🌹ಪ್ರವಾದಿ ಪೈಗಂಬರ🌹 ‌‌(ಭಾಮಿನಿ ಷಟ್ಪದಿ)

ಕುವರ ನಸುಕಲಿ ಬೆಂದು ನಿಂದನು

ಬೆವರ ಬೆಲೆಯನು ಮೌಲ್ಯಗೈದನು

ತವಕದಲ್ಲಿಹ ದುಡಿವ ಜೀವಿಯ

ನೋವನರಿತನವ

ದವಸ ಧಾನ್ಯವ ಹಂಚಿ ಸಲುಹಿದ

ಸವೆದ ಚೇತನ ಮತ್ತೆಯುಕ್ಕಿಸಿ

ಭವದ ಕಾಯಕಯೋಗಿ ನಲುಮೆಯ ಬೆಸೆದು

ಹಿಗ್ಗಿದನು

ಧಮ೯ ಮರೆತವರಪ್ಪುತುಲಿದನು

ಮಮ೯ ತಿಳಿಸಿದ ಮನುಜ ನೀತಿಯ

ಕಮ೯ದೊಳಗಡಗಿರುವ ಮಹಿಮೆಯ ಬೋಧೆ

ಮಾಡಿದನು

ಚಮ೯ವಣ೯ದ ಭೇದವಡಗಿಸು

ತಿಮೆ೯ಯುಪದೇಶ ಬಿತ್ತಿಸುತಲಿ

ಕಮಿ೯ಯಾದನು ಮಾನವೀಯತೆಯುಳಿಸಿ

ಪೋಷಿಸಲು

ಮೂತ೯ರೂಪಲನಾಥರೆತ್ತುತ

ಸ್ವಾಥ೯ಲೋಭದ ಪರಿಧಿಯನಳಿಸು

ತಾತ೯ ಮನಗಳ ಬೇಡಿಕೆ ತಣಿಸುತಾದನು

ಮಹಾತ್ಮ

ಧೂತ೯ ಶಕ್ತಿಗಳುಕ್ತಿಯಿಂದಲಿ

ಸಾಥ೯ಕತೆ ನೀಡಿದ ಹರಸುತಲಿ

ವಾತೆ೯ ಹರಡಿದ ಕರುಣಿಸಿ

ಸಮಸಮಾಜದಧಿಕಾರ

ಕಾಯ ನಿಮ೯ಲ ಸೂತ್ರ ರೂಪಿಸಿ

ಮಾಯೆ ಭೌತಿಕದರಿವು ನಶ್ವರ

ಸಾಯುದೊಮ್ಮೆಗೆ ಗೋರಿ ಬಾಳದು

ಶಾಶ್ವತವೆಂದನು

ಛಾಯೆ ದಶಿ೯ಸಿ ನಿರಾಕಾರದಿ

ಪಾಯ ಹಾಕಿದ ನವ್ಯ ಭಕ್ತಿಗೆ

ಹಾಯಿದೀಪದಿ ಬದುಕು ಬೆಳಗುವ ದಿವ್ಯ

ಪೈಗಂಬರ್

ದ್ವಿತೀಯ ಬಹುಮಾನ ಪಡೆದ ಕವಿತೆರಚನೆ-ಎ.ಎ ದರ್ಗಾ,ಧಾರವಾಡ…..

ತಿರ್ಮೆ (ಇಮೆ೯)=ಸುಂದರ, ದಿವ್ಯ

🌹💐🌹💐🌹💐🌹💐

✍🏼ಎ.ಎ. ದಗಾ೯, ಧಾರವಾಡ.

ಮೊ.ನಂ. 7411422720,

8123882052

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button