ಕೊನೆ ಭಾಗಕ್ಕೆ ಸಮರ್ಪಕ ನೀರು ಹರಿಸಲು ಒತ್ತಾಯಿಸಿ – ರೈತ ಸಂಘದಿಂದ ಪ್ರತಿಭಟನೆ.
ಕವಿತಾಳ ಸೆ.21

ಪಟ್ಟಣದ ಜಲ ಸಂಪನ್ಮೂಲ ಇಲಾಖೆಯ ಉಪ ವಿಭಾಗ ಕಚೇರಿಗೆ ಶನಿವಾರ ಧಾವಿಸಿದ ಕರ್ನಾಟಕ ರಾಜ್ಯ ಸಂಘದ ಪದಾಧಿಕಾರಿಗಳು ಮತ್ತು ರೈತರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಶರಣಪ್ಪ ಮರಳಿ ಸುಲ್ತಾನಾಪುರ ಮನವಿ ಸಲ್ಲಿಸಿ ಮಾತನಾಡಿದ ಅವರು ‘ತುಂಗಭದ್ರಾ ಎಡದಂಡೆ ಕಾಲುವೆ 69 ಮೇಲ್ 65ನೇ ವಿತರಣಾ ಕಾಲುವೆಯ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಬೇಕು ಹಾಗೂ ಕೊನೆ ಭಾಗದವರೆಗೆ ತಲಪುವಂತೆ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ಪ್ರತಿಭಟನೆ ವೇಳೆ ಸಿಪಿಐಎಂಎಲ್ ರೇಡ್ ಸ್ಟಾರ್ ಮಾನ್ವಿ ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಉಟಕನೂರು ಮಾತನಾಡಿ ಮುಖ್ಯ ಕಾಲುವೆಗೆ ನೀರು ಹರಿಸಿ ತಿಂಗಳು ಮೇಲಾದರೂ ‘ನಾಲೆ ವ್ಯಾಪ್ತಿಯ ಕೊನೆಯ ಗ್ರಾಮಗಳಾದ ಉಟಕನೂರು, ಬೆಳವಾಟ, ದೋತರಬಂಡಿ ಮತ್ತು ದಿದ್ದಗಿ ಗ್ರಾಮಗಳ ಜಮೀನುಗಳಿಗೆ ಇದುವರೆಗೂ ನೀರು ತಲುಪದೇ, ಭತ್ತ ನಾಟಿ, ಜೋಳ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ, ಮತ್ತೊಂದೆಡೆ ನಾಟಿ ಪದ್ಧತಿ ಬಿಟ್ಟು ಬಿತ್ತನೆ ಮಾಡಿದ ಭತ್ತದ ಬೆಳೆ ಹಾಗೂ ಸಸಿ ಮಡಿಗಳು ಒಣಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ರೈತ ಮುಖಂಡರು ಹಾಗೂ ರೈತರು ಒಕ್ಕೋರಲಿ ನಿಂದ ಪ್ರಭಾವಿ ರೈತರು ‘ಅನಧಿಕೃತ ಕೆರೆಗಳನ್ನು ನಿರ್ಮಾಣ ಮಾಡಿ ಕಾಲುವೆಗೆ ಅಕ್ರಮವಾಗಿ ಅಳವಡಿಸಿದ ಪೈಪ್ ಗುರುತಿಸಿ ತೆಗೆಯ ಬೇಕು ಮತ್ತು ಅಕ್ರಮ ನೀರು ಬಳಕೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳ ಬೇಕು’ ನಿರ್ಲಕ್ಷ ತೋರಿಸಿದರೆ ಕಚೇರಿಗೆ ಬೀಗ ಮುದ್ರೆ ಹಾಕಿ ಉಗ್ರ ಧರಣಿ ಮಾಡುವುದಾಗಿ ಎಚ್ಚರಿಸಿದರು.
ನಂತರ ಜಲಸಂಪನ್ಮೂಲ ಇಲಾಖೆ ಎಇಇ ವಿದ್ಯಾಸಾಗರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ನಾಗಪ್ಪ ಬೂದಿಹಾಳ, ಉಟಕನೂರು ಮುಖಂಡರಾದ ರಾಮನಗೌಡ ಪೊಲೀಸ್ ಪಾಟೀಲ್, ಮಲ್ಲಯ್ಯ ಎಚ್ಎಂಟಿ, ಪ್ರಾಣೇಶ್ ಪೂಜಾರಿ, ಬಿಜೆಪಿ ಮುಖಂಡ ಶಿವಕುಮಾರ್ ಕುಂಬಾರ, ಮಾನ್ವಿ ಟಿಪಿ ಮಾಜಿ ಸದಸ್ಯ ದೇವರಾಜ್ ಉಟಕನೂರು, ಶೇಖರಪ್ಪ ಹೆಬ್ಬಾಳ, ಜಯಪ್ಪ ಲಿಂಗಸುಗೂರು, ಪರಯ್ಯಸ್ವಾಮಿ, ತಿಮ್ಮಪ್ಪ ಪೂಜಾರಿ, ದುರುಗಪ್ಪ, ವೆಂಕಟೇಶ, ರಾಮಯ್ಯ ಜವಳಗೇರಿ, ಸೇರಿದಂತೆ ನಾಲ್ಕು ಗ್ರಾಮದ ನೂರಾರು ರೈತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

