ಮಾದಕ ವಸ್ತುಗಳಿಂದ ಯುವ ಜನರನ್ನು ರಕ್ಷಿಸ ಬೇಕು – ಟಿ.ಜಿ ಶಶಾಂಕ್.

ತರೀಕೆರೆ ಸೆ.26

ಮಾದಕ ವಸ್ತುಗಳಾದ ಗುಟ್ಕಾ ಬಿಡಿ ಸಿಗರೇಟು ತಂಬಾಕು ಹಾಗೂ ಡ್ರಗ್ಸ್ ನಿಂದ ಯುವಜನರ ಬದುಕು ಬರಡಾಗುತ್ತಿದೆ ಎಂದು ಸಾಯಿ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಸ್ವಾಮಿ ವಿವೇಕಾನಂದ ಶಾಲೆ ವ್ಯವಸ್ಥಾಪಕರಾದ ಟಿ ಜಿ ಶಶಾಂಕ್ ರವರು ಹೇಳಿದರು.

ಅವರು ಇಂದು ಭೂಮಿ ಫೌಂಡೇಶನ್, ಸಾಯಿ ಇಂಟರ್ನ್ಯಾಷನಲ್ ಸ್ಕೂಲ್, ಸ್ವಾಮಿ ವಿವೇಕಾನಂದ ಪಿ.ಯು ಕಾಲೇಜ್, ಕರ್ನಾಟಕ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರೋಟರಿ ಸಂಸ್ಥೆ, ಲಯನ್ಸ್ ಇಂಟರ್ನ್ಯಾಷನಲ್, ಪುರಸಭೆ ಏರ್ಪಡಿಸಿದ್ದ ಮಾದಕ ವಸ್ತುಗಳ ಜಾಗೃತಿ ಕುರಿತು ಪಟ್ಟಣದ ಸಾಯಿ ಇಂಟರ್ನ್ಯಾಷನಲ್ ಸ್ಕೂಲ್ ಇಂದ ಪ್ರಾರಂಭವಾದ ಮ್ಯಾರಥಾನ್ ಓಟ ಉದ್ಘಾಟಿಸಿ ಮಾತನಾಡಿ ಯುವ ಜನರನ್ನು ಮಾದಕ ವಸ್ತುಗಳಿಂದ ರಕ್ಷಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವೈದ್ಯರಾದ ಪ್ರಸನ್ನ ಕುಮಾರ್ ಸಣ್ಣಕ್ಕಿ ಮಾತನಾಡಿ ತುಂಬಾ ವಿದ್ಯಾರ್ಥಿಗಳು ಯುವ ಜನರು ಗುಟ್ಕಾ ತಂಬಾಕು ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ ಪಿ ಕುಮಾರ್ ಅವರು ಮಾತನಾಡಿ ಯುವ ಜನರು ವಿದ್ಯಾರ್ಥಿಗಳು ಈ ದೇಶದ ಸಂಪತ್ತು ಅವರನ್ನು ಮಾದಕ ವಸ್ತುಗಳಿಂದ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ನಿವೃತ್ತ ಬಿ.ಇ.ಓ ಸೋಮಶೇಖರ್, ರೋಟರಿ ಸಂಸ್ಥೆಯ ಪರ್ವೀನ್ ಅರವಿಂದ ಪುರಸಭಾ ಸದಸ್ಯರಾದ ಆದಿಲ್ ಪಾಷಾ ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪಟ್ಟಣದ ಅಂಬೇಡ್ಕರ್ ವೃತ್ತ ಹಾಗೂ ಕೊಡಿ ಕ್ಯಾಂಪ್ ವೃತ್ತ ಬಳಸಿ ಕೊಂಡು ಎಸ್ ಜೆ ಎಂ ಕಾಲೇಜು ಗಾಳಿಹಳ್ಳಿ ಕ್ರಾಸ್ ವೃತ್ತ ಮಾರಿಗದ್ದಿಗೆ ವೃತ್ತದಿಂದ ಸಾಗಿ ಗಾಂಧಿ ವೃತದಲ್ಲಿ ಕೊನೆ ಗೊಳಿಸಲಾಯಿತು.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್ ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button