ದ.ಸಂ.ಸ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳ ಮೂಲಕ ಜಾಗೃತಿ ಗೊಳಿಸಬೇಕು – ಎಂ.ವಿ ಭವಾನಿ.
ತುಪ್ಪುರು ಅ.25

ದಲಿತ ಚಳುವಳಿಗೆ ಸೇರಿದ ಪ್ರತಿಯೊಬ್ಬರು ಮನಸ್ಸಿಟ್ಟು ಯಾವುದೇ ಕೆಲಸ ಮಾಡಿದರೆ ಯಶಸ್ಸು ಕಾಣುತ್ತಿವೆ ಎಂದು ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿಯಾದ ಎಂ.ವಿ ಭವಾನಿ ರವರು ಹೇಳಿದರು. ಅವರು ಗುರುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದ ಹೋಬಳಿ ತುಪ್ಪುರು ಗ್ರಾಮದಲ್ಲಿ ಏರ್ಪಡಿಸಿದ್ದ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ನೂತನ ಗ್ರಾಮ ಶಾಖ ರಚನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘಟನೆಯ ಕಾರ್ಯಕರ್ತರಿಗೆ ಮತ್ತು ನಾಯಕತ್ವ ವಹಿಸಿರುವ ನಾಯಕರುಗಳಿಗೆ ಕಾರ್ಯಾಗಾರ ಹಾಗೂ ತರಬೇತಿ ಶಿಬಿರಗಳ ಮೂಲಕ ನಾಯಕತ್ವ ಮತ್ತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಲ್ಲರೂ ಸಹ ಒಗ್ಗಟ್ಟಿನಿಂದ ಇದ್ದರೆ ನಾವು ಯಾವುದೇ ರೀತಿಯ ಸಮಸ್ಯೆಯಾದರೂ ಎದುರಿಸಬಹುದು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊ,ಬಿ ಕೃಷ್ಣಪ್ಪ ಸ್ಥಾಪಿತ ರಿಜಿಸ್ಟರ್ ನಂಬರ್ 386 /2020 -21, ಸಂಘಟನೆಯ ತುಪ್ಪುರು ಗ್ರಾಮ ಶಾಖೆ ರಚನೆ ಮಾಡಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಗ್ರಾಮ ಶಾಖೆ ಸಂಚಾಲಕರಾಗಿ ಚರಣ್ ಕುಮಾರ್, ಸಂಘಟನಾ ಸಂಚಾಲಕರಾಗಿ ಸುನಿಲ್, ಸಂಘಟನಾ ಸಂಚಾಲಕರಾಗಿ ಸುನಿಲ, ಖಜಾಂಚಿಯಾಗಿ ಪ್ರದೀಪ್, ಹಾಗೂ ಮೇಗುಂದ ಹೋಬಳಿ ಸಂಚಾಲಕರಾಗಿ ಉಮೇಶ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾಗೂ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ನೂತನ ಸಂಚಾಲಕರಾಗಿ ಜ್ಯೋತಿ ರೇಷನ್, ಸಂಘಟನಾ ಸಂಚಾಲಕಿಯಾಗಿ ಸವಿತಾ ಟಿ, ಹಾಗೂ ಭಾಗ್ಯ, ಖಜಾಂಚಿಯಾಗಿ ಶೋಭಾ ಹಾಗೂ ಮೇಳಗುಂದ ಹೋಬಳಿ ಮಹಿಳಾ ಒಕ್ಕೂಟದ ಸಂಚಾಲಕೆಯಾಗಿ ಜಾನಕಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಸುದ್ದಿ ಯಾಗಿರುತ್ತದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್. ತರೀಕೆರೆ.ಚಿಕ್ಕಮಗಳೂರು