ಶ್ರೀಶಾರದಾಶ್ರಮದಲ್ಲಿ ಶಾರದಾಮಾತೆಯವರ – ತೀರ್ಥ ಯಾತ್ರೆಗಳ ಪ್ರವಚನ.

ಚಳ್ಳಕೆರೆ ಅ.03

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಶ್ರೀಮಾತೆ ಶಾರದಾದೇವಿಯವರು ಕೈಗೊಂಡಿದ್ದ ಪುರಿ ಜಗನ್ನಾಥ, ಆಂಟ್ಪುರ, ಗಯಾ, ಬುದ್ಧಗಯಾ, ವೈದ್ಯನಾಥ ತೀರ್ಥಯಾತ್ರೆಯ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಭಜನೆ, ದಿವ್ಯತ್ರಯರಿಗೆ ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ವನಜಾಕ್ಷಿ ಮೋಹನ್, ಜಿ ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ವೆಂಕಟೇಶ್, ಚೆನ್ನಕೇಶವ, ಚೇತನ್, ಡಾ‌, ಭೂಮಿಕಾ, ಪ್ರಿಯಾಂಕ, ಮಂಜುಳಾ,ರಶ್ಮಿ, ಯಶಸ್ವಿ, ಸುಧಾಮಣಿ, ಸಿ.ಎಸ್ ಭಾರತಿ ಚಂದ್ರಶೇಖರ್ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.

ವರದಿ:-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button