🚨BREAKING NEWS | ಬ್ರೇಕಿಂಗ್ ನ್ಯೂಸ್🚨 💥ಕುಂದಾಪುರ ಸಂಗಮ್ ಬ್ರಿಡ್ಜ್ ಕೆಳಗೆ ನದಿ ನೀರಿನಲ್ಲಿ ವಿಷಕಾರಿ ರಾಸಾಯನಿಕ ಪತ್ತೆ – ಪಂಚಗಂಗಾವಳಿ ನದಿ ಪಾತ್ರದಲ್ಲಿ ಭಾರಿ ಆತಂಕ..!💥

ಉಡುಪಿ/ಕುಂದಾಪುರ ನ.27

ಇಲ್ಲಿನ ಸಂಗಮ್ ಸೇತುವೆ (ಬ್ರಿಡ್ಜ್) ಕೆಳ ಭಾಗದ ಪಂಚಗಂಗಾವಳಿ ನದಿ ಪಾತ್ರದಲ್ಲಿ ಕಳೆದ ಒಂದು ವಾರದಿಂದ ಕಡು ಕೆಂಪು ಹಾಗೂ ಗುಲಾಬಿ ಬಣ್ಣದ ನಿಗೂಢ ವಿಷ ಪೂರಿತ ರಾಸಾಯನಿಕ ಪದಾರ್ಥ ತೇಲುತ್ತಿರುವುದು ಕಂಡು ಬಂದಿದ್ದು, ಸ್ಥಳೀಯರು ಹಾಗೂ ಮೀನುಗಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಘಟನೆಯ ವಿವರ:-

ಸಂಗಮ್ ಬ್ರಿಡ್ಜ್ ಸಮೀಪ ನದಿಯ ನೀರು ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗಿದ್ದು, ಮೇಲ್ಮೈಯಲ್ಲಿ ದಟ್ಟವಾದ ರಾಸಾಯನಿಕ ಪದರ ತೇಲುತ್ತಿದೆ. ಚರಂಡಿ ಮಾರ್ಗದ ಮೂಲಕ ಸಂಸ್ಕರಿಸದ ಕಲುಷಿತ ನೀರು, ಹೋಟೆಲ್, ಆಸ್ಪತ್ರೆ ಅಥವಾ ಕೈಗಾರಿಕಾ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಬಿಡುತ್ತಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಶಂಕಿಸಿದ್ದಾರೆ.

ಜಲ ಚರಗಳಿಗೆ ಕಂಟಕ ಸ್ಥಳೀಯರ ಆಕ್ರೋಶ:-

ಪವಿತ್ರ ಪಂಚಗಂಗಾವಳಿ ನದಿಗೆ ವಿಷಕಾರಿ ತ್ಯಾಜ್ಯ ಸೇರುತ್ತಿರುವುದರಿಂದ ನದಿಯಲ್ಲಿರುವ ಮೀನು ಸೇರಿದಂತೆ ಅಪಾರ ಪ್ರಮಾಣದ ಜಲ ಚರಗಳ ಪ್ರಾಣಕ್ಕೆ ಕುತ್ತು ಬಂದಿದೆ. ನದಿ ನೀರನ್ನೇ ನಂಬಿ ಬದುಕುತ್ತಿರುವ ಮೀನುಗಾರರ ಜೀವನೋಪಾಯಕ್ಕೂ ಇದರಿಂದ ದೊಡ್ಡ ಹೊಡೆತ ಬೀಳುವ ಭೀತಿ ಎದುರಾಗಿದೆ.

ತಕ್ಷಣದ ಕ್ರಮಕ್ಕೆ ಆಗ್ರಹ:-

ಕಳೆದ ಒಂದು ವಾರದಿಂದ ಈ ಸಮಸ್ಯೆ ಮುಂದುವರಿದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂದಾಪುರ ಪುರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತಾಲೂಕು ಆಡಳಿತ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸ ಬೇಕು. ನದಿಗೆ ರಾಸಾಯನಿಕ ತ್ಯಾಜ್ಯ ಹರಿ ಬಿಡುತ್ತಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button