ದಲಿತ ಚಳುವಳಿ ಪ್ರೊ, ಬಿ.ಕೃಷ್ಣಪ್ಪರ ತತ್ವ ಸಿದ್ಧಾಂತದಲ್ಲಿ ನಡೆಯ ಬೇಕು – ತರೀಕೆರೆ.ಎನ್ ವೆಂಕಟೇಶ್.
ಬೆಂಗಳೂರು ಸೆ.27


ಸಮಾಜ ಮುಖಿ ಯಾಗಿ ಚಿಂತಿಸ ಬೇಕು ಶೋಷಿತರ ಧ್ವನಿಯಾಗಿ ಸಂಘಟನೆ ನಿಲ್ಲಬೇಕು ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ ಹೇಳಿದರು. ಅವರು ಇಂದು ಬೆಂಗಳೂರಿನ ಕಾವೇರಿ ಅತಿಥಿ ಗೃಹದಲ್ಲಿ ರಾಜ್ಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದಲಿತ ಚಳುವಳಿ ಕೆಲವು ನಾಯಕರ ಕಪಿ ಮುಷ್ಠಿಯಲ್ಲಿ ಸಿಲುಕಿವೆ ಹಾಗಾಗಿ ಶಕ್ತಿ ಹಿನಾಗುತ್ತಿದೆ ಆದರೆ ನಮ್ಮ ಸಂಘಟನೆಯು ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಗೆ ಒಳಗಾಗದೆ ರಾಜ್ಯ ಸಮಿತಿ ಎಲ್ಲಾ ಪದಾಧಿಕಾರಿಗಳು ಬಹುಮತ ದಿಂದ ಪ್ರೀತಿ ವಿಶ್ವಾಸದಿಂದ ಚಳುವಳಿಯನ್ನು ಕಟ್ಟಬೇಕು ರಾಜ್ಯದ ಶೋಷಿತರು ದಲಿತರು ಮಹಿಳೆಯರ ವಿಮೋಚನೆಗಾಗಿ ಹೋರಾಟ ಮಾಡ ಬೇಕಾಗಿದೆ, ದಲಿತ ಚಳುವಳಿಯು ಪ್ರೊ, ಬಿ.ಕೃಷ್ಣಪ್ಪರ ತತ್ವ ಸಿದ್ಧಾಂತದಲ್ಲಿ ನಡೆಯ ಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಾಗಲಕೋಟೆ ಯಿಂದ ಯಶೋಧರ ಸಂಗಮ, ರಾಜ್ಯ ಸಂಘಟನಾ ಸಂಚಾಲಕರಾಗಿ ಬೆಂಗಳೂರಿನ ನಗರ ಜಿಲ್ಲೆಯಿಂದ ರಂಗಸ್ವಾಮಿ ಗ್ರಾಮಾಂತರ ಜಿಲ್ಲೆಯಿಂದ ಶಿವಣ್ಣ ಹೊಸದಾಗಿ ಸಂಘಕ್ಕೆ ಸೇರ್ಪಡೆಯಾಗಿ ಹೋರಾಟದ ಚಳುವಳಿಯನ್ನು ಕೈಗೆತ್ತಿ ಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯ ಸಂಘಟನಾ ಸಂಚಾಲಕರಾದ ಮೈಸೂರಿನ ಕೆ ನಂಜಪ್ಪ ಬಸವನಗುಡಿ ರವರು ಮಾತನಾಡಿ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಜಶೇಖರ್ ಜಾಪನೂರ್ ಮಾತನಾಡಿ ದಲಿತರ, ಶೋಷಿತರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ಕೋಲಾರದ ವೆಂಕಟರಾಮಪ್ಪನವರು ಮಾತನಾಡಿ ಪಿಟಿಸಿಎಲ್ ಕಾಯ್ದೆ ದುರ್ಬಲವಾಗುತ್ತಿದ್ದು ಈ ಕುರಿತು ನ್ಯಾಯಯುತವಾಗಿ ಮೂಲ ಮಂಜೂರಿದಾರರಿಗೆ ನ್ಯಾಯ ಕೊಡಿಸುವ ಕೆಲಸ ಮಾಡ ಬೇಕಾಗಿದೆ ಈ ಕುರಿತು ಹೋರಾಟ ಮಾಡಬೇಕಾಗಿದೆ ಎಂದರು.
ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿಯಾದ ವಿಜಯಲಕ್ಷ್ಮಿ ಗೋಪಾಲ್ ರವರು ಮಾತನಾಡಿ ಮಹಿಳೆಯರು ಸ್ವಾಭಾವಲಂಬಿಗಳಾಗಿ ಬದುಕಲು ಹೊಲಿಗೆ ತರಬೇತಿ ಕೇಂದ್ರಗಳನ್ನು ಸಂಘಟನೆ ಯಿಂದ ಮುನ್ನಡೆಸಬೇಕು ಎಂದು ಹೇಳಿದರು.
ಹನುಮಂತಪ್ಪ ಹಿರೇಮನಿ ಭಜಂತ್ರಿ ರವರು ಮಾತನಾಡಿ ರಾಜ್ಯ ಮಟ್ಟದ ಚಳುವಳಿಗೆ ಬಾಗಲಕೋಟೆ ಯಿಂದ ಹೆಚ್ಚಿನ ಕಾರ್ಯಕರ್ತರನ್ನು ಕರೆ ತರುತ್ತೇವೆ ಎಂದು ಹೇಳಿದರು.
ಕಲಬುರ್ಗಿಯ ಸತೀಶ ಭಟ್ಟರಕಿ ಮಾತನಾಡಿ ರಾಜ್ಯ ಮಟ್ಟದ ಚಳುವಳಿ ಯಶಸ್ವಿ ಯಾಗಲು ಕಲಬುರ್ಗಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆ ತರುತ್ತೇವೆ ಎಂದರು.
ಈ ಸಭೆಗೆ ರಾಜ್ಯ ಸಮಿತಿ ಪದಾಧಿಕಾರಿಗಳಾದ ಡಾ, ಬಸವರಾಜ ಕಟ್ಟಿ, ಯಮನೂರು ಹಲಗಿ, ಕೊಡುಗು ಜಿಲ್ಲೆಯ ಶೀಲಾ ರಾಜ್, ಹಾಸನ ಜಿಲ್ಲೆಯ ರೇಣುಕಾ, ಬೆಂಗಳೂರು ಜಿಲ್ಲೆಯ ಚಂದ್ರಮ್ಮ ಕೆ, ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್ ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
