ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು – ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಿದರು.
ಢವಳಗಿ ನ.27




ಕನಕದಾಸರು ನಮ್ಮಿಂದ ಮರೆಯಾದರೂ ಅವರ ಕೀರ್ತನೆಗಳು, ಹಾಡುಗಳು ನಮ್ಮೊಂದಿಗೆ ಇಂದಿಗೂ ಜೀವಂತವಾಗಿವೆ. ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರಿಂದ ಅವರು ಹೆಚ್ಚಿನ ಹಾಡುಗಳನ್ನು ಶ್ರೀಕೃಷ್ಣನ ಬಗ್ಗೆಯೇ ಹಾಡಿದ್ದಾರೆ.
ಎಂದು ಸಹ ಶಿಕ್ಷಕರಾದ ಶ್ರೀಮತಿ ಎಸ್ ಎಸ್ ಅವಟಿ ಮಾತನಾಡಿದರು. ಢವಳಗಿ ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ಸಲ್ಲಿಸಿ ಮಾತನಾಡಿದರು.
ಕನಕದಾಸರು ಹಿಂದುಳಿದ ಸಮಾಜದಲ್ಲಿ ಹುಟ್ಟಿದ್ದರಿಂದ ಅವರಿಗೆ ಮೇಲ್ವರ್ಗದವರು ಶ್ರೀಕೃಷ್ಣನ ಪೂಜೆ ಮಾಡಲು ನಿರಾಕರಿಸಿದಾಗ ಕನಕದಾಸರು ದೇವಸ್ಥಾನದ ಹಿಂದೆ ಹೋಗಿ ಕೃಷ್ಣನ ಭಜನೆಯನ್ನು ಪ್ರಾರಂಭಿಸಿದಾಗ ಅವರ ಭಕ್ತಿಗೆ ಒಲಿದು ಗೋಡೆ ಒಡೆದು ಶ್ರೀ ಕೃಷ್ಣನು ಕನಕದಾಸರಿಗೆ ಪ್ರತ್ಯಕ್ಷದರಿಸಿ ಆಶೀರ್ವಾದ ಮಾಡಿದರೆಂದು ಇತಿಹಾಸ ಇದೆ. ಎಂದು ವಿದ್ಯಾರ್ಥಿಗಳಿಗೆ ದಾಸರ ಬಗ್ಗೆ ವಿವರಿಸಿದರು.
ಇದೇ ವೇಳೆಯಲ್ಲಿ ಮುಖ್ಯ ಗುರುಗಳಾದ ರಮೇಶ ಮೂಲಿಮನಿ, ಮತ್ತು ಸಹ ಶಿಕ್ಷಕರಾದ ಜೆ ಎಸ್ ಪಾಟೀಲ, ಬಿ ಎಸ್ ಪಾಟೀಲ, ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.
