ಪ್ರತಿಭಾ ಗ್ರಾಮ ಸೇವಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು – ಹಿಂದೂ ಜಾಗರಣ ವೇದಿಕೆ ಸೋಮಲಾಪುರ.
ಸೋಲಾಪುರ ಫೆ. 19

ಇಳಕಲ ತಾಲೂಕಿನ ಕಂದಗಲ ಸಮೀಪದ ಸೋಮಲಾಪುರ ಗ್ರಾಮದಲ್ಲಿ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. RSS ಯುವ ಮುಖಂಡರಾದ ಮೌನೇಶ್ ಬಡಿಗೇರ ಮಾತನಾಡಿದರು. ನಾವೆಲ್ಲ ಹಿಂದೂ ನಾವೆಲ್ಲ ಒಂದು ಒಂದೇ ತಾಯಿ ಮಕ್ಕಳಂತೆ ಜಾತಿ ಭೇದ ಭಾವವಿಲ್ಲದೆ ನಾವೆಲ್ಲರೂ ಅಖಂಡ ಭಾರತ ಕನಸಿನೊಂದಿಗೆ ಹೋಗೋಣ ಎಂದು ಯುವಕರಲ್ಲಿ ಉತ್ಸಹ ನೀಡುತ್ತಾ ಈ ಕಾರ್ಯಕ್ರಮಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ ಅನ್ನು ಮುಖಾಂತರ ತಮ್ಮ ಎರಡು ಮಾತುಗಳನ್ನು ಹೇಳಿದರು. ನಮ್ಮ ಸಂಸ್ಥೆಗೆ ಛತ್ರಪತಿ ಶಿವಾಜಿ ಮಹಾ ರಾಜರ ಫೋಟೋ ಕೊಡುಗೆ ನೀಡಿದ ಕಿರಣ್.ಗು ಅಂಗಡಿ ಇವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಅಮರೇಶ್ ಅಂಗಡಿ ಕಾಸಿಂಸಾಬ್ ತುರಮರಿ ಅಮರೇಶ್ ಹೂಗಾರ್ ಸಂಗನಗೌಡ ತೋವಿ ಮಂಜುನಾಥ್ ಹಂಚಿನಾಳ ಮಡಿವಾಳಪ್ಪ ಮಡಿವಾಳ ವಿನೋದ್ ಅಂಗಡಿ ಪ್ರಭು ಎರಡತ್ತಿನ ರಮೇಶ್ ಇಟಗಿ ಬಸವರಾಜ್ ಹೂನೂರ ಮಂಜುನಾಥ್ ಮಳಗಿ ಸುರೇಶ್ ಯಂಕನಗೌಡರು ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರಗೌಡ ಗೌಡರ ನೇತೃತ್ವದಲ್ಲಿ ಆಚರಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್