“ಶಾಂತಿದೂತ ಪೈಗಂಬರ್”…..

ಪ್ರಥಮ ಬಹುಮಾನ ಪಡೆದ ಕವಿತೆ…..
ಮರುಭೂಮಿಯ ಮರಳಿನಲ್ಲಿ ಮೂಡಿತೊಂದು ಬೆಳಕು ಮಾನವ ಹೃದಯಕ್ಕೆ ತೋರಿದ ದಾರಿದೀಪ ಸೊಗಸು ಕರುಣೆ ನುಡಿಯೊಂದೆ ಸಾಕು ಪ್ರೀತಿಗಿಂತ ಮತ್ತೇನು ಬೇಕು ಶಾಂತಿಯ ಸಂದೇಶವ ಜಗಕೆ ನೀ ಸಾರಿದೆ ನೀವೇ ಅಲ್ಲವೇ ಪೈಗಂಬರ್ //೧//
ಕಲ್ಲು ಎಸೆದವರಿಗೆ ಹಣ್ಣು ಕೊಟ್ಟು ನ್ಯಾಯವನೆ ನಡಿಗೆ ಮಾಡಿ ಪ್ರೀತಿ, ಸಹನೆ ದಯೆಯ ಬೀಜವ ಬಿತ್ತಿದೆ ಜಗಕೆ ಪ್ರೀತಿಯ ಬದುಕಿನ ಪಾಠ ಕಲಿಸಿದೆ ನೀವೇ ಅಲ್ಲವೇ ಪೈಗಂಬರ್ //೨//
ಮಾನವೀಯ ತತ್ವಗಳ ಜಗಕೆ ಸಾರಿದೆ ಮನಸ್ಸು ಮನಸ್ಸುಗಳ ಮಧ್ಯದಲಿ ನೆಲೆಸಿದೆ ಬೇದ ಭಾವಗಳ ತೊರೆದು ಒಂದುಗೂಡಿಸಿದೆಪ್ರೀತಿಯಿಂದ ಮಕ್ಕಳ ಅಪ್ಪಿ ಒಪ್ಪಿದೆ ನೀವೇ ಅಲ್ಲವೇ ಪೈಗಂಬರ್ //೩//
ನೆರೆಯವರ ಹಸಿವ ನೀಗಿಸಿದೆ ದಾರಿಯಲಿ ನಡೆವಾಗ ಮುಳ್ಳುತೆಗೆಸಿದೆ ಅನಾಥ ಮಕ್ಕಳಿಗೆಲ್ಲ ತಂದೆ ಎನಿಸಿದೆ ವಿಧೇವಿಯರಿಗೊಂದು ಸ್ಥಾನ ಕಲ್ಪಿಸಿದೆ ನೀವೇ ಅಲ್ಲವೇ ಪೈಗಂಬರ್ //೪//
ಯಹೂದಿಗಳ ಹೆಣದ ದಿಬ್ಬಣ ಕಂಡು ಎದ್ದು ನಿಂತು ಗೌರವ ತೋರಿದೆ ಶತ್ರುಗಳ ಎದೆಯಲಿ ಮಿತ್ರಭಾವ ಬಿತ್ತಿದೆ ದೇವನೊಬ್ಬ ಕರುಣಾಮಯಿ ಎಂದು ಜಗಕೆ ಸಾರಿದೆ ನೀವೇ ಅಲ್ಲವೇ ಪೈಗಂಬರ್ //೫//
✍️ ಅಂಜಿನಪ್ಪ ಬಿ ಎಸ್
ಜಗಳೂರು (ತಾ) ದಾವಣಗೆರೆ (ಜಿಲ್ಲೆ)

