ನು ನಿರ್ಮಿಸಿದ್ದ ಲಕ್ಕಿ ಶಂಕರ್ (ಶಂಕರ್ ಎಸ್) ಕಥೆ ಬರೆದು ನಿರ್ಮಾಣ ಮಾಡಿದ್ದು, ಉಮೇಶ್ ಬಿ.ಹೆಚ್. ದಾವಣಗೆರೆ ಸಹ ನಿರ್ಮಾಪಕ ರಾಗಿದ್ದಾರೆ. ಜೊತೆಗೆ ನಾಗೇಂದ್ರ, ಡಾ, ಪ್ರಭು ಗಂಜಿಹಾಳ್, ಡಾ, ವೀರೇಶ್ ಹಂಡಿಗಿ ಪಿ.ಆರ್‌.ಓ ಆಗಿದ್ದಾರೆ.

ತಾರಾಬಳಗದಲ್ಲಿ ರಚಿತಾ ಮಹಾಲಕ್ಷ್ಮಿ, ಲಕ್ಕಿ ಶಂಕರ್, ಉಮೇಶ್ ಬಿ.ಹೆಚ್. ದಾವಣಗೆರೆ, ಮೂಗು ಸುರೇಶ್, ಸಂಗಮೇಶ್ ಕಾಸ್, ಅಮಿತ್ ರಾವ್, ಆಟೋ ನಾಗರಾಜ್, ಭುವನ ಹರೀಶ್ ಮತ್ತು ಮೋಹನಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸದ್ಯದಲ್ಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿರುವ ‘ವಕ್ರತುಂಡ’ ಚಿತ್ರದ ಈ ರೋಮಾಂಚಕ ವಿಡಿಯೋ ಹಾಡು ‘A2 MUSIC’ ಯೂಟ್ಯೂಬ್ ಚಾನೆಲ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button